ಉತ್ತರಕಾಶಿಯಲ್ಲಿ (ಉತ್ತರಾಖಂಡ) ಹಿಂದೂಗಳಿಂದ ಆಯೋಜಿತ ಲವ್ ಜಿಹಾದ್ ವಿರೋಧಿ ಮಹಾ ಪಂಚಾಯತ್ ಸ್ಥಗಿತ

ಆಡಳಿತವು ಕರ್ಫ್ಯೂ ಹೇರಿದುದರ ಪರಿಣಾಮ

ಉತ್ತರಕಾಶಿ (ಉತ್ತರಾಖಂಡ) – ಉತ್ತರಕಾಶಿಯ ಪುರೋಲಾ ಪ್ರದೇಶದಲ್ಲಿ ಜೂನ್ 15 ರಂದು ಲವ್ ಜಿಹಾದ್ ವಿರುದ್ಧ ಆಯೋಜಿಸಲಾದ ಮಹಾ ಪಂಚಾಯತ್ ಅನ್ನು ಅನಿರ್ದಿಷ್ಟಾವಧಿಗೆ ಸ್ಥಗಿತಗೊಳಿಸಲಾಗಿದೆ. ಆಡಳಿತವು ಈ ಪ್ರದೇಶದಲ್ಲಿ ಕರ್ಫ್ಯೂ ಆದೇಶವನ್ನು ವಿಧಿಸಿದುದರಿಂದ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಮಹಾ ಪಂಚಾಯತ್ ನಡೆಯುವ ಮೊದಲೇ ಅದರ ಆಯೋಜಕರು ಮತ್ತು ಸಂಬಂಧಪಟ್ಟವರ ಮೇಲೆ ಕಣ್ಗಾವಲಿರಿಸಲು ಪೊಲೀಸರು ಆರಂಭಿಸಿದ್ದರು.

ಈ ಮಹಾ ಪಂಚಾಯತ್ ನ ಮೂಲಕ ಲವ್ ಜಿಹಾದ್ ತಡೆಗಟ್ಟಲು ಕಠೋರ ಕಾನೂನು, ಹಿಮಾಚಲ ಪ್ರದೇಶದದಂತೆ ಭೂಕಾನೂನು ಅನ್ವಯಿಸುವುದು, ಚಾರ್ ಧಾಮ್ ಯಾತ್ರೆಯಲ್ಲಿ ಮುಸ್ಲಿಮರನ್ನು ನಿಷೇಧಿಸುವುದು, ರಾಜ್ಯದಲ್ಲಿ ಪರಿಚಯವನ್ನು ಮುಚ್ಚಿಟ್ಟು ಕೆಲಸ ಮಾಡುವವರ ಮೇಲೆ ನಿಷೇಧ ಹೇರುವುದು ವಕ್ಫ್ ಬೋರ್ಡ್ ವಿಸರ್ಜನೆ, ಸನಾತನ ಬೋರ್ಡ ಸ್ಥಾಪಿಸುವುದು ಮುಂತಾದ ಬೇಡಿಕೆಗಳನ್ನು ಮಾಡುವುದೆಂದಿತ್ತು.

ಮಹಾಪಂಚಾಯತ್ ನ ಆಯೋಜಕ ಸ್ವಾಮಿ ದರ್ಶನ ಭಾರತಿ ಇವರಿಗೆ ಮತಾಂಧ ಮುಸಲ್ಮಾನನಿಂದ ಶಿರಚ್ಛೇದನದ ಬೆದರಿಕೆ

ಹಿಂದೂಗಳು ಮತಾಂಧ ಮುಸ್ಲಿಮರ ವಿರುದ್ಧ ಎದ್ದುನಿಂತರೆ ಮತಾಂಧರು ಅವರನ್ನು ಕೊಲ್ಲಲು ಪ್ರಯತ್ನಿಸುತ್ತಾರೆ. ಈ ಮೂಲಕ ಅವರು ಹಿಂದೂಗಳಲ್ಲಿ ಭಯೋತ್ಪಾದನೆಯನ್ನು ಹುಟ್ಟುಹಾಕುತ್ತಾರೆ, ಈ ಭಯೋತ್ಪಾದನೆಯನ್ನು ಆಮೂಲಾಗ್ರವಾಗಿ ತೊಡೆದುಹಾಕಲು ಬಿಜೆಪಿ ಸರಕಾರ ಪ್ರಯತ್ನಿಸುವುದು ಅವಶ್ಯಕವಾಗಿದೆ!

