ಭಾರತೀಯ ಮುಸಲ್ಮಾನರು ತಮ್ಮನ್ನು ಸಂತ್ರಸ್ತರೆಂದು ತೋರಿಸುವ ಮಾನಸಿಕತೆಯಿಂದ ಹೊರಬರಬೇಕು ! – ಉದ್ಯಮಿ ಜಫರ್ ಸರೇಶವಾಲಾ

ಉದ್ಯಮಿ ಜಫರ್ ಸರೇಶವಾಲಾ

ಜೆದ್ದಾ (ಸೌದಿ ಅರೇಬಿಯಾ) – ಭಾರತದಲ್ಲಿನ ಮುಸಲ್ಮಾನರು ತಮ್ಮನ್ನು ಸಂತ್ರಸ್ತರು ಎಂದು ತೋರಿಸುವೆ ಮಾನಸಿಕತೆಯಿಂದ ಹೊರಬರಬೇಕು ಮತ್ತು ಶಿಕ್ಷಣದ ಕಡೆಗೆ ಗಮನ ನೀಡಬೇಕು, ಎಂದು ಭಾರತೀಯ ಉದ್ಯಮಿ ಹಾಗೂ ‘ಮೌಲಾನಾ ಆಜಾದ್ ನ್ಯಾಷನಲ್ ಉರ್ದು ಯೂನಿವರ್ಸಿಟಿ’ಯ ಮಾಜಿ ಕುಲಪತಿ ಜಫರ್ ಸರೆಶವಾಲ ಇವರು ಇಲ್ಲಿ ಒಂದು ಕಾರ್ಯಕ್ರಮದಲ್ಲಿ ಕರೆ ನೀಡಿದರು. ನಾವು ನಮ್ಮ ಹಿಂದೂ ಬಂಧು ಭಗಿನಿಯರ ಜೊತೆ ಮಾತನಾಡಬೇಕು ಮತ್ತು ಅವರ ಎದುರು ನಮ್ಮ ಚಿತ್ರಣ ಒಳ್ಳೆಯದಾಗಿರಬೇಕು. ಎಲ್ಲಿಯವರೆಗೆ ನಾವು ಹೀಗೆ ಮಾಡುವುದಿಲ್ಲ, ಅಲ್ಲಿಯವರೆಗೆ ಸಂಘರ್ಷ ಮುಂದುವರೆಯುವುದು, ಹೀಗೂ ಕೂಡ ಅವರು ಹೇಳಿದರು.

ಜಫರ್ ಸರೇಶವಾಲ ಮಾತು ಮುಂದುವರಿಸುತ್ತಾ, ಭಾರತದಲ್ಲಿ ಮುಸಲ್ಮಾನರ ಜೊತೆ ಭೇದ ಭಾವ ಮಾಡಲಾಗುತ್ತದೆ ; ಆದರೆ ಅದು ಕೆಲವು ಘಟಕಗಳು ಮಾಡುತ್ತವೆ . ನಾವು ಸತತ ಪ್ರತಿಭಟನೆ ಮಾಡಲು ಸಾಧ್ಯವಿಲ್ಲ. ಪ್ರಪಂಚ ಮುಂದೆ ಹೋಗುತ್ತಿದೆ. ಈಗ ಕೇವಲ ಪದವಿ ಪ್ರಾಪ್ತ ಮಾಡಿಕೊಳ್ಳುವ ವರೆಗೆ ಸೀಮಿತವಾಗಿ ಉಳಿಯಲು ಸಾಧ್ಯವಿಲ್ಲ, ನಾವು ಪ್ರತಿಯೊಂದು ಕ್ಷೇತ್ರದಲ್ಲಿ ತಜ್ಞರಾಗಬೇಕಾಗುತ್ತದೆ. ಭಾರತದಲ್ಲಿನ ಮುಸಲ್ಮಾನರು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ( ಸಿವಿಲ್ ಸರ್ವಿಸ್ ) ಭಾಗವಹಿಸಬೇಕು. ಅವರು ಈ ಸ್ಪರ್ಧೆಗಾಗಿ ಸಹಭಾಗಿ ಆಗದಿದ್ದರೆ ಆಗ ಅದನ್ನು ಗೆಲ್ಲುವ ಅಪೇಕ್ಷೆ ಮಾಡಲು ಹೇಗೆ ಸಾಧ್ಯ ?