ಕುಪವಾಡಾದಲ್ಲಿ ಹತರಾದ ೫ ಪಾಕಿಸ್ತಾನಿ ಭಯೋತ್ಪಾದಕರು

ಕುಪವಾಡಾ (ಜಮ್ಮು ಮತ್ತು ಕಾಶ್ಮೀರ) – ಇಲ್ಲಿ ಜಿಹಾದಿ ಭಯೋತ್ಪಾದಕರೊಂದಿಗೆ ನಡೆದ ಚಕಮಕಿಯಲ್ಲಿ ಭದ್ರತಾ ಪಡೆಗಳು ೫ ಪಾಕಿಸ್ತಾನಿ ಭಯೋತ್ಪಾದಕರನ್ನು ಹೊಡೆದುರುಳಿಸಿವೆ. ಇಲ್ಲಿ ಭಯೋತ್ಪಾದಕರು ಅಡಗಿದ್ದಾರೆಂಬ ಮಾಹಿತಿ ಸಿಕ್ಕ ನಂತರ ಭದ್ರತಾ ಪಡೆಗಳು ಅನ್ವೇಷಣೆ ನಡೆಸಿದ ಬಳಿಕ ಚಕಮಕಿ ನಡೆದಿದೆ.