ಜಾಗತಿಕ ಮಟ್ಟದಲ್ಲಿ ಜುಲೈ 3 ಇಲ್ಲಿಯ ವರೆಗಿನ ಅತ್ಯಂತ ಉಷ್ಣ ದಿನವಾಗಿದೆ !

ಈಗಲೇ ಇದರ ಮೇಲೆ ಲಗಾಮು ಹಾಕದಿದ್ದರೆ ಪರಿಸ್ಥಿತಿಯು ಇನ್ನೂ ಭಯಾನಕವಾಗುವುದು ಹಾಗೂ ಮುಂದಿನ ಪೀಳಿಗೆಯ ಜೀವಕ್ಕೆ ಕಂಟಕವಾಗಬಹುದು, ಎಂಬುದನ್ನು ಅರಿಯಿರಿ !

ಜುಲೈ 3 ರಂದು ಜಾಗತಿಕ ಸರಾಸರಿ ಸಮುದ್ರ ಮೇಲ್ಮೈ ತಾಪಮಾನ ವೈಪರೀತ್ಯ

ಲಂಡನ್ (ಇಂಗ್ಲೆಂಡ್) – ಜಾಗತಿಕ ಮಟ್ಟದಲ್ಲಿ ಸರಾಸರಿ ತಾಪಮಾನದಲ್ಲಿ ಕಳೆದ ಕೆಲವು ವರ್ಷಗಳಲ್ಲಿ ಅಪಾರ ಹೆಚ್ಚಳವಾಗಿದ್ದು ತಾಪಮಾನದ ನೋಂದಣಿಯು ಆರಂಭವಾದಾಗಿನಿಂದ ಅಂದರೆ ಕಳೆದ 125 ವರ್ಷಗಳಿಂದ ಜುಲೈ 3, ಇಲ್ಲಿಯ ವರೆಗಿನ ಅತ್ಯಂತ ಉಷ್ಣ ದಿನವಾಗಿದೆ. `ಯು. ಎಸ್. ನ್ಯಾಶನಲ್ ಸೆಂಟರ್ಸ್ ಫಾರ್ ಎನ್ವಿರಾನ್ಮೆಂಟಲ್ ಪ್ರೆಡಿಕ್ಷನ್’ನ ಅನುಸಾರ ಜಗತ್ತಿನಾದ್ಯಂತದ ಸರಾಸರಿ ತಪಮಾನವು 17.01 ಅಂಶ ಸೆಲ್ಸಿಯಸನಷ್ಟು ನೊಂದಣಿಯಾಗಿದೆ. `ಎಲ್-ನಿನೋ’ ಪರಿಣಾಮ ಹಾಗೂ `ಕಾರ್ಬನ್ ಡೈಆಕ್ಸೈಡ್’ನ ಹೆಚ್ಚಿನ ಹೊರಸೂಸುವಿಕೆಯಿಂದಾಗಿ ಈ ಹೆಚ್ಚಳವಾಗಿರುವ ನಿರೀಕ್ಷಣೆಯನ್ನು ವಿಜ್ಞಾನಿಗಳು ನೋಂದಾಯಿಸಿದ್ದಾರೆ. ಈ ಹಿಂದೆ ಆಗಸ್ಟ್ 2016 ರಂದು 16.92 ಅಂಶ ಸೆಲ್ಸಿಯಸ್ ತಾಪಮಾನವು ಎಲ್ಲಕ್ಕಿಂತ ಹೆಚ್ಚಾಗಿತ್ತು. ಬರುವ ಎರಡೂವರೆ ವರ್ಷಗಳಲ್ಲಿ ತಾಪಮಾನದ ದಾಖಲೆಯು ಪುನಃ ಪುನಃ ಮುರಿಯುವುದರ ಸಾಧ್ಯತೆಯನ್ನು ಹೇಳಲಾಗಿದೆ.

