ಹಿಂದೂ ಯುವತಿಯನ್ನು ಮುಸ್ಲಿಂ ಗೆಳತಿಯ ಸಹೋದರ ಅರ್ಮಾನ್ ನಿಂದ ಪ್ರೀತಿಯ ಬಲೆಯಲ್ಲಿ ಎಳೆಯಲು ಪ್ರಯತ್ನ !

  • ಉತ್ತರಾಖಂಡದ ‘ದಿ ಕೇರಳ ಸ್ಟೋರಿ’!

  • ಅರ್ಮಾನ್ ಜೊತೆ ದೈಹಿಕ ಸಂಬಂಧ ಬೆಳೆಸುವಂತೆ ಸ್ನೇಹಿತೆಯಿಂದ ಸ್ನೇಹಿತೆಗೆ ಒತ್ತಡ !

ಡೆಹ್ರಾಡುನ್ (ಉತ್ತರಾಖಂಡ) – ಇಲ್ಲಿ ಅರ್ಮಾನ್ ಅನ್ಸಾರಿ ಎಂಬ ಕಾಮುಕನು ಹಿಂದೂ ಯುವತಿಯೊಬ್ಬಳನ್ನು ಪ್ರೀತಿಯ ಬಲೆಗೆ ಸೆಳೆಯಲು ಯತ್ನಿಸಿದ್ದಾನೆ. ಆಕೆಯೊಂದಿಗೆ ದೈಹಿಕ ಸಂಬಂಧ ಬೆಳೆಸುವಂತೆ ಒತ್ತಡ ಹೇರಿದ್ದ. ಆಕೆ ವಿರೋಧಿಸಿದಾಗ ಮತಾಂತರಗೊಂಡು ಮದುವೆಯಾಗುವುದಾಗಿ ಬೆದರಿಕೆ ಹಾಕಿದ್ದಾನೆ. ಅನ್ಸಾರಿಯ ತಾಯಿ ಮತ್ತು ಸಹೋದರಿ ಕೂಡ ಸಂತ್ರಸ್ತೆಗೆ ಆತನ ಜೊತೆ ದೈಹಿಕ ಸಂಬಂಧ ಹೊಂದುವಂತೆ ಒತ್ತಡ ಹೇರಿದ್ದರು, ಎಂದು ಸಂತ್ರಸ್ತೆ ಆರೋಪಿಸಿದ್ದಾಳೆ. ಪೊಲೀಸರು ಉತ್ತರಾಖಂಡ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆಯಡಿ ಮತ್ತು ಇತರ ಕೆಲವು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ನಗರದ ಡೋಯಿವಾಲಾ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಸಂತ್ರಸ್ತೆ ತಮನ್ನಾ ಜೊತೆಗೆ ಕಾಲೇಜಿನಲ್ಲಿ ಓದುತ್ತಿದ್ದಳು. ಇಬ್ಬರೂ ಸ್ನೇಹಿತರಾದ ನಂತರ ಸಂತ್ರಸ್ತೆ ತಮನ್ನಾ ಮನೆಗೆ ಬಂದು ಹೋಗು ಮಾಡತೊಡಗಿದಳು. ತಮನ್ನಾ ಸಂತ್ರಸ್ತೆಯನ್ನು ತನ್ನ ಸಹೋದರ ಅರ್ಮಾನ್‌ಗೆ ಪರಿಚಯಿಸಿದಳು. ಅರ್ಮಾನ್ ಸಂತ್ರಸ್ತೆಗೆ ಪ್ರೀತಿಯ ಬಲೆಯಲ್ಲಿ ಎಳೆದನು.

ಸಂಪಾದಕೀಯ ನಿಲುವು

ಈ ಘಟನೆಯನ್ನು ‘ದಿ ಕೇರಳ ಸ್ಟೋರಿ’ ಸಿನಿಮಾದಲ್ಲಿ ತೋರಿಸಿರುವಂತೆಯೇ ಇರುವಾಗ ‘ಚಿತ್ರದಲ್ಲಿ ಮುಸ್ಲಿಮರನ್ನು ತಪ್ಪಾಗಿ ಚಿತ್ರಿಸಲಾಗಿದೆ’ ಎಂದು ಆರೋಪಿಸುವವರು ಈಗ ಏನು ಹೇಳುತ್ತಾರೆ ?