ರಾಷ್ಟ್ರವಾದಿ ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೆ ಶಾಸಕ ಪ್ರಫುಲ್ಲ ಪಟೇಲ ಮತ್ತು ಸುಪ್ರಿಯಾ ಸುಳೆ ಆಯ್ಕೆ !

ರಾಷ್ಟ್ರವಾದಿ ಕಾಂಗ್ರೆಸ್ಸಿನ 25 ನೇ ವರ್ಷಾಚರಣೆಯ ವೇಳೆ ಶರದ ಪವಾರರಿಂದ ಘೋಷಣೆ

ಶಾಸಕಿ ಸುಪ್ರಿಯಾ ಸುಳೆ ಮತ್ತು ಶಾಸಕ ಪ್ರಫುಲ್ಲ ಪಟೇಲ

ಮುಂಬಯಿ – ರಾಷ್ಟ್ರವಾದಿ ಕಾಂಗ್ರೆಸ್ಸಿನ ಕಾರ್ಯಕಾರಿ ಅಧ್ಯಕ್ಷರಾಗಿ ಶಾಸಕ ಪ್ರಫುಲ್ಲ ಪಟೇಲ ಮತ್ತು ಶಾಸಕಿ ಸುಪ್ರಿಯಾ ಸುಳೆ ಇವರನ್ನು ಆಯ್ಕೆ ಮಾಡಲಾಗಿದೆಯೆಂದು ರಾಷ್ಟ್ರವಾದಿ ಕಾಂಗ್ರೆಸ್ಸಿನ ಅಧ್ಯಕ್ಷ ಶರದ ಪವಾರ ಇವರು ಜೂನ 10 ರಂದು ದೆಹಲಿಯಲ್ಲಿ ಪಕ್ಷದ 25ನೇ ವರ್ಷಾಚರಣೆಯ ಮಹೋತ್ಸವದ ದಿನದಂದು ಘೋಷಿಸಿದರು. ಮುಂದಿನ ಚುನಾವಣೆಯ ಸಂಪೂರ್ಣ ಜವಾಬ್ದಾರಿ ಈ ಇಬ್ಬರ ಮೇಲೆ ಇರಲಿದೆ. ಸಧ್ಯಕ್ಕಂತೂ ವಿರೋಧಿ ಪಕ್ಷದ ನಾಯಕ ಅಜಿತ ಪವಾರರಿಗೆ ಯಾವುದೇ ಜವಾಬ್ದಾರಿಯನ್ನು ನೀಡಿಲ್ಲ. ಸುಪ್ರಿಯಾ ಸುಳೆಯವರ ಮೇಲೆ ಮಹಾರಾಷ್ಟ್ರ, ಹರಿಯಾಣಾ ಮತ್ತು ಪಂಜಾಬ ರಾಜ್ಯಗಳ ಜವಾಬ್ದಾರಿಯನ್ನು ವಹಿಸಲಾಗಿದೆ. ಹಾಗೂ ಪ್ರಫುಲ್ಲ ಪಟೇಲರ ಮೇಲೆ ಮಧ್ಯಪ್ರದೇಶ, ಗೋವಾ ಮತ್ತು ಗುಜರಾತ್ ಈ ರಾಜ್ಯಗಳ ಜವಾಬ್ದಾರಿ ಇರಲಿದೆ.