ಮಹಾರಾಷ್ಟ್ರದ ಬಳಿಕ ಈಗ ಉತ್ತರಾಖಂಡದ 3 ದೇವಸ್ಥಾನಗಳಲ್ಲಿಯೂ ವಸ್ತ್ರಸಂಹಿತೆ