ಹಸಿವಾಗುವ ಮೊದಲು ತಿನ್ನುವುದು ಹಾನಿಕರವಾಗಿದೆ !

‘ಹಸಿವು ಆಗದಿರುವುದು, ಎಂದರೆ ಶರೀರದಲ್ಲಿ ಹಸಿತನ(ಆರ್ದ್ರತೆ)ವಿದ್ದು ಅಗ್ನಿ ಮಂದವಾಗಿದೆ ಎಂದರ್ಥ. ಇಂತಹ ಸಮಯದಲ್ಲಿ ಊಟವನ್ನು ಮಾಡಿದರೆ ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ. ಅದರಿಂದ ಕೆಲವೊಮ್ಮೆ ಹೊಟ್ಟೆ ಉಬ್ಬುತ್ತದೆ, ಗ್ಯಾಸ್ ಆಗುತ್ತದೆ. ಸಾಮಾನ್ಯವಾಗಿ ಯೋಗ್ಯ ಪ್ರಮಾಣದಲ್ಲಿ ಸೇವಿಸಿದ ಆಹಾರ ೩ ಗಂಟೆಗಳ ನಂತರ ಜಠರದಿಂದ ಸಣ್ಣ ಕರುಳಿಗೆ ಹೋಗುತ್ತದೆ. ಆದ್ದರಿಂದ ಎರಡು ಆಹಾರಗಳ ನಡುವೆ ಕಡಿಮೆ ಪಕ್ಷ ೩ ಗಂಟೆಗಳ ಅಂತರವಿರಬೇಕು. ಹಸಿವಾಗದಿರುವಾಗ ಕೇವಲ ‘ಇಷ್ಟವಾಗುತ್ತದೆ ಅಥವಾ ‘ರುಚಿ ನೋಡಲು ತಿಂದರೆ ಅರ್ಧ ಜೀರ್ಣವಾಗಿರುವ ಆಹಾರದಲ್ಲಿ ಹೊಸ ಆಹಾರವನ್ನು ಸೇರಿಸಲಾಗುತ್ತದೆ ಮತ್ತು ಆರೋಗ್ಯಕ್ಕೆ ಹಾನಿ ಆಗುತ್ತದೆ.

೨. ಬಹಳಷ್ಟು ಜನರಿಗೆ ದಿನದಲ್ಲಿ ಆಗಾಗ ಶೇವು, ಚೂಡಾ, ಸಿಹಿ ತಿನಿಸು, ಡ್ರೈಫ್ರುಟ್ಸ್ ಮುಂತಾದವುಗಳನ್ನು ತಿನ್ನುವ ಅಭ್ಯಾಸವಿರುತ್ತದೆ. ಆರೋಗ್ಯದ ದೃಷ್ಟಿಯಿಂದ ಈ ಅಭ್ಯಾಸವನ್ನು ಬಿಡುವುದು ಆವಶ್ಯಕವಾಗಿದೆ. ಇಂತಹ ಪದಾರ್ಥಗಳನ್ನು ನಿಗದಿತ ಆಹಾರಸೇವನೆಯ ಸಮಯದಲ್ಲಿಯೇ ತಿನ್ನಬೇಕು.

೩. ಬೆಳಗ್ಗೆ ನೌಕರಿಯ ನಿಮಿತ್ತ ಮನೆಯಿಂದ ಹೊರಗೆ ಹೋಗುವಾಗ ಹಸಿವಾಗಿರದಿದ್ದರೆ ಜೊತೆಗೆ ಊಟದ ಅಥವಾ ತಿಂಡಿಯ ಡಬ್ಬಿಯನ್ನು ತೆಗೆದುಕೊಂಡು ಹೋಗಬೇಕು. ಕೆಲಸದ ಸ್ಥಳವನ್ನು ತಲುಪಿದ ನಂತರ ಹಸಿವಾದಾಗ ತಿಂದು ಕೆಲಸವನ್ನು ಮಾಡಬಹುದು. ಇದಕ್ಕಾಗಿ ಮನೆಯಿಂದ ಸ್ವಲ್ಪ ಬೇಗ ಹೊರಡಬೇಕು.

‘ಬೆಳಗ್ಗೆ ಶೌಚವಾಗದ ಹೊರತು ಮತ್ತು ಚೆನ್ನಾಗಿ ಹಸಿವಾಗದೇ ಆಹಾರ ಸೇವಿಸುವುದು,  ಇದು ಎಲ್ಲ ರೋಗಗಳಿಗೆ ಒಂದು ಮಹತ್ವದ ಕಾರಣವಾಗಿದೆ. ‘ಶೌಚವಾದ ನಂತರ ತೀವ್ರ ಹಸಿವಾದ ನಂತರವೇ ಆಹಾರವನ್ನು ಸೇವಿಸುವುದು, ಆರೋಗ್ಯಕರ ಜೀವನದ ಕೀಲಿಕೈ ಆಗಿದೆ.