ದೆಹಲಿ ವಿಶ್ವವಿದ್ಯಾಲಯದ ಪಠ್ಯಕ್ರಮದಲ್ಲಿ ‘ಸಾವರ್ಕರ್ ಇವರ ಕೊಡುಗೆ ಮತ್ತು ದರ್ಶನ’ ಈ ವಿಷಯ ಸೇರ್ಪಡೆ

ನವ ದೆಹಲಿ – ದೆಹಲಿ ವಿಶ್ವವಿದ್ಯಾಲಯದ ಬಿ.ಎ. (ರಾಜ್ಯಶಾಸ್ತ್ರ)ದ ಪಠ್ಯಕ್ರಮದಲ್ಲಿ ‘ಸಾವರ್ಕರ್‌ರವರ ಕೊಡುಗೆ ಮತ್ತು ದರ್ಶನ’ ಈ ವಿಷಯವನ್ನು ಸೇರಿಸಲಾಗಿದೆ. ದೆಹಲಿ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗ ನೀಡಿದ ಪ್ರಸ್ತಾವನೆಯ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ವಿಶ್ವವಿದ್ಯಾಲಯದ ಕಾರ್ಯಕಾರಿಣಿ ಮಂಡಳಿಯ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಅದರೊಂದಿಗೆ ಕವಿ ಮಹಮ್ಮದ್ ಇಕ್ಬಾಲ್ ಅವರ ಕವಿತೆಗಳನ್ನು ಕೈಬಿಡುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಪಠ್ಯಕ್ರಮದಲ್ಲಿ ಸಾವರ್ಕರ್ ಅವರನ್ನು ಸೇರಿಸಲು ಯಾವುದೇ ವಿರೋಧವಿಲ್ಲದಿದ್ದರೂ, ಸಾವರ್ಕರ್ ಅವರ ವಿಚಾರಗಳನ್ನು ಮ.ಗಾಂಧಿ ಇವರ ಮೊದಲು ಕಲಿಸಬಾರದು ಎಂಬ ನಿಲುವನ್ನು ಅಕಾಡೆಮಿಕ್ ಕೌನ್ಸಿಲ್‌ನ ಕೆಲವು ಸದಸ್ಯರು ಹೇಳಿದರು.

ಕುಲಪತಿ ಯೋಗೇಶ್ ಸಿಂಗ್ ಅವರು ಮಾತನಾಡುತ್ತಾ, ಕವಿ ಇಕ್ಬಾಲ್ ಅವರು ‘ಸಾರೆ ಜಹಾನ್ ಸೆ ಅಚ್ಚಾ’ ಹಾಡನ್ನು ಬರೆದರು; ಆದರೆ ಅವರು ಅದನ್ನು ಎಂದಿಗೂ ನಂಬಲಿಲ್ಲ. ಪಠ್ಯಕ್ರಮದಲ್ಲಿ ಬದಲಾದ ವಿಷಯಗಳು ಐಚ್ಛಿಕವಾಗಿರುತ್ತವೆ ಎಂದೂ ಅವರು ಹೇಳಿದರು.

ಸಂಪಾದಕೀಯ ನಿಲುವು

ಸ್ವಾತಂತ್ರ್ಯ ಬಂದು ೭೫ ವರ್ಷಗಳಾದ ಮೇಲೆ ದೇಶಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ ಸ್ವಾತಂತ್ರ್ಯವೀರ ಸಾವರ್ಕರ್ ಅವರ ಚಿಂತನೆಗಳನ್ನು ಒಂದು ವಿಶ್ವವಿದ್ಯಾಲಯದ ಪಠ್ಯಕ್ರಮದಲ್ಲಿ ಸೇರಿಸುವುದು ಇದು ಎಲ್ಲಾ ಪಕ್ಷದ ರಾಜಕಾರಣಿಗಳಿಗೆ ನಾಚಿಕೆಗೇಡಿನ ಸಂಗತಿ ! ಸ್ವಾತಂತ್ರ್ಯವೀರ ಸಾವರ್ಕರ್ ಅವರ ಕೊಡುಗೆಯನ್ನು ಹತ್ತಿಕ್ಕಲು ಎಷ್ಟೇ ಪ್ರಯತ್ನ ಮಾಡಿದರೂ ಅವರ ರಾಷ್ಟ್ರೀಯವಾದಿ ಚಿಂತನೆಗಳು ಗೆಲ್ಲುತ್ತವೆ ಎಂಬುದನ್ನು ಇದು ತೋರಿಸುತ್ತದೆ !