ತುಮಕೂರು – ಅಲ್ಲಾನ ಕೃಪೆಯಿಂದ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಿದೆ. ನಿಮ್ಮ ಆಶೀರ್ವಾದದಿಂದ ನಾನು ಗೃಹಸಚಿವನಾಗಿದ್ದೇನೆ. ದೇವರ ಆಶೀರ್ವಾದ ಇಲ್ಲದೆ ಇದ್ದರೆ ನಾನು ಶಾಸಕನಾಗುತ್ತಿರಲಿಲ್ಲ, ಎಂದು ರಾಜ್ಯದ ಗೃಹ ಸಚಿವ ಜಿ. ಪರಮೇಶ್ವರ್ ಇವರು ಹೇಳಿಕೆ ನೀಡಿದರು. ಬಕ್ರಿದ್ ಪ್ರಯುಕ್ತ ಕೊರಟಗೆರೆ ಗ್ರಾಮದಲ್ಲಿನ ಈದ್ಗಾಹ ಮೈದಾನದಲ್ಲಿ ನಡೆದಿರುವ ಸಾಮೂಹಿಕ ನಮಾಜ್ ನಲ್ಲಿ ಸಹಭಾಗಿ ಆಗಿ ಮುಸಲ್ಮಾನರಿಗೆ ಶುಭಾಷಯ ಕೋರಿದರು. ಆ ಸಮಯದಲ್ಲಿ ಮುಸಲ್ಮಾನರು ಪರಮೇಶ್ವರ ಇವರಿಗೆ ಟೋಪಿ ಹಾಕಿ ‘ಮುಖ್ಯಮಂತ್ರಿ ಸ್ಥಾನ ದೊರೆಯಲಿ’ ಎಂದು ಶುಭಾಷಯ ನೀಡಿದರು. ಪರಮೇಶ್ವರರು ಮಾತು ಮುಂದುವರೆಸಿ, ಬಕ್ರಿದ್ ಹಬ್ಬ ತ್ಯಾಗ ಮತ್ತು ಬಲಿದಾನದ ಪ್ರತೀಕವಾಗಿದೆ. ‘ಅಲ್ಲಾ ಬೇರೆ ಬೇರೆ ರೀತಿಯಲ್ಲಿ ಪರೀಕ್ಷೆ ತೆಗೆದುಕೊಳ್ಳುತ್ತಾನೆ’, ಎಂದು ಹೇಳುತ್ತಾರೆ. ರಮಜಾನ್ ಸಮಯದಲ್ಲಿ ನಾನು ಇಲ್ಲಿಗೆ ಬಂದಿದ್ದೆ. ಆಗ ಚುನಾವಣೆ ಇರುವುದರಿಂದ ನಾನು ಮತ ಕೇಳಲು ಬಂದಿದ್ದೆ. ನೀವು ನನ್ನನ್ನು ಗೆಲ್ಲಿಸಿದ್ದೀರಿ. ಒಂದು ಕಡೆ ಹಿಂದಿನ ಸರಕಾರದಿಂದ ಮುಸಲ್ಮಾನರಿಗೆ ಚಿಂತೆ ಇತ್ತು. ಅವರಲ್ಲಿ ಭಯದ ವಾತಾವರಣ ಇತ್ತು. ಎಲ್ಲವನ್ನು ಲೆಕ್ಕಿಸದೆ ಮುಸಲ್ಮಾನರು ಕಾಂಗ್ರೆಸ್ಸಿಗೆ ಮತ ನೀಡಿದರು. ಕಾಂಗ್ರೆಸ್ ಜಾತ್ಯಾತೀತ ಪಕ್ಷವಾಗಿದೆ; ಆದ್ದರಿಂದ ಮುಸಲ್ಮಾನರು ನಮ್ಮ ಜೊತೆಗೆ ಇದ್ದಾರೆ. ಅವರಿಗೆ ನಾನು ಕೃತಜ್ಞತೆ ವ್ಯಕ್ತಪಡಿಸುತ್ತೇನೆ. ನಮ್ಮ ಮೇಲೆ ದೊಡ್ಡ ಜವಾಬ್ದಾರಿ ಇದೆ. ಅಭಿವೃದ್ಧಿಯ ಜೊತೆಗೆ ಶಾಂತಿ ಕೂಡ ಕಾಪಾಡಬೇಕಿದೆ. ಗೃಹಸಚಿವ ಎಂದು ನಾನು ಶಾಂತಿ ಕಾಪಾಡುವ ಕೆಲಸ ಮಾಡುವೆನು, ದ್ವೇಷಿಸುವುದಿಲ್ಲ ಎಂದು ಹೇಳಿದರು.
ಅಲ್ಲಾನ ಕೃಪೆಯಿಂದ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದಿದೆ : ಗೃಹ ಸಚಿವ ಡಾ. ಜಿ.ಪರಮೇಶ್ವರ್#Tumkuru #koratagere #bakridmubarak #Festival #drgparameshwar #homeminister #kannadanews #todayhttps://t.co/ij1GGll2sG
— Asianet Suvarna News (@AsianetNewsSN) June 30, 2023