ರಾಷ್ಟ್ರವಾದಿ ಕಾಂಗ್ರೆಸ್ ನಲ್ಲಿ ಬಿರುಕು : ಅಜಿತ ಪವಾರ ಇವರ ಸಹಿತ ೯ ನಾಯಕರು ಸರಕಾರದಲ್ಲಿ ಸಹಭಾಗಿ !

  • ಅಜಿತ ಪವಾರ ಇವರನ್ನು ಉಪಮುಖ್ಯಮಂತ್ರಿ ಸ್ಥಾನಕ್ಕೆ ನೇಮಕ : ಎಲ್ಲರಿಗೂ ಸಚಿವ ಸ್ಥಾನ !

  • ರಾಷ್ಟ್ರವಾದಿ ಕಾಂಗ್ರೆಸ್ಸಿನ ೫೪ ರಲ್ಲಿ ೩೦ ಶಾಸಕರ ಬೆಂಬಲ ಇದೆ ಎಂದು ಅಜಿತ ಪವಾರ ಇವರ ದಾವೆ !

  • ಛಗನ ಭುಜಬಳ, ದಿಲೀಪ್ ವಳಸೆ-ಪಾಟೀಲ, ಧನಂಜಯ ಮುಂಡೆ ಮುಂತಾದವರ ಸಮಾವೇಶ !

  • ಮಹಾರಾಷ್ಟ್ರದ ರಾಜಕಾರಣಕ್ಕೆ ತಿರುವು !

ಮುಂಬಯಿ – ರಾಷ್ಟ್ರವಾದಿ ಕಾಂಗ್ರೆಸ್ಸಿನ ನಾಯಕ ಹಾಗೂ ವಿಧಾನಸಭೆಯ ವಿರೋಧಿ ಪಕ್ಷದ ನಾಯಕ ಅಜಿತ ಪವಾರ ಇವರು ಜುಲೈ ೨ ರಂದು ಅವರ ೯ ಶಾಸಕರ ಸಹಿತ ಶಿಂದೆ-ಫಡಣವಿಸ ಸರಕಾರದಲ್ಲಿ ಸಹಭಾಗಿಯಾದರು. ಸರಕಾರದಲ್ಲಿ ಸಹಭಾಗಿ ಆಗುತ್ತಲೇ ಪವಾರ ಇವರಿಗೆ ಉಪಮುಖ್ಯಮಂತ್ರಿ ಸ್ಥಾನದ ಜವಾಬ್ದಾರಿ ವಹಿಸಲಾಯಿತು. ಪವಾರ ಇವರ ಜೊತೆಗೆ ಛಗನ ಭುಜಬಳ, ದಿಲೀಪ ವಳಸೆ-ಪಾಟೀಲ, ಧನಂಜಯ ಮುಂಡೆ, ಅದಿತಿ ತಟಕರೆ, ಹಸನ ಮುಶ್ರೀಫ, ಧರ್ಮರಾವಬಾಬಾ ಆತ್ರಾಮ, ಸಂಜೆ ಬಲಸೋಡೇ ಮತ್ತು ಅನಿಲ ಬಾಯಿದಾಸ ಪಾಟಿಲ್ ಈ ನಾಯಕರು ಕೂಡ ಸರಕಾರದಲ್ಲಿ ಪ್ರವೇಶ ಪಡೆದರು. ಮತ್ತು ರಾಜ್ಯಪಾಲ ಬೈಸೆ ಇವರು ನಾಯಕರಿಗೆ ಪ್ರಮಾಣವಚನ ನೀಡಿದರು. ಈ ಘಟನೆಯಿಂದ ಮಹಾರಾಷ್ಟ್ರದ ರಾಜಕಾರಣದಲ್ಲಿ ಗೊಂದಲ ಸೃಷ್ಟಿಯಾಗಿ ರಾಜ್ಯದ ರಾಜಕಾರಣಕ್ಕೆ ಹೊಸ ತಿರವು ಸಿಕ್ಕಿದೆ.

ಅಜಿತ ಪವಾರ ಇವರ ನಿವಾಸ ಸ್ಥಾನದಲ್ಲಿ ಕೆಲವು ಶಾಸಕರ ಮತ್ತ ಕಾರ್ಯಕರ್ತರಲ್ಲಿ ಸಭೆ ನಡೆಯಿತು. ಅದರ ನಂತರ ಅವರು ತಕ್ಷಣ ರಾಜಭವನದಲ್ಲಿ ರಾಜ್ಯಪಾಲರನ್ನು ಭೇಟಿ ಮಾಡಿ ಸರಕಾರಕ್ಕೆ ಬೆಂಬಲ ಸೂಚಿಸಿದರು. ಆ ಸಮಯದಲ್ಲಿ ಅವರ ಜೊತೆಗೆ ಉಪಮುಖ್ಯಮಂತ್ರಿ ದೇವೇಂದ್ರ ಫಡಣವಿಸ ಇವರು ಕೂಡ ಉಪಸ್ಥಿತರಿದ್ದರು. ರಾಷ್ಟ್ರವಾದಿ ಕಾಂಗ್ರೆಸ್ ನಲ್ಲಿ ಬಿರುಕು ಮೂಡಿದ್ದು ರಾಷ್ಟ್ರವಾದಿ ಕಾಂಗ್ರೆಸ್ಸಿನ ರಾಷ್ಟ್ರೀಯ ಅಧ್ಯಕ್ಷ ಶರದ ಪವಾರ ಇವರಿಗೆ ದೊಡ್ಡ ಆಘಾತ ಎಂದು ತಿಳಿಯಲಾಗುತ್ತಿದೆ.

ಅಜಿತ ಪವಾರ ಇವರ ಅಸಮಾಧಾನ ಕಾರಣ !

ಅಜಿತ ಪವಾರ ಇವರು ಕೆಲವು ದಿನಗಳ ಹಿಂದೆ ಶರದ ಪವಾರ ಇವರ ಬಳಿ ನನಗೆ ವಿರೋಧ ಪಕ್ಷದ ನಾಯಕನ ಜವಾಬ್ದಾರಿ ಸ್ಥಾನದಿಂದ ಮುಕ್ತಗೊಳಿಸಿರಿ ಮತ್ತು ಪಕ್ಷ ಸಂಘಟನೆಯ ಜವಾಬ್ದಾರಿ ನೀಡಿರಿ ಎಂದು ಮನವಿ ಮಾಡಿಕೊಂಡಿದ್ದರು. ಇದರ ನಂತರ ಅಜಿತ ಪವಾರ ಅವರ ಪಕ್ಷದಲ್ಲಿ ಮುಸುಕಿನ ಗುದ್ದಾಟದ ಚರ್ಚೆ ಆರಂಭವಾದವು.

೩೦ ಶಾಸಕರ ಬೆಂಬಲ ಇರುವ ದಾವೆ !

ರಾಷ್ಟ್ರವಾದಿ ಕಾಂಗ್ರೆಸ್ಸಿನ ಅನೇಕ ಶಾಸಕರು ಮತ್ತು ನಾಯಕರು ಈ ಶಪಥವಿಧಿ ಸಮಾರಂಭದಲ್ಲಿ ಉಪಸ್ಥಿತರಿದ್ದರು. ರಾಷ್ಟ್ರವಾದಿ ಕಾಂಗ್ರೆಸ್ಸಿನ ೫೪ ರಲ್ಲಿ ೩೦ ಶಾಸಕರ ಬೆಂಬಲ ಇರುವುದಾಗಿ ಅಜಿತ ಪವಾರ ಇವರು ದಾವೆ ಮಾಡಿದ್ದಾರೆ.