(‘ಲಿವ್ ಇನ್ ರಿಲೇಶನ್ ಶಿಪ್’ ಎಂದರೆ ವಿವಾಹವಾಗದೆ ಒಟ್ಟಿಗೆ ಇರುವುದು)
ಮುಂಬಯಿ – ಪಾಲಘರ್ ಜಿಲ್ಲೆಯ ಮೀರಾರೋಡ್ ನಲ್ಲಿ ‘ಲಿವ್ ಇನ್ ರಿಲೇಶನ್ ಶಿಪ್’ ನಲ್ಲಿದ್ದ ಪ್ರಿಯಕರನು ತನ್ನ ಪ್ರೇಯಸಿಯ ಶವವನ್ನು ತುಂಡು ಮಾಡಿ ಅದನ್ನು ಪ್ರೇಷರ್ ಕುಕ್ಕರಿನಲ್ಲಿ ಬೆಯಿಸಿದನು, ಅದರ ನಂತರ ಅವನು ಆಕೆಯ ಶರೀರದ ತುಂಡುಗಳನ್ನು ಸುಟ್ಟು ಪುರಾವೆ ನಾಶ ಮಾಡುವ ಪ್ರಯತ್ನ ಮಾಡಿದನು. ಮನುಷ್ಯತ್ವಕ್ಕೆ ಮಸಿ ಬಳಿಯುವ ಈ ಕೃತ್ಯ ನಡೆಸುವ ಆರೋಪಿಯ ಹೆಸರು ಮನೋಜ ಸಾನೆಯಾಗಿದ್ದೂ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಅವನನ್ನು ನ್ಯಾಯಾಲಯದಲ್ಲಿ ಹಾಜರು ಪಡಿಸಿದಾಗ ನ್ಯಾಯಾಲಯವು ಅವನಿಗೆ ಜೂನ್ ೧೬ ರ ವರೆಗೆ ಪೊಲೀಸ ಕಸ್ಟಡಿಯಲ್ಲಿ ಇರಿಸುವ ಆದೇಶ ನೀಡಿದೆ. ಕೊಲೆಗೀಡಾದ ಪ್ರೇಯಸಿಯ ಹೆಸರು ಸರಸ್ವತಿ ವೈದ್ಯ (ವಯಸ್ಸು ೩೨ ವರ್ಷ ) ಆಗಿದೆ. ಸರಸ್ವತಿಯ ಚಾರಿತ್ರದ ಬಗ್ಗೆ ಅನುಮಾನ ಇರುವುದರಿಂದ ಮನೋಜ ಇವನೇ ಆಕೆಯ ಹತ್ಯೆ ಮಾಡಿರುವ ಅನುಮಾನವಿದೆ.
ಮನೋಜ ಸಾನೆ ಮತ್ತು ಸರಸ್ವತಿ ವೈದ್ಯ ಇವರು ಮೀರಾರೋಡ್ ಇಲ್ಲಿಯ ಗೀತಾನಗರದಲ್ಲಿ ಒಂದು ಅಪಾರ್ಟ್ಮೆಂಟ್ ನಲ್ಲಿ ಕಳೆದ ೩ ವರ್ಷಗಳಿಂದ ‘ಲಿವ್ ಇನ್ ರಿಲೇಶನ್ ಶಿಪ್’ ನಲ್ಲಿ ವಾಸಿಸುತ್ತಿದ್ದರು. ಅವರು ವಾಸಿಸುತ್ತಿರುವ ಅಪಾರ್ಟ್ಮೆಂಟ್ ೭ನೇ ಮಹಡಿಯ ಮನೆಯಿಂದ ದುರ್ಗಂಧ ಬರುತ್ತಿರುವುದರಿಂದ ಜೂನ್ ೭ ರಂದು ಅವರ ಪಕ್ಕದ ಮನೆಯವರು ಪೊಲೀಸರನ್ನು ಕರೆಸಿದರು. ಪೊಲೀಸರು ಬೀಗ ಒಡೆದು ಮನೆಗೆ ಪ್ರವೇಶ ಮಾಡಿದಾಗ; ಅವರಿಗೆ ಮನುಷ್ಯನ ಕಾಲು ಕಂಡವು; ಆದರೆ ಧಂಡ ಇರಲಿಲ್ಲ. ಮನೆಯಲ್ಲಿ ಹುಡುಕಾಡಿದಾಗ ಅಡಿಗೆ ಮನೆಯ ಪಾತ್ರೆಯಲ್ಲಿ ಮತ್ತು ಬಕೇಟಿನಲ್ಲಿ ಶರೀರದ ಕೆಲವು ತುಂಡುಗಳು ಕತ್ತರಿಸಿ ಇಟ್ಟಿರುವುದು ಕಾಣಿಸಿತು. ಶರೀರದ ಕೆಲವು ತುಂಡುಗಳು ಕುಕ್ಕರಿನಲ್ಲಿ ಬೇಯಿಸಿದ್ದವು ಹಾಗೂ ಕೆಲವು ತುಂಡುಗಳು ಗ್ಯಾಸ್ ಮೇಲೆ ಸುಟ್ಟಿರುವುದು ಕಂಡುಬಂದಿತು. ಪ್ರಾಥಮಿಕ ಮಾಹಿತಿಯ ಪ್ರಕಾರ ಮನೋಜ ಇವನೇ ಸರಸ್ವತಿ ವೈದ್ಯ ಈಕೆಯ ಶರೀರದ ತುಂಡುಗಳನ್ನು ಮಿಕ್ಸಿಯಲ್ಲಿ ಪುಡಿ ಮಾಡಿ ನಾಯಿಗಳಿಗೆ ಹಾಕಿದ್ದನು ಹಾಗೂ ಕೆಲವು ತುಂಡುಗಳನ್ನು ಹತ್ತಿರದ ಮೋರಿಗೆ ಎಸೆದಿದ್ದನು. ಇದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇಲ್ಲಿಯವರೆಗೆ ಶವದ ತಲೆ ಪೊಲೀಸರಿಗೆ ಸಿಕ್ಕಿಲ್ಲ. ನಯಾನಗರ ಪೊಲೀಸ್ ಠಾಣೆಯ ಹಿರಿಯ ಪೊಲೀಸ ಅಧಿಕಾರಿ ಜಿತೇಂದ್ರ ವನಕೋಟೆ ಇವರು ೫ ದಿನಗಳ ಹಿಂದೆ ಈ ತ್ಯೆ ನಡೆದಿದೆ ಎಂದು ಮಾಹಿತಿ ನೀಡಿದ್ದಾರೆ. ಸಾನೆ ಇವನು ಶವವನ್ನು ತುಂಡು ಮಾಡುವುದಕ್ಕಾಗಿ ಉಪಯೋಗಿಸಿರುವ ಸಾಹಿತ್ಯ ಪೊಲೀಸರು ವಶಕ್ಕೆ ಪಡೆದಿದ್ದು ಮುಂದಿನ ತನಿಖೆ ನಡೆಯುತ್ತಿದೆ.
ಸಂಪಾದಕೀಯ ನಿಲುವು
|