|
ಅಹಿಲ್ಯಾನಗರ – ಜಿಲ್ಲೆಯ ದೌಂಡನಲ್ಲಿ 3 ಮಹಿಳೆಯರು ಶ್ರೀಗೊಂದಾ ತಾಲೂಕಿನ ಕಾಷ್ಟಿಯ ಒಂದು ಬಡ ಕುಟುಂಬದವರಿಗೆ ವಿವಿಧ ಆಮಿಷಗಳನ್ನೊಡ್ಡಿ ಕ್ರೈಸ್ತ ಧರ್ಮವನ್ನು ಸ್ವೀಕರಿಸಿರಿ, ಮಕ್ಕಳ ವಿವಾಹವಾಗುವುದು, ಮನೆಯ ಎಲ್ಲ ಸಮಸ್ಯೆ ದೂರವಾಗುವುದು’ ಎಂದು ಹೇಳಿ ಹಣೆಯ ಮೇಲೆ ಎಣ್ಣೆ ಹಚ್ಚಿ ಪ್ರಾರ್ಥನೆಯನ್ನು ಹೇಳಿದಳು, ಹಾಗೆಯೇ ಮತಾಂತರಗೊಳಿಸಲು ಒತ್ತಾಯ ಮಾಡಿದಳು. ಈ ಪ್ರಕರಣದಲ್ಲಿ ಮಯೂರ ಮದರೆ ಇವರು ಶ್ರಿಗೊಂದೆ ಪೊಲೀಸ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ಪೊಲೀಸರು 3 ಮಹಿಳೆಯರ ವಿರುದ್ಧ ದೂರನ್ನು ದಾಖಲಿಸಿದ್ದಾರೆ. ನಮ್ರತಾ ವಾರನಸೆ(ವಯಸ್ಸು 27 ವರ್ಷಗಳು) ಶಾರದಾ ಸೌಂದಡೆ (ವಯಸ್ಸು 27 ವರ್ಷಗಳು) ಮತ್ತು ವೈಶಾಲಿ ಪವಾರ (ವಯಸ್ಸು 36 ವರ್ಷಗಳು) ಇವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿರುವ ಕ್ರೈಸ್ತ ಮಹಿಳೆಯರ ಹೆಸರಾಗಿದೆ. (ಮತಾಂತರಗೊಂಡ ಕ್ರೈಸ್ತರು ಅವರ ಹಿಂದೂ ಹೆಸರನ್ನು ಬದಲಾಯಿಸುವುದಿಲ್ಲ ಕಾರಣ ಅವರಿಗೆ ಹಿಂದೂ ಸಮಾಜದಲ್ಲಿದ್ದು ಇತರೆ ಹಿಂದೂಗಳನ್ನು ಮತಾಂತರಗೊಳಿಸುವುದಿರುತ್ತದೆ ಎನ್ನುವುದನ್ನು ಗಮನಿಸಬೇಕಾಗಿದೆ. ಇಂತಹ ಮತಾಂತರಗೊಂಡ ಹಿಂದೂಗಳು ಸಮಾಜಕ್ಕೆ ಹೆಚ್ಚು ಅಪಾಯಕಾರಿಯಾಗಿದ್ದಾರೆ ಎನ್ನುವುದನ್ನು ಗಮನಿಸಬೇಕು ! – ಸಂಪಾದಕರು)
ಕಾಷ್ಟಿಯಲ್ಲಿ ಪ್ರಕಾಶ ಮದರೆ (20 ವರ್ಷಗಳು) ಈ ಯುವಕ ತನ್ನ ತಾಯಿ ಮತ್ತು ಸಹೋದರನೊಂದಿಗೆ ವಾಸಿಸುತ್ತಿದ್ದನು. ಅವರ ಮನೆಗೆ ಹೋಗಿ ಈ 3 ಮಹಿಳೆಯರು ಮೇಲಿನಂತೆ ಮತಾಂತರದ ಪ್ರಯತ್ನ ಮಾಡಿದರು. ಕ್ರೈಸ್ತ ಧರ್ಮವನ್ನು ಸ್ವೀಕರಿಸುವ ಇಚ್ಛೆಯಿಲ್ಲವೆಂದು