ನಾಶಿಕ – ಜೂನ 29 ರಂದು ಬಕ್ರಿದ್ ನಿಮಿತ್ತ ನಗರದಲ್ಲಿ ಹಚ್ಚಲಾಗಿರುವ ಫಲಕದ ಮೇಲೆ `ಮಹಮ್ಮದ ಸುಫಿಖಾನ ರಜಾ ಫ್ರೆಂಡ್ ಸರ್ಕಲ್ ಗುಲಶನಾಬಾದ್’ ಎಂದು ಉಲ್ಲೇಖಿಸಲಾಗಿದೆ. ನಾಶಿಕ ನಗರವನ್ನು `ಗುಲಶನಾಬಾದ್’ ಎಂದು ಉಲ್ಲೇಖಿಸಿರುವುದು ಹಿಂದುತ್ವನಿಷ್ಠ ಸಂಘಟನೆಗಳಲ್ಲಿ ಆಕ್ರೋಶವು ಭುಗಿಲೆದ್ದಿವೆ.
ಮೊಗಲರ ಕಾಲದಲ್ಲಿ ನಾಸಿಕ್ ನಗರದ ಹೆಸರು `ಗುಲಶನಾಬಾದ’ ಎಂದು ಇತ್ತು. ತದನಂತರ ಪೇಶ್ವೆಯವರ ಕಾಲದಲ್ಲಿ `ಗುಲಶನಾಬಾದ್’ ನಾಮಕರಣವನ್ನು `ನಾಸಿಕ್’ ಎಂದು ಮಾಡಲಾಯಿತು; ಆದರೆ ತದನಂತರ ಈಗ ಅಕಸ್ಮಿಕವಾಗಿ ನಾಸಿಕ ಅನ್ನು `ಗುಲಶನಾಬಾದ್’ ಎಂದು ನಮೂದಿಸಿರುವುದು ಜನರಲ್ಲಿ ಆಶ್ಚರ್ಯ ವ್ಯಕ್ತಪಡಿಸಲಾಗುತ್ತಿದೆ. ಸಾಮಾಜಿಕ ಮಾಧ್ಯಮದಿಂದ ಈ ಕೃತ್ಯವನ್ನು ನಿಷೇಧವನ್ನು ವ್ಯಕ್ತಪಡಿಸುತ್ತಿವೆ.
ಸಂಪಾದಕರ ನಿಲುವುಔರಂಗಜೇಬನನ್ನು ಉದ್ದೇಶಪೂರ್ವಕವಾಗಿ ವೈಭವೀಕರಿಸುವುದು, ಅಫಝಲಖಾನನ ವಧೆಯ ಚಿತ್ರಕ್ಕೆ ವಿರೋಧಿಸುವುದು, `ಲವ್ ಪಾಕಿಸ್ತಾನ’ ಬರೆದಿರುವ ಬಲೂನುಗಳ ಮಾರಾಟ ಮಾಡುವುದು, ತ್ರ್ಯಂಬಕೇಶ್ವರ ದೇವಸ್ಥಾನದಲ್ಲಿ ಮತಾಂಧರು ನುಗ್ಗಲು ಪ್ರಯತ್ನಿಸುವುದು ಮತ್ತು ಈಗ ನಾಶಿಕ ಅನ್ನು `ಗುಲಶನಾಬಾದ್’ ಎಂದು ಉಲ್ಲೇಖಿಸುವುದು, ಈ ಎಲ್ಲವೂ ನಿಯೋಜಿತ ಷಡ್ಯಂತ್ರವೇ ಆಗಿದೆಯೇ ? ಎನ್ನುವುದನ್ನು ಪೊಲೀಸರು ವಿಚಾರಣೆ ನಡೆಸಬೇಕು. `ಈ ರೀತಿ ವಿಷಯಗಳು ಹಿಂದೂಗಳ ಮೇಲೆ ಪ್ರಾಬಲ್ಯ ಸಾಧಿಸಲು ಮತ್ತು ಅದರ ಮೂಲಕ ಭಯದ ವಾತಾವರಣವನ್ನು ನಿರ್ಮಾಣ ಮಾಡುವ ಪ್ರಯತ್ನವಾಗಿದೆ’ ಎಂದು ಯಾರಿಗಾದರೂ ಎನಿಸಿದರೆ ಅದರಲ್ಲಿ ತಪ್ಪೇನಿದೆ ? ಇಂತಹ ಘಟನೆ ನಡೆಯುತ್ತಿರುವುದು ಪೊಲೀಸರಿಗೆ ನಾಚಿಕೆಗೇಡು ! ಪೊಲೀಸರು ಇಂತಹ ಘಟನೆಗಳ ಮೂಲವನ್ನು ಹುಡುಕಿ ಸಂಬಂಧಪಟ್ಟವರ ಮೇಲೆ ಕಠಿಣ ಕ್ರಮಕೈಗೊಳ್ಳದೇ ಇದ್ದರಿಂದ ಮತಾಂಧರು ಕೊಬ್ಬುತ್ತಿದ್ದಾರೆ ! |