ನ್ಯೂಯಾರ್ಕ್‌ನ ಶಾಲೆಗಳಿಗೆ ದೀಪಾವಳಿ ರಜೆ !

ನ್ಯೂಯಾರ್ಕ್ (ಅಮೇರಿಕ) – ನ್ಯೂಯಾರ್ಕ್‌ನಲ್ಲಿ ಶಾಲೆಗಳಿಗೆ ದೀಪಾವಳಿ ರಜೆ ನೀಡುವ ಮಸೂದೆಯನ್ನು ರಾಜ್ಯದ ವಿಧಾನಸಭೆಯಲ್ಲಿ ಅಂಗೀಕರಿಸಲಾಗಿದೆ. ನ್ಯೂಯಾರ್ಕ್‌ನ ಮೇಯರ್ ಎರಿಕ್ ಆಡಮ್ಸ್ ಅವರು ಈ ಮಾಹಿತಿ ನೀಡಿದ್ದಾರೆ. ರಾಜ್ಯಪಾಲರ ಹಸ್ತಾಕ್ಷರದ ನಂತರ ಎಲ್ಲ ಶಾಲೆಗಳಿಗೆ ಈ ಆದೇಶ ಜಾರಿಯಾಗಲಿದೆ.

೧. ಈ ನಿರ್ಧಾರದಿಂದ ನ್ಯೂಯಾರ್ಕ್‌ನಲ್ಲಿ ವಾಸಿಸುವ ೨ ಲಕ್ಷಕ್ಕೂ ಹೆಚ್ಚು ಕುಟುಂಬಗಳಿಗೆ ಹಬ್ಬವನ್ನು ಉತ್ತಮ ರೀತಿಯಲ್ಲಿ ಆಚರಿಸುವ ಅವಕಾಶ ಸಿಗಲಿದೆ, ದೀಪಾವಳಿಯಂದು ರಜೆ ಘೋಷಿಸುವ ಈ ಹೋರಾಟದಲ್ಲಿ ಸ್ಥಳೀಯ ಸಮುದಾಯ ಮತ್ತು ವಿಧಾನಸಭೆಯ ಸದಸ್ಯೆ ಜೆನಿಫರ್ ರಾಜ್‌ಕುಮಾರ್ ಅವರೊಂದಿಗೆ ನಿಲ್ಲಲು ನನಗೆ ಸಂತೋಷವಾಗಿದೆ ಎಂದು ಮೇಯರ್ ಆಡಮ್ಸ್ ಅವರು ಹೇಳಿದರು.

೨. ನ್ಯೂಯಾರ್ಕ್‌ನಲ್ಲಿ ದೀಪಾವಳಿಯಂದು ಶಾಲೆಗಳಲ್ಲಿನ ರಜೆಗಳಿಗೆ ಸಂಬಂಧಿಸಿದ ಮಸೂದೆಯನ್ನು ವಿಧಾನಸಭೆಯ ಸದಸ್ಯೆ ಜೆನಿಫರ್ ರಾಜಕುಮಾರ್ ಅವರು ಮಂಡಿಸಿದರು. ಮಸೂದೆ ಅಂಗೀಕಾರವಾದ ಬಳಿಕ, ‘ನ್ಯೂಯಾರ್ಕ್ ಜನತೆಯ ಪರವಾಗಿ ನಾನು ಈ ಹೋರಾಟ ಆರಂಭಿಸಿ ಗೆದ್ದಿದ್ದಕ್ಕೆ ಖುಷಿಯಾಗಿದೆ’ ಎಂದು ಅವರು ಹೇಳಿಕೊಂಡಿದ್ದಾರೆ.

೩. ದೀಪಾವಳಿಗೆ ಸರಕಾರಿ ರಜೆ ಎಂದು ಅಮೇರಿಕಾದ ಸಂಸತ್ತಿನಲ್ಲಿ ಮಸೂದೆಯನ್ನೂ ಮಂಡಿಸಲಾಯಿತು. ಈ ಮಸೂದೆಯ ಅಡಿಯಲ್ಲಿ, ದೀಪಾವಳಿಯನ್ನು ಅಮೆರಿಕದಲ್ಲಿ ೧೨ ನೇ ಅಧಿಕೃತ ರಜಾದಿನವೆಂದು ಘೋಷಿಸಲು ಒತ್ತಾಯಿಸಲಾಗಿತ್ತು. ಮೇ ೨೫ ರಂದು ಕೆಳಮನೆ ಸಂಸದರು ಗ್ರೇಸ್ ಮೆಂಗ್ ಅವರು ದೀಪಾವಳಿಯನ್ನು ಸರಕಾರಿ ರಜೆ ಎಂದು ಘೋಷಿಸಬೇಕೆಂದು ಒತ್ತಾಯಿಸಿದರು.