ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ರಾಷ್ಟ್ರೀಯ ಆಯೋಗವು ಆಡಳಿತದಿಂದ ವರದಿ ಕೇಳಿದೆ !

ಒಡಿಶಾದಲ್ಲಿ ೧೧ ಅಪ್ರಾಪ್ತ ಹಿಂದೂ ಮಕ್ಕಳ ಮತಾಂತರಕ್ಕೆ ಯತ್ನಿಸಿದ ಪ್ರಕರಣ

ಭುವನೇಶ್ವರ್ (ಒಡಿಶಾ) – ಒಡಿಶಾದ ಜಗತಸಿಂಗಪುರದ ಕಾಟೇಸಿಂಗಪುರ ಗ್ರಾಮದಲ್ಲಿ ಕೆನಡಾದ ನಾಗರಿಕ ಎಪೆನ ಮೋಹನ ಕಿಡಾಂಗಲೀಲ ಇತನು ಇಬ್ಬರು ಕ್ರೈಸ್ತ ಧರ್ಮೊಪದೇಶಕರ ಮೂಲಕ ೧೧ ಅಪ್ರಾಪ್ತ ಹಿಂದೂ ಮಕ್ಕಳನ್ನು ಮತಾಂತರಿಸಲು ಯತ್ನಿಸಿದ್ದಾನೆ. ಎಂದು ವಾರ್ತೆ ಪ್ರಕಟವಾದ ನಂತರ, ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (‘ಎನ್.ಸಿ.ಪಿ.ಸಿ.ಆರ್’ಯು) ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಗತಸಿಂಗಪುರದ ಆಡಳಿತಕ್ಕೆ ಪತ್ರ ಬರೆದಿದೆ. ಈ ಮಕ್ಕಳಿಗೆ ಸಂಬಂಧಿಸಿದ ಮಾಹಿತಿಯನ್ನು ಆಯೋಗಕ್ಕೆ ಸಲ್ಲಿಸಬೇಕು ಎಂದೂ ಆದೇಶಿಸಲಾಗಿದೆ.

ಮತಾಂತರದ ವಿಷಯ ತಿಳಿದ ವಿಶ್ವಹಿಂದೂ ಪರಿಷತ್ತಿನ ಕಾರ್ಯಕರ್ತರು ಕಿಡಂಗಲೀಲನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಘಟನೆ ಜೂನ್ 24. ೨೦೨೩ ರಂದು ನಡೆದಿದೆ. ಕಿಡಂಗಲೀಲನಿಂದ ನಗದು, ದಾಖಲೆಗಳು, ಬೈಬಲ್‌ಗಳು ಇತ್ಯಾದಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ಸಂಪಾದಕೀಯ ನಿಲುವು

ಒಬ್ಬ ವಿದೇಶಿ ನಾಗರಿಕನು ಭಾರತಕ್ಕೆ ಬಂದು ಹಿಂದೂಗಳನ್ನು ಮತಾಂತರ ಮಾಡುತ್ತಾನೆ, ಆದರೂ ಅವನ ಬಗ್ಗೆ ಗುಪ್ತಚರ ಸಂಸ್ಥೆಗಳಿಗೆ ಹೇಗೆ ತಿಳಿಯಲಿಲ್ಲ ? ಸರಕಾರ ಈ ಬಗ್ಗೆಯೂ ತನಿಖೆ ನಡೆಸಬೇಕು !