1. ಈ ವರ್ಷದ ಆರಂಭದಲ್ಲಿ ಸ್ಪೇನಿನಲ್ಲಿ ಹೆಚ್ಚಿದ ದಾಖಲೆಯ ಉಷ್ಣತೆ ಹಾಗೂ ಆನಂತರ ಹೆಚ್ಚಿನ ದೇಶಗಳಲ್ಲಿ ಸಮುದ್ರದ ಉಷ್ಣತೆಯ ಅಲೆ ಬಂದಿದೆ. ಇದು ಕಡಿಮೆಯಾಗುವುದು ಕಂಡುಬರುವುದಿಲ್ಲ. ಚೀನಾದಲ್ಲಿ ಇದೇ ವಾರದಲ್ಲಿ ಅನೇಕ ಕಡೆಗಳಲ್ಲಿ 35 ಅಂಶ ಸೆಲ್ಸಿಯಸ್ ಗಿಂತಲೂ ಹೆಚ್ಚಿನ ತಾಪಮಾನವಿತ್ತು. ಅಮೆರಿಕಾದಲ್ಲಿನ ದಕ್ಷಿಣ ಭಾಗದಲ್ಲಿಯೂ ಅಪಾರ ಪ್ರಮಾಣದಲ್ಲಿ ಉಷ್ಣತೆಯಲ್ಲಿ ಹೆಚ್ಚಳವಾಗಿದೆ.

2. ವಿಜ್ಞಾನಿಗಳು ಹೇಳಿದಂತೆ ಜೂನ್ ತಿಂಗಳಿನಲ್ಲಿ `ಎಲ್-ನಿನೋ’ದ ಪರಿಣಾಮವು ಕಂಡುಬರಲು ಆರಂಭವಾಗಿದೆ. ಅಂದರೆ ಪೆಸಿಫಿಕ್ ಮಹಾಸಾಗರದಲ್ಲಿ ಹೆಚ್ಚಿನ ಉಷ್ಣತೆಯು ನಿರ್ಮಾಣವಾಗಿದೆ. ಇದರಿಂದಾಗಿ ಜಾಗತಿಕ ಸರಾಸರಿ ತಾಪಮಾನದಲ್ಲಿ ಹೆಚ್ಚಳವಾಗಿದೆ.

3. ಹೆಚ್ಚುತ್ತಿರುವ ತಾಪಮಾನದ ಪರಿಣಾಮವು ಎರಡೂ ಧ್ರುವಗಳಲ್ಲಿ ಆಗುತ್ತಿದೆ. ಅಂಟಾರ್ಟಿಕನಲ್ಲಿ ಜುಲೈ ತಿಂಗಳಿನ ದಾಖಲೆ ಮುರಿದಿದ್ದು ಇಲ್ಲಿ 8.7 ಅಂಶ ಸೆಲ್ಸಿಯಸ್ ತಾಪಮಾನವನ್ನು ನೊಂದಾಯಿಸಲಾಗಿದೆ.

`ಎಲ್-ನಿನೋ’ ಅಂದರೆ ಏನು ?

ಕೇಂದ್ರೀಯ ಹಾಗೂ ಪೂರ್ವ ಪೆಸಿಫಿಕ ಮಹಾಸಾಗರದ ಉಷ್ಣತೆಯ ಕ್ಷೇತ್ರದಲ್ಲಿ ನೀರು ಅಪಾರ ಪ್ರಮಾಣದಲ್ಲಿ ಬಿಸಿಯಾಗುತ್ತಿರುವ ಪ್ರಕ್ರಿಯೆಯನ್ನು `ಎಲ್-ನಿನೋ’ಎಂದು ಹೇಳಲಾಗುತ್ತದೆ. ಈ ಪ್ರಕ್ರಿಯೆಯು ನಿಯಮಿತವಾಗುತ್ತಿದ್ದು 2 ವರ್ಷದಿಂದ ಒಂದು ದಶಕದಲ್ಲಿ ಯಾವಾಗ ಬೇಕಾದರೂ ಆಗುತ್ತದೆ. ಈ ಪ್ರಕ್ರಿಯೆಯು ಪ್ರತಿ ಬಾರಿಯೂ ವಿಭಿನ್ನವಾಗಿರುತ್ತದೆ. ಇದರಿಂದ ಜಾಗತಿಕ ಸರಾಸರಿ ತಾಪಮಾನದಲ್ಲಿ ಹೆಚ್ಚಳವಾಗುತ್ತದೆ.