ನೇಪಾಳದ ಪಶುಪತಿನಾಥ ದೇವಸ್ಥಾನದಲ್ಲಿ 10 ಕೆಜಿ ಚಿನ್ನಾಭರಣ ನಾಪತ್ತೆ !

ಕಾಠಮಾಂಡು (ನೇಪಾಳ) – ಇಲ್ಲಿನ ಅತ್ಯಂತ ಪ್ರಾಚೀನ ಪಶುಪತಿನಾಥ ದೇವಾಲಯ ಜೂನ್ 25 ರಂದು ತಾತ್ಕಾಲಿಕವಾಗಿ ಮುಚ್ಚಲಾಗಿತ್ತು. ಕಳೆದ ವರ್ಷ ಮಹಾಶಿವರಾತ್ರಿ ಹಬ್ಬದಂದು ಪಶುಪತಿನಾಥ ದೇವಸ್ಥಾನದಲ್ಲಿರುವ ಶಿವಲಿಂಗಕ್ಕೆ 103 ಕೆಜಿಯ ಆಭರಣಗಳನ್ನು ಅರ್ಪಿಸಲಾಗಿತ್ತು. ಅದರಲ್ಲಿ 10 ಕೆಜಿ ಚಿನ್ನಾಭರಣ ನಾಪತ್ತೆಯಾಗಿದೆ ಎಂದು ಹೇಳಲಾಗಿದೆ. ಈ ಬಗ್ಗೆ ತನಿಖೆ ನಡೆಸಲು ನೇಪಾಳದ ಭ್ರಷ್ಟಾಚಾರ ನಿಗ್ರಹ ಇಲಾಖೆಯು ಜೂನ್ 25 ರಂದು ದೇವಸ್ಥಾನವನ್ನು ಸ್ವಲ್ಪ ಸಮಯದವರೆಗೆ ತಮ್ಮ ವಶಕ್ಕೆ ತೆಗೆದುಕೊಂಡು ತನಿಖೆ ನಡೆಸಿತು. ಪಶುಪತಿನಾಥ ದೇಗುಲಕ್ಕೆ ಅರ್ಪಿಸಿದ್ದ 10 ಕೆಜಿ ಚಿನ್ನಾಭರಣ ನಾಪತ್ತೆಯಾಗಿರುವ ಬಗ್ಗೆ ಸಂಸತ್ತಿನಲ್ಲಿ ಪ್ರಶ್ನಿಸಿದ ನಂತರ ಸರಕಾರವು ಸಂಸ್ಥೆಗಳಿಗೆ ತನಿಖೆ ನಡೆಸುವಂತೆ ಸೂಚಿಸಿದೆ. ‘ಪಶುಪತಿನಾಥ ಏರಿಯಾ ಡೆವಲಪ್‌ಮೆಂಟ್ ಟ್ರಸ್ಟ್’ ನಿರ್ದೇಶಕರಾದ ಘನಶ್ಯಾಮ್ ಖತಿವಡ್ ಇವರು, ಪ್ರಕರಣದ ತನಿಖೆ ಪೂರ್ಣಗೊಳ್ಳುವವರೆಗೆ ಭದ್ರತಾ ಸಿಬ್ಬಂದಿಯವರ ಜೊತೆಗೆ ನೇಪಾಳಿ ಸೇನೆಯನ್ನೂ ದೇವಾಲಯದಲ್ಲಿ ನಿಯೋಜಿಸಲಾಗಿದೆ.