ಉಮರೇಠ (ಗುಜರಾತ) ಇಲ್ಲಿ ಮತಾಂಧ ಮುಸಲ್ಮಾನರಿಂದ ಶಿವಮಂದಿರದ ಮೇಲೆ ಖಡ್ಗ ಮತ್ತು ಲಾಠಿಯಿಂದ ದಾಳಿ

ಅಪ್ರಾಪ್ತ ಹಿಂದೂ ಹುಡುಗಿಯನ್ನು ಚುಡಾಯಿಸಿದ ಬಗ್ಗೆ ಹಿಂದೂಗಳು ವಿರೋಧಿಸಿದ್ದರಿಂದ ದಾಳಿ !

ಉಮರೇಠ (ಗುಜರಾತ) – ಇಲ್ಲಿ ಜೂನ 4 ರಂದು ರಾತ್ರಿ ಮತಾಂಧ ಮುಸಲ್ಮಾನರು ಚಂದ್ರಮೌಳೇಶ್ವರ ಮಹಾದೇವ ದೇವಸ್ಥಾನದ ಮೇಲೆ ಖಡ್ಗ ಮತ್ತು ಕೋಲುಗಳ ಮೂಲಕ ದಾಳಿ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಕೆಲವು ಮತಾಂಧ ಮುಸಲ್ಮಾನರು ಅಪ್ರಾಪ್ತ ಹಿಂದೂ ಹುಡುಗಿಯನ್ನು ಚುಡಾಯಿಸಿದ್ದರಿಂದ ನಡೆದ ವಿವಾದದಿಂದ ಈ ಘಟನೆ ನಡೆದಿದೆ. ಈ ಪ್ರಕರಣದಲ್ಲಿ ಪೊಲೀಸರು 8 ಜನರನ್ನು ಬಂಧಿಸಿದ್ದು, ಇನ್ನುಳಿದ ಆರೋಪಿಗಳನ್ನು ಹುಡುಕುತ್ತಿದ್ದಾರೆ.

ಪೊಲೀಸರು ದೂರು ದಾಖಲಿಸಿಕೊಳ್ಳಲು ನಿರಾಕರಣೆ

(ಇಂತಹ ಪೊಲೀಸರ ಮೇಲೆ ದೂರು ದಾಖಲಿಸಿ ಅವರನ್ನು ನೌಕರಿಯಿಂದ ವಜಾಗೊಳಿಸಿದರೆ ಮಾತ್ರ ಇತರರಿಗೆ ಬುದ್ಧಿಬರುತ್ತದೆ !-ಸಂಪಾದಕರ ನಿಲುವು)

2 ಅಪ್ರಾಪ್ತ ಹಿಂದೂ ಹುಡುಗಿಯರು ಸ್ಕೂಟಿಯಿಂದ ಹೋಗುತ್ತಿದ್ದರು. ಅದರಲ್ಲಿ ಒಬ್ಬಳನ್ನು ಅವಳ ಮನೆಯ ಹತ್ತಿರ ಬಿಟ್ಟಾಗ 2 ಮತಾಂಧ ಮುಸಲ್ಮಾನರು ಅವಳನ್ನು ಚುಡಾಯಿಸಿ ಅವಳ ಕೈ ಹಿಡಿದನು. ಅವಳು ಕೂಗಾಡಿದಾಗ ಸ್ಥಳೀಯ ನಾಗರಿಕರು ಧಾವಿಸಿ ಬಂದರು. ಅದನ್ನು ನೋಡಿ ಮತಾಂಧ ಮುಸಲ್ಮಾನರು ಓಡಿ ಹೋದರು. ಈ ಘಟನೆಯ ದೂರನ್ನು ದಾಖಲಿಸಲು ಹುಡುಗಿ ಮತ್ತು ಅವಳ ಪೋಷಕರು ಪೊಲೀಸ ಠಾಣೆಗೆ ಹೋದಾಗ ಪೊಲೀಸರು ದೂರು ದಾಖಲಿಸಿಕೊಳ್ಳಲು ನಿರಾಕರಿಸಿದರು. ಪೋಷಕರು, ಪೊಲೀಸರು ಆರೋಪಿಗಳನ್ನು ರಕ್ಷಿಸುತ್ತಿದ್ದಾರೆ ಎಮದು ಆರೋಪಿಸಿದ್ದಾರೆ.