ಮಹಾಪಂಚಾಯತ್ ಸಂಘಟಕ ಸ್ವಾಮಿ ದರ್ಶನ ಭಾರತಿ ಅವರಿಗೆ ಮತಾಂಧ ಮುಸಲ್ಮಾನರನೊಬ್ಬನು ಶಿರಚ್ಛೇದ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಸ್ವಾಮಿ ದರ್ಶನ ಭಾರತಿ ಅವರು ‘ದೇವಭೂಮಿ ರಕ್ಷಾ ಅಭಿಯಾನ’ದ ಸಂಸ್ಥಾಪಕರಾಗಿದ್ದಾರೆ. ಈ ಬೆದರಿಕೆಯ ನಂತರ, ಅವರಿಗೆ ಪೊಲೀಸರು ರಕ್ಷಣೆ ನೀಡಿದ್ದಾರೆ. ಈ ಕುರಿತು ಒಂದು ಭಿತ್ತಿಪತ್ರವನ್ನು ಅನ್ನು ಮತಾಂಧರು ಅವರಿಗೆ ಕಳುಹಿಸಿದ್ದಾರೆ. ‘ಮುಶರತೆ ಇಂಕಲಾಬ’ ಎಂಬ ವ್ಯಕ್ತಿಯು, ‘ಪುರೋಲಾ, ಉತ್ತರಕಾಶಿಯಲ್ಲಿ ನಿಮ್ಮ ಮಹಾಪಂಚಾಯತ್ ಬೇಡ. ರಾಷ್ಟ್ರೀಯ ಸ್ವಯಂ ಸಂಘ ಮತ್ತು ಬಿಜೆಪಿಯ ಕೇಸರಿ ಭಯೋತ್ಪಾದಕರು ನಮ್ಮಲ್ಲಿ ಯಾರಿಗಾದರೂ ಹಾನಿ ಮಾಡಿದರೆ, ನಿಮ್ಮ ಶಿರಚ್ಛೇದ ಮಾಡಲಾಗುವುದು ಮತ್ತು ‘ಗಜ್ವಾ-ಎ-ಹಿಂದ್’ (ಭಾರತದ ವಿನಾಶ) ಉತ್ತರಾಖಂಡದಿಂದ ಪ್ರಾರಂಭವಾಗುವುದು ಎಂದು ಹೇಳಿದ್ದಾನೆ.

ಅಲ್ಲದೆ, ತಲೆ ಕಡಿಯುವವರಿಗೆ 5 ಕೋಟಿ ರೂಪಾಯಿ ನೀಡುವುದಾಗಿಯೂ ಬರೆಯಲಾಗಿದೆ.

 

ಸಂಪಾದಕೀಯ ನಿಲುವು

ಹಿಂದೂಗಳು ಸಂಘಟಿತರಾಗುತ್ತಿರುವುದು ಆಡಳಿತಕ್ಕೆ ನೋಡಲು ಆಗುತ್ತಿಲ್ಲವೇನು ? ದಬ್ಬಾಳಿಕೆಯ ವಿರುದ್ಧ ದನಿ ಎತ್ತಲು ಹಿಂದೂ ಸಮಾಜವು ಸಂಘಟಿತವಾದರೆ ಆಡಳಿತಕ್ಕೆ ಯಾಕೆ ಹೊಟ್ಟೆ ಉರಿಯುತ್ತದೆ ?