‘ಮುಸ್ಲಿಮರಿಗೆ ಯಾವುದೇ ಸರಕಾರವೂ ನೀಡದಂತಹ ಪೆಟ್ಟು ಈಗಿನ ಸರಕಾರವು ನೀಡುತ್ತಿದೆಯಂತೆ !’ – ಜಮಿಯತ್ ಉಲೇಮಾ-ಎ-ಹಿಂದ್ ಮುಖ್ಯಸ್ಥ ಮೌಲಾನಾ ಅರ್ಷದ್ ಮದನಿ

ಜಮಿಯತ್ ಉಲೇಮಾ-ಎ-ಹಿಂದ್ ಮುಖ್ಯಸ್ಥ ಮೌಲಾನಾ ಅರ್ಷದ್ ಮದನಿ ಇವರಿಗೆ ಏಕರೂಪ ನಾಗರಿಕ ಸಂಹಿತೆಯಿಂದ ಹೊಟ್ಟೆಯುರಿ !

(ಮೌಲಾನಾ ಎಂದರೆ ಇಸ್ಲಾಮಿಕ್ ಅಧ್ಯಯನಕಾರ)

ಜಮಿಯತ್ ಉಲೇಮಾ-ಎ-ಹಿಂದ್ ಮುಖ್ಯಸ್ಥ ಮೌಲಾನಾ ಅರ್ಷದ್ ಮದನಿ

ನವದೆಹಲಿ – ‘ನಾವು ಏಕರೂಪ ನಾಗರಿಕ ಸಂಹಿತೆಯನ್ನು ವಿರೋಧಿಸುತ್ತೇವೆ; ಆದರೆ ರಸ್ತೆಗಿಳಿಯುವುದಿಲ್ಲ. ಈ ಕಾನೂನಿನ ಉದ್ದೇಶ ಮುಸ್ಲಿಮರ ನಡುವೆ ಅಂತರವನ್ನು ನಿರ್ಮಿಸಿ ಅವರನ್ನು ಪ್ರತ್ಯೇಕಿಸುವುದಾಗಿದೆ. ‘ಯಾವ ಸರಕಾರವೂ ಮುಸ್ಲಿಮರಿಗೆ ನೀಡದಂತಹ ಪೆಟ್ಟನ್ನು ಈಗಿನ ಸರಕಾರ ನೀಡುತ್ತಿದೆ’ ಎಂದು ಜಮಿಯತ್ ಉಲೇಮಾ-ಎ-ಹಿಂದ್ ಮುಖ್ಯಸ್ಥ ಮೌಲಾನಾ ಅರ್ಷದ್ ಮದನಿ ಇವರು ಹೇಳಿದರು. ಕೇಂದ್ರ ಸರಕಾರವು ಇತ್ತೀಚೆಗೆ ಏಕರೂಪ ನಾಗರಿಕ ಸಂಹಿತೆ ಕುರಿತು ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸಿರುವ ಹಿನ್ನೆಲೆಯಲ್ಲಿ ಅವರು ಮಾತನಾಡುತ್ತಿದ್ದರು.

ಮದನಿ ತಮ್ಮ ಮಾತನ್ನು ಮುಂದುವರೆಸುತ್ತಾ, “ನಾವು ಏಕರೂಪ ನಾಗರಿಕ ಕಾನೂನಿನ ಸೂತ್ರದ ಮೇಲೆ ಬೀದಿಗಿಳಿಯುವುದಿಲ್ಲ; ಏಕೆಂದರೆ ಹಾಗೆ ಮಾಡಿದರೆ ನಮ್ಮ ವಿರುದ್ಧ ಇರುವವರ ಉದ್ದೇಶ ಈಡೇರುತ್ತದೆ. ಹಾಗೆ ಆಗಲು ನಾವು ಬಿಡುವುದಿಲ್ಲ. (ಮುಸಲ್ಮಾನರ ವಿರುದ್ಧ ಕಿಡಿಕಾರಿದರೇ ಅವರನ್ನು ಕೆರಳಿಸಿರುವ ಮದನಿಯ ಹೇಳಿಕೆಯನ್ನು ಸಣ್ಣ ಮಕ್ಕಳಾದರೂ ನಂಬುವರೇ ? – ಸಂಪಾದಕರು) ಇದು ಸರಕಾರದ ರಾಜಕೀಯ ಆಟವಾಗಿದ್ದೂ ಇದರಲ್ಲಿ ಸತ್ಯಾಂಶವಿಲ್ಲ ಎಂದು ರಾಜಕೀಯ ಪಕ್ಷಗಳೂ ಒಪ್ಪಿಕೊಳ್ಳುತ್ತಿದೆ.” ಎಂದು ಹೇಳಿದರು.

ಸಂಪಾದಕೀಯ ನಿಲುವು

ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಹಕ್ಕುಗಳನ್ನು ನೀಡುವ ಸಮಾನ ನಾಗರಿಕ ಕಾನೂನು ಆಗದೇ ಇದ್ದರಿಂದ ಕಳೆದ 75 ವರ್ಷಗಳಿಂದ ಹಿಂದೂಗಳಿಗೆ ಬಿದ್ದಿರುವ ಪೆಟ್ಟಿನ ಬಗ್ಗೆ ಮದನಿ ಏಕೆ ಮಾತನಾಡುವುದಿಲ್ಲ ?