ಕೋಲಕಾತಾ (ಬಂಗಾಳ ) – ಪತ್ನಿಯ ಹೆಸರಿನಲ್ಲಿ ಮನೆ ಖರೀದಿಸುವುದ್ದಕ್ಕೆ ಪತಿ ಹಣ ನೀಡಿರುವುದು ಸಾಬೀತಾದರೂ ಪತಿಯು ಈ ವ್ಯವಹಾರವನ್ನು ಪೂರ್ಣ ತನಗೆ ಲಾಭವಾಗಬೇಕು ಮತ್ತು ಒಬ್ಬನಿಗೆ ಮಾತ್ರ ಅದರ ಲಾಭ ದೊರೆಯಬೇಕು ಎಂಬುದಕ್ಕಾಗಿ ಮಾಡಿದ್ದಾನೆ, ಎಂಬುದು ಸಾಬೀತಾಗಬೇಕು. ಆದ್ದರಿಂದ ಭಾರತೀಯ ಸಮಾಜದಲ್ಲಿ ಯಾವುದಾದರೂ ಪತಿ ತನ್ನ ಪತ್ನಿಯ ಹೆಸರಿನಲ್ಲಿ ಮನೆ ಕೊಂಡುಕೊಳ್ಳುವುದಕ್ಕಾಗಿ ಹೆಚ್ಚಿನ ಹಣ ನೀಡಿದ್ದರೆ ಅದನ್ನು ‘ ಬೆನಾಮಿ ವ್ಯವಹಾರ ‘ ಎನ್ನಲಾಗುವುದಿಲ್ಲ. ಇಂತಹ ವ್ಯವಹಾರದಲ್ಲಿ ಹಣದ ಮೂಲ ಮಹತ್ವದ್ದಾಗಿರುತ್ತದೆ. ಆದರೆ ಅದು ನಿರ್ಣಾಯಕ ಆಗುವುದಿಲ್ಲ, ಎಂದು ಕೊಲಕಾತಾ ಉಚ್ಚ ನ್ಯಾಯಾಲಯವು ಒಂದು ಪ್ರಕರಣದ ವಿಚಾರಣೆ ಸಮಯದಲ್ಲಿ ಹೇಳಿತು.
Buying property in wife’s name can’t always be called benami: HC https://t.co/9kugxTJw4k
— TOI Kolkata (@TOIKolkata) June 12, 2023