ಹೇಳಿದರೂ ಆ ಮಹಿಳೆಯರು `ನೀವು ನಮ್ಮ ದೇವರಲ್ಲಿ ಪ್ರಾರ್ಥನೆ ಮಾಡದಿದ್ದರೆ ನಿಮಗೆ ಕೆಟ್ಟದಾಗುವುದು’ ಎಂದು ಹೇಳಿದರು. (ಹಿಂದೂ ಧರ್ಮದಲ್ಲಿರುವ ದೇವರುಗಳ ಪ್ರಾರ್ಥನೆಯನ್ನು ಮಾಡಿದರೂ ಭಕ್ತರ ಇಚ್ಛೆಗಳು ಪೂರ್ಣಗೊಳ್ಳುತ್ತವೆ. ಕ್ರೈಸ್ತ ಪಂಥದವರಂತೆ ಪ್ರಾರ್ಥನೆ ಮಾಡಿದ ಬಳಿಕ ಎಲ್ಲ ಸಂಕಟಗಳು ದೂರವಾಗುತ್ತವೆ. ಹೀಗಿರುವಾಗ ವಿದೇಶಗಳಲ್ಲಿ ಅನೇಕ ಚರ್ಚಗಳು ಏಕೆ ಪಾಳು ಬೀಳುತ್ತಿವೆ ? ಅನೇಕ ಕ್ರೈಸ್ತರು ಚರ್ಚಗೆ ಹೋಗುವುದನ್ನು ಏಕೆ ನಿಲ್ಲಿಸಿದ್ದಾರೆ. ಇದನ್ನು ಕ್ರೈಸ್ತ ಮಹಿಳೆಯರು ಉತ್ತರ ನೀಡಬೇಕು ! – ಸಂಪಾದಕರು) ಪ್ರಕಾಶನು ಈ ವಿಷಯದಲ್ಲಿ ಪ್ರತೀಕ ಪಾಚಪುತೆಯನ್ನು ಕರೆಸಿ ಈ ಪ್ರಕರಣದ ಮಾಹಿತಿಯನ್ನು ನೀಡಿದನು. ಅವನು ಪೊಲೀಸರಿಗೆ ತಿಳಿಸಿದನು. ಪೊಲೀಸರು ಮಹಿಳೆಯರಲ್ಲಿ ವಿಚಾರಿಸಿದಾಗ ಅವರ ಮಾತಿನಲ್ಲಿ ಕೆಲವು ಸಂಶಯಾಸ್ಪದ ವಿಷಯಗಳು ಕಂಡು ಬಂದಿದ್ದರಿಂದ ಪೊಲೀಸರು ಅವರನ್ನು ವಶಕ್ಕೆ ಪಡೆದರು. ಈ ಪ್ರಕರಣದ ಮುಖ್ಯ ಸೂತ್ರಧಾರನನ್ನು ಪೊಲೀಸರು ಹುಡುಕುತ್ತಿದ್ದಾರೆ.
नगर जिल्ह्यामध्ये कपाळावर तेल रगडत धर्मांतर; ३ ख्रिश्चन महिलांवर गुन्हा दाखलhttps://t.co/6oQGC1yGqO
— Nagar Sahyadri (@enagarsahyadri) June 18, 2023
ಸಂಪಾದಕರ ನಿಲುವುರಾಜ್ಯದಲ್ಲಿ ಹಿಂದುತ್ವನಿಷ್ಠರ ಸರಕಾರ ಇರುವಾಗ ಕ್ರೈಸ್ತರಿಗೆ ಇಂತಹ ಧೈರ್ಯವಾದರೂ ಎಲ್ಲಿಂದ ಬರುತ್ತದೆ ? ಹಿಂದೂಗಳ ಮತಾಂತರಕ್ಕಾಗಿ ವಿವಿಧ ಕೃತ್ಯಗಳನ್ನು ನಡೆಸುವ ಕ್ರೈಸ್ತರನ್ನು ಸರಿದಾರಿಗೆ ತರಲು ಕಠಿಣ ಮತಾಂತರ ವಿರೋಧಿ ಕಾನೂನು ರಚಿಸಿ ಅವರನ್ನು ಕಾರಾಗೃಹಕ್ಕೆ ತಳ್ಳುವುದು ಆವಶ್ಯಕ ! |