( ಘರವಾಪಸಿ ಎಂದರೆ ಮೂಲ ಧರ್ಮ ತ್ಯಜಿಸಿ ಇತರ ಧರ್ಮಕ್ಕೆ ಮತಾಂತರವಾದ ನಂತರ ಮತ್ತೆ ಮರಳಿ ಮೂಲ ಧರ್ಮಕ್ಕೆ ಹಿಂತಿರುಗುವುದು)
ಬಹರಾಯಿಚ (ಉತ್ತರಪ್ರದೇಶ) – ನೇಪಾಳದ ಗಡಿಗೆ ತಾಗಿರುವ ಉತ್ತರ ಪ್ರದೇಶದಲ್ಲಿನ ಬಹರಾಯಿಚಿಯಲ್ಲಿ ಕ್ರೈಸ್ತ ಮಿಷಿನರಿಗಳು ಮತಾಂತರಗೊಳಿಸಿದ್ದ ೧೨ ಕ್ಕೂ ಹೆಚ್ಚಿನ ಬಡ ಜನರು ಹಿಂದೂ ಧರ್ಮಕ್ಕೆ ಮರಳಿದ್ದಾರೆ. ಭಜರಂಗದಳದ ಕಾರ್ಯಕರ್ತರು ಧಾರ್ಮಿಕ ವಿಧಿ ನಡೆಸಿ ಅವರ ಶುದ್ಧೀಕರಣ ಮಾಡಿದರು. ಈ ಹಿಂದೂಗಳಿಗೆ ಆಮಿಷ ಒಡ್ಡಿ ಕ್ರೈಸ್ತ ಧರ್ಮಕ್ಕೆ ಮತಾಂತರಿಸಲಾಗಿತ್ತು.
ಸ್ಥಳೀಯ ಜನರು ನೀಡಿರುವ ಮಾಹಿತಿಯ ಪ್ರಕಾರ, ನೇಪಾಳ ಗಡಿಯ ಬಳಿ ಕ್ರೈಸ್ತ ಮಿಷನರಿಗಳು ಸಕ್ರಿಯರಾಗಿದ್ದಾರೆ. ಬಡ ಹಿಂದೂ ಗ್ರಾಮಸ್ಥರಿಗೆ ಆಮಿಷ ಒಡ್ಡಿ ಮತಾಂತರ ಮಾಡುವ ಕೆಲಸ ಮಾಡುತ್ತಾರೆ. ಗಡಿ ಭಾಗದ ಗ್ರಾಮಗಳಲ್ಲಿ ಪ್ರತಿ ಭಾನುವಾರ ಮತ್ತು ಮಂಗಳವಾರ ಪ್ರಾರ್ಥನಾ ಸಭೆಯ ಆಯೋಜನೆ ಮಾಡಲಾಗುತ್ತದೆ. ಬಡ ಹಿಂದೂಗಳನ್ನು ಚರ್ಚ್ ಗೆ ಕರೆಸುತ್ತಾರೆ. ಅಲ್ಲಿ ಜನರನ್ನು ಕ್ರೈಸ್ತ ಧರ್ಮದಲ್ಲಿ ಸಹಭಾಗಿ ಆಗುವದರ ಲಾಭ ತಿಳಿಸಿ ಅವರ ಮೇಲೆ ಒತ್ತಡ ಹೇರಲಾಗುತ್ತದೆ. ಅವರಿಗೆ ಬೇರೆ ಬೇರೆ ರೀತಿಯ ಆಮೀಷಗಳು ತೋರಿಸಲಾಗುತ್ತದೆ. ಆಸೆಗಾಗಿ ಕೆಲವರು ಹಿಂದೂ ಧರ್ಮದ ತ್ಯಾಗ ಮಾಡುತ್ತಾರೆ.
नेपाल सीमा से सटे इलाके में दर्जनों लोगों ने की घर-वापसी, मिशनरियों के चक्कर में फँस गए थे: ‘बजरंग दल’ ने कराया शुद्धिकरण#UP #GharWapsi #Bahraich #BajarangDalhttps://t.co/3lzGHT62QK
— ऑपइंडिया (@OpIndia_in) June 11, 2023
ಪೊಲೀಸರಿಂದ ಮತಾಂತರದ ಕಡೆಗೆ ನಿರ್ಲಕ್ಷ ! – ಭಜರಂಗದಳ
ಬಜರಂಗದಳದ ನಾಯಕ ದೀಪಾಂಶು ಶ್ರೀವಾಸ್ತವ ಇವರು, ಅಕ್ಕ ಪಕ್ಕದ ಎಲ್ಲಾ ಗ್ರಾಮಗಳ ಚರ್ಚ್ ಗಳಲ್ಲಿ ಮತಾಂತರದ ಘಟನೆಗಳು ನಡೆಯುತ್ತಿವೆ; ಆದರೆ ಪೊಲೀಸರು ಮತ್ತು ಸರಕಾರ ಅದರ ಕಡೆಗೆ ಗಮನ ನೀಡುತ್ತಿಲ್ಲ. ಕ್ರೈಸ್ತರ ಮತಾಂತರದ ವಿರುದ್ಧ ಹಿಂದೂ ಸಂಘಟನೆಗಳು ಬೀದಿಗೆ ಇಳಿದು ‘ಘರವಾಪಸಿ’ ಅಭಿಯಾನ ನಡೆಸುತ್ತಿದೆ ಎಂದು ಹೇಳಿದರು.
ಸಂಪಾದಕೀಯ ನಿಲುವುಹಿಂದೂಗಳ ಮತಾಂತರ ಮಾಡುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ! |