ಬ್ರಿಜಭೂಷಣ ಸಿಂಹ ಇವರ ವಿರುದ್ಧದ ಕುಸ್ತಿಪಟುಗಳ ಆಂದೋಲನ ಹಿಂಪಡೆ !

ನವದೆಹಲಿ – ಭಾರತೀಯ ಕುಸ್ತಿ ಮಹಾಸಂಘದ ಅಧ್ಯಕ್ಷ ಮತ್ತು ಭಾಜಪದ ಸಂಸದ ಬ್ರಿಜಭೂಷಣ ಸಿಂಹ ಇವರ ಮೇಲೆ ಮಹಿಳಾ ಕುಸ್ತಿಪಟುಗಳು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಅವರ ಬಂಧನಕ್ಕೆ ಒತ್ತಾಯಿಸಿ ಕುಸ್ತಿಪಟುಗಳಿಂದ ಆಂದೋಲನ ಕೂಡ ನಡೆಯುತ್ತಿತ್ತು. ಈಗ ಸಿಂಹ ಇವರ ವಿರುದ್ಧ ಆರೋಪ ಪತ್ರ ದಾಖಲಿಸಿದ್ದರಿಂದ ಆಂದೋಲನ ಹಿಂಪಡೆಯಲಾಗಿದೆ. ಇದರ ಬಗ್ಗೆ ಕುಸ್ತಿಪಟು ಸಾಕ್ಷಿ ಮಲ್ಲಿಕ ಇವರು ಟ್ವೀಟ್ ಮೂಲಕ ಮಾಹಿತಿ ನೀಡಿದರು. ‘ನ್ಯಾಯ ಸಿಗುವವರೆಗೆ ಕುಸ್ತಿಪಟುಗಳ ರಸ್ತೆಯಲ್ಲಿನ ಹೋರಾಟ ಈಗ ನ್ಯಾಯಾಲಯದಲ್ಲಿ ಮುಂದುವರೆದಿದೆ ಎಂದು ಅವರು ಹೇಳಿದ್ದಾರೆ.