‘ಗುಜರಾತಗೆ ಅಪ್ಪಳಿಸಿ ರಾಜಸ್ಥಾನದತ್ತ ಸಾಗಿದ ಬಿಪರ್‌ಜಾಯ್’ ಚಂಡಮಾರುತ !

ಜಾಮನಗರ (ಗುಜರಾತ) – ‘ಬಿಪರ್‌ಜಾಯ್’ ಚಂಡಮಾರುತವು ಜೂನ್ ೧೫ ರ ರಾತ್ರಿ ಗುಜರಾತ‌ನ ಜಖಾವು ಕರಾವಳಿಗೆ ಅಪ್ಪಳಿಸಿದ್ದು, ೨ ಜನರು ಸಾವನ್ನಪ್ಪಿದ್ದಾರೆ ಮತ್ತು ೨೨ ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇದಲ್ಲದೇ ಪ್ರಾಣಿಗಳೂ ಸಾವನ್ನಪ್ಪಿವೆ ಎಂದು ವರದಿಯಾಗಿದೆ. ಈ ಚಂಡಮಾರುತ ಗುಜರಾತ‌ನ ಕರಾವಳಿಗೆ ಅಪ್ಪಳಿಸಿದುದರಿಂದ ೮ ಜಿಲ್ಲೆಗಳು ಹಾನಿಗೊಳಗಾಗಿವೆ. ಚಂಡಮಾರುತದ ಸಮಯದಲ್ಲಿ ಇಲ್ಲಿ ಭಾರೀ ಮಳೆಯಾಗಿದ್ದು ಗಂಟೆಗೆ ೧೨೦ ಕಿ.ಮೀ.ನಷ್ಟು ವೇಗವಾಗಿ ಗಾಳಿ ಬೀಸುತ್ತಿತ್ತು. ಈ ಚಂಡಮಾರುತವು ಇಗ ರಾಜಸ್ಥಾನದತ್ತ ಸಾಗಿದ್ದರಿಂದ ವೇಗವು ಕಡಿಮೆಯಾಗಿದೆ.