ಬಾಂಬ್ ಸ್ಪೋಟದ ಆರೋಪಿ ಅಬ್ದುಲ್ ನಸೀರ ಮದನಿಗೆ ಕೊಚ್ಚಿ (ಕೇರಳ) ಯಲ್ಲಿ ಮುಸಲ್ಮಾನರಿಂದ ಭವ್ಯ ಸ್ವಾಗತ !

ಮೊಕದ್ದಮೆಯ ವಿಚಾರಣೆಗಾಗಿ ಬೆಂಗಳೂರು ಪೊಲೀಸರು ಕೊಚ್ಚಿಗೆ ಕರೆ ತಂದಿದ್ದರು !

ಕೊಚ್ಚಿ (ಕೇರಳ) – ಅನೇಕ ಬಾಂಬ್ ಸ್ಫೋಟದ ಪ್ರಕರಣಗಳಲ್ಲಿ ಬಂಧಿತನಾಗಿರುವ ಜಿಹಾದಿ ಭಯೋತ್ಪಾದಕ ಅಬ್ದುಲ ನಸೀರ ಮದನಿ ಇವನಿಗೆ ಬೆಂಗಳೂರು ಪೊಲೀಸರು ಕೊಚ್ಚಿಗೆ ಕರೆ ತಂದಾಗ ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತ ಇರುವ ಮುಸಲ್ಮಾನರು ಅವನಿಗೆ ಭವ್ಯ ಸ್ವಾಗತ ಕೋರಿದರು. ಪ್ರಸಾರ ಮಾಧ್ಯಮಗಳಿಂದ ಅವನಿಗೆ ಒಬ್ಬ ಪ್ರಸಿದ್ಧ ವ್ಯಕ್ತಿಯ ಹಾಗೆ ಮಹತ್ವ ನೀಡುತ್ತಾ ಈ ಘಟನೆಯ ವಾರ್ತೆ ನೀಡಲಾಯಿತು. ಮದನಿ ಇವನನ್ನು ಮೊಕದ್ದಮೆಯ ಪ್ರಕರಣದಲ್ಲಿ ಬೆಂಗಳೂರಿನಿಂದ ಕೊಚ್ಚಿಗೆ ಕರೆತರಲಾಯಿತು. ಮಾಜಿ ಪೊಲೀಸ ಅಧಿಕಾರಿ ಭಾಸ್ಕರ ರಾವ್ ಇವರು ಒಂದು ಸಮಾಚಾರ ವಾಹಿನಿಯ ಪ್ರತಿನಿಧಿ ಜೊತೆ ಮಾತನಾಡುವಾಗ ‘ಒಬ್ಬ ಭಯೋತ್ಪಾದಕನಿಗೆ ಈ ರೀತಿಯ ಸ್ವಾಗತ ನೀಡುವುದು ಲಚ್ಚಾಸ್ಪದ’, ಎಂದು ಅವರು ಪ್ರತಿಕ್ರಿಯೆ ನೀಡಿದರು.

ಮದನಿ ಇವನು ಕೇರಳದಲ್ಲಿನ ‘ಪೀಪಲ್ಸ್ ಡೆಮೋಕ್ರಟಿಕ್ ಪಕ್ಷ’ದ ಅಧ್ಯಕ್ಷನಾಗಿದ್ದಾನೆ. ಕೊಯಿಮತ್ತೂರು ನಲ್ಲಿ ೧೯೯೮ ಮತ್ತು ಬೆಂಗಳೂರಿನಲ್ಲಿ ೨೦೦೮ ರಲ್ಲಿ ನಡೆದಿರುವ ಸರಣಿ ಬಾಂಬ್ ಸ್ಫೋಟದಲ್ಲಿ ಅವನ ಕೈವಾಡ ಇರುವುದರಿಂದ ಅವನನ್ನು ಬಂಧಿಸಲಾಗಿದೆ. ಈ ಸ್ಫೋಟದಲ್ಲಿ ೫೮ ಜನರು ಸಾವನ್ನಪ್ಪಿದ್ದರು ಹಾಗೂ ೨೦೦ ಕುಹೆಚ್ಚಿನ ಜನರು ಗಾಯಗೊಂಡಿದ್ದರು.

ಸಂಪಾದಕೀಯ ನಿಲುವು

  • ಇಂತಹ ಮಾನಸಿಕತೆ ಇರುವ ಜನರಿಂದ ಭವಿಷ್ಯದಲ್ಲಿ ಮತ್ತೆ ಮತ್ತೆ ಬಾಂಬ್ ಸ್ಫೋಟ್ ನಡೆದರೆ ಆಶ್ಚರ್ಯ ಪಡಬೇಕಿಲ್ಲ !
  • ಈ ಘಟನೆಯ ಬಗ್ಗೆ ಕಾಂಗ್ರೆಸ್, ಮಾರ್ಕ್ಸವಾದಿ ಕಮ್ಯುನಿಸ್ಟ್ ಪಕ್ಷ, ಸಮಾಜವಾದಿ ಪಕ್ಷ, ತೃಣಮೂಲ ಕಾಂಗ್ರೆಸ್ ಮುಂತಾದ ಜಾತ್ಯತೀತ ರಾಜಕೀಯ ಪಕ್ಷಗಳು ಬಾಯಿ ಬಿಡುವುದಿಲ್ಲ ಇದನ್ನು ತಿಳಿಯಿರಿ !