ಅದೇ ರಾತ್ರಿ ಹಿರ್ ಪಟೇಲ ಮತ್ತು ಅವನ ಸ್ನೇಹಿತರು ಸ್ಟೇಶನ ಮಾರ್ಗದಿಂದ ಹೋಗುತ್ತಿರುವಾಗ ಚುಡಾಯಿಸಿದ ಘಟನೆಯ ಚರ್ಚೆಯಾಗುತ್ತಿತ್ತು. ಈ ಚರ್ಚೆ ಅಲ್ಲಿ ಉಪಸ್ಥಿತರಿದ್ದ ಮತಾಂಧ ಮುಸಲ್ಮಾನರು ಕೇಳಿದರು ಮತ್ತು ಅವರು ಅವರಿಬ್ಬರೊಂದಿಗೆ ವಾದಿಸಿದರು. ತದನಂತರ ಮತಾಂಧ ಮುಸಲ್ಮಾನರು ಖಡ್ಗ ಮತ್ತು ಲಾಠಿಗಳನ್ನು ಹಿಡಿದುಕೊಂಡು ಬಂದರು ಮತ್ತು ಅವರು ಶಿವಮಂದಿರದ ಮೇಲೆ ದಾಳಿ ಮಾಡಿದರು. ಆ ಸಮಯದಲ್ಲಿ ರಸ್ತೆಯ ಮೇಲಿನ ದೀಪಗಳು ಅಕಸ್ಮಿಕವಾಗಿ ಆರಿಸಲಾಯಿತು.

ಹಿಂದೂಗಳನ್ನೇ ಬಂಧಿಸಿದ್ದರಿಂದ ಪೊಲೀಸ ಠಾಣೆಗೆ ಸುತ್ತುರೆಯಲಾಯಿತು !

(ಇದಕ್ಕೆ ಹೇಳುತ್ತಾರೆ `ಕಳ್ಳನನ್ನು ಬಿಟ್ಟು ಸನ್ಯಾಸಿಗೆ ಗಲ್ಲು’ ಇದು ಹಿಂದೂಗಳಿಗೆ ಅಪೇಕ್ಷಿತವಿಲ್ಲ. ಇದನ್ನೇ ಅವರು ಪೊಲೀಸ ಠಾಣೆಯಲ್ಲಿ ಸುತ್ತುವರೆದು ತೋರಿಸಿದರು. ಇದನ್ನು ಸರಕಾರ ಗಂಭೀರತೆಯಿಂದ ನೋಡುವುದು ಆವಶ್ಯಕವಾಗಿದೆ !-ಸಂಪಾದಕರ ನಿಲುವು)

ಈ ಘಟನೆಯ ಬಳಿಕ ಪೊಲೀಸರು 8 ಜನರನ್ನು ಬಂಧಿಸಿದ್ದಾರೆ. ಇದರಲ್ಲಿ ಹಿಂದೂ ಯುವಕರ ಸಮಾವೇಶವಿದೆ. ಈ ಯುವಕರನ್ನು ಬಂಧಿಸಿದ್ದರಿಂದ ಹಿಂದೂಗಳಲ್ಲಿ ಆಕ್ರೋಶದ ಅಲೆ ಎದ್ದಿದೆ ಮತ್ತು ಅವರು ಪೊಲೀಸ ಠಾಣೆಗೆ ಸುತ್ತುವರೆದರು. ಹಾಗೆಯೇ ಪೊಲೀಸ ಉಪನಿರೀಕ್ಷಕರು ಸುಳ್ಳು ದೂರು ದಾಖಲಿಸಿಕೊಂಡಿದ್ದಾರೆಂದು ಆರೋಪಿಸಿದರು.

ಸಂಪಾದಕರ ನಿಲುವು

ಗುಜರಾತ್ ನಲ್ಲಿ ಭಾಜಪ ಸರಕಾರವಿರುವುದರಿಂದ ಮತಾಂಧ ಮುಸಲ್ಮಾನರು ಈ ರೀತಿ ಧೈರ್ಯ ಮಾಡಬಾರದು ಮತ್ತು ಅವರ ಮೇಲೆ ಕಠಿಣ ಕ್ರಮ ಜರುಗಿಸಬೇಕು. ಅವರು ಮತ್ತೊಮ್ಮೆ ಧೈರ್ಯವನ್ನು ತೋರಿಸಬಾರದೆಂದು ಹಿಂದೂಗಳಿಗೆ ಅನಿಸುತ್ತದೆ !