|
ವಾಯನಾಡ (ಕೇರಳ) – ಕೇರಳ ಉಚ್ಚ ನ್ಯಾಯಾಲಯವು ರಾಜ್ಯದ ಮಲಬಾರ ದೇವಸ್ವಂ ಬೋರ್ಡನ ವ್ಯಾಪ್ತಿಗೆ ಬರುವ ತಿರುನೆಲ್ಲಿ ಮಹಾವಿಷ್ಣು ದೇವಸ್ಥಾನದ ಕಟ್ಟಡ ಕಾಮಗಾರಿಯ ಕೆಲಸದಲ್ಲಿ ಅನೇಕ ಅನಧಿಕೃತ ಕೃತ್ಯಗಳು ಕಂಡುಬಂದಿವೆಯೆಂದು ಛೀಮಾರಿ ಹಾಕಿದೆ. ಕೇರಳ ಸರಕಾರ ಮತ್ತು ಮಲಬಾರ ದೇವಸ್ವಂ ಬೋರ್ಡ ಮಂದಿರದಲ್ಲಿ ಅನಧಿಕೃತ ಕಟ್ಟಡ ಕಾಮಗಾರಿಯನ್ನು ಮಾಡುತ್ತಿರುವ ವರದಿಯನ್ನು ನ್ಯಾಯಾಲಯದ ಎದುರು ಮಂಡಿಸಲಾಗಿದೆ. ಇದರ ಆಧಾರದಲ್ಲಿ ನ್ಯಾಯಾಲಯವು ದೇವಸ್ಥಾನದ ಎಲ್ಲ ಕಟ್ಟಡ ಕಾಮಗಾರಿಗಳನ್ನು ತಕ್ಷಣವೇ ಸ್ಥಗಿತಗೊಳಿಸುವಂತೆ ಆದೇಶ ನೀಡಿದೆ.
ಸ್ಥಳೀಯ ಹಿಂದೂ ಭಕ್ತರು ಕಟ್ಟಡ ಕಾಮಗಾರಿಯಲ್ಲಿನ ತಪ್ಪುಗಳನ್ನು ಗಮನಕ್ಕೆ ತರಲು ನ್ಯಾಯಾಲಯದಲ್ಲಿ ಕೆಲವು ದಿನಗಳ ಹಿಂದೆ ಅರ್ಜಿ ದಾಖಲಿಸಿದ್ದರು. ಅರ್ಜಿಯ ಮೇರೆಗೆ ಉಚ್ಚ ನ್ಯಾಯಾಲಯವು ಎಮ್.ಆರ್. ಅರುಣ ಕುಮಾರರ ಅಧ್ಯಕ್ಷತೆಯಡಿಯಲ್ಲಿ ಒಂದು ಆಯೋಗವನ್ನು ರಚಿಸಿತ್ತು. ಈಗ ನ್ಯಾಯಾಲಯವು ನೀಡಿರುವ ಆದೇಶದಿಂದ ಹಿಂದೂಗಳ ಪ್ರಯತ್ನಗಳಿಗೆ ಜಯ ದೊರಕಿದೆ.
Archaeology dept kept in dark over Thirunelly temple renovation
The chuttambalam or the structure around the sanctum sanctorum has been pulled down, except for the balikkalpura structure on the front side.https://t.co/6tqgIt875k#SaveThirunelliTemple— Armchair Groundworks (@Kuvalayamala) June 13, 2023
ಆಯೋಗವು ಮಾಡಿರುವ ತನಿಖೆಯಲ್ಲಿ ಮುಂದಿನ ವಿಷಯಗಳು ಕಂಡು ಬಂದಿತು
1. ಈ ದೇವಸ್ಥಾನದ ಪುರಾತತ್ವದೃಷ್ಟಿಯಿಂದ ಮಹತ್ವದ ಅನೇಕ ಸ್ಥಳಗಳನ್ನು ನಾಶಪಡಿಸಲಾಗಿದೆ.
2. ಸ್ನಾನಗೃಹ ಮತ್ತು ಶೌಚಾಲಯಗಳು, ಹಾಗೆಯೇ `ಸೆಪ್ಟಿಕ್ ಟ್ಯಾಂಕ’ ಇವುಗಳ ಕಟ್ಟಡ ಕಾಮಗಾರಿ ಪಕ್ಕದ ಪವಿತ್ರ `ಪಾಪನಾಶಿನಿ ನದಿ’ಯ ದಡದಲ್ಲಿ ನಿರ್ಮಿಸಲಾಗಿದೆ. ಇದರಿಂದ ಕೊಳಚೆ ನೀರು ನದಿಯಲ್ಲಿ ಹಾಗೆಯೇ ಮಂದಿರದ `ಪಂಚತೀರ್ಥಕುಲಂ’ಗಳಿಗೆ ಸೇರುವ ಸಾಧ್ಯತೆಯಿದೆ.
3. ನದಿಗೆ ಅಡ್ಡಲಾಗಿ ಜೆಸಿಬಿ ಮೂಲಕ ಅಲ್ಲಿಯ ನೈಸರ್ಗಿಕದೃಷ್ಟಿಯಿಂದ ಸಂವೇದನಾಶೀಲ ಪ್ರದೇಶದ ಮಣ್ಣನ್ನು ತೆಗೆಯಲಾಗುತ್ತಿದೆ. ಇದರಿಂದ ಭೂಕುಸಿತದ ಸಂಕಟ ಎದುರಾಗುವ ಸಾಧ್ಯತೆಯಿದೆ.
4. ಕಟ್ಟಡ ಕಾಮಗಾರಿಗಾಗಿ ಉಪಯೋಗಿಸಲಾಗಿರುವ ನಿಧಿಯ ದುರುಪಯೋಗವಾಗುತ್ತಿರುವುದು ಕಂಡು ಬಂದಿದೆ.
5. `ವಿಳಕ್ಕೂ’ ಹೆಸರಿನ ಒಂದು ಪ್ರಾಚೀನ ರಚನೆಯನ್ನು ಆವಶ್ಯಕತೆಯಿಲ್ಲದಿರುವಾಗಲೂ ಕೆಡವಲಾಗಿದೆ.
6. ಹತ್ತಿರವಿರುವ ಬ್ರಹ್ಮಗಿರಿ ಪರ್ವತದಿಂದ ಪವಿತ್ರ ಜಲವನ್ನು ನೇರ ದೇವಸ್ಥಾನಕ್ಕೆ ತರಲು ಮಾಡಿರುವ ನೂರಾರು ವರ್ಷಗಳ ಹಳೆಯ `ಥಿಡಾಪಲ್ಲಿ’ಯ ವ್ಯವಸ್ಥೆಯನ್ನು ನಷ್ಟಗೊಳಿಸಲಾಗಿದೆ. ಇದರಿಂದ ನೀರಿಗೆ ದಾರಿ ಮಾಡಲಾಗುವ ಕಟ್ಟಡ ಕಾಮಗಾರಿ ನಷ್ಟಗೊಂಡಿದೆ. ಇದರಿಂದ ಈ ಸಂಪೂರ್ಣ ಪ್ರಾಚೀನ ಪರಂಪರೆಯೇ ನಷ್ಟಗೊಂಡಿದೆ.
7. ಬೋರ್ಡಗೆ ಸಂಬಂಧಿಸಿದ ಆಡಳಿತಾಧಿಕಾರಿಗಳ ಮೇಲೆ ಕಠಿಣ ಕ್ರಮ ಕೈಕೊಳ್ಳುವ ಶಿಫಾರಸ್ಸನ್ನು ಈ ವರದಿಯಲ್ಲಿ ನಮೂದಿಸಲಾಗಿದೆ.
ಸಂಪಾದಕೀಯ ನಿಲುವುದೇವಸ್ಥಾನದ ಸರಕಾರೀಕರಣದ ದುಷ್ಪರಿಣಾಮವನ್ನು ಅರಿಯಿರಿ ! ಕೇರಳದ ಎಲ್ಲ ದೇವಸ್ಥಾನಗಳು ಸರಕಾರಿಕರಣವಾಗಿರುವುದರಿಂದ ಮತ್ತು ಈ ಮೊದಲೂ ವಿವಿಧ ಪ್ರಕರಣಗಳಲ್ಲಿ ವಿವಿಧ ದೇವಸ್ವಂ ಬೋರ್ಡನ ಭ್ರಷ್ಟಾಚಾರ ಬಹಿರಂಗವಾಗಿರುವುದರಿಂದ ಈ ಬೋರ್ಡ ಅನ್ನು ರದ್ದುಗೊಳಿಸಲು ಈಗ ಹಿಂದೂಗಳು ಧ್ವನಿ ಎತ್ತುವುದು ಆವಶ್ಯಕ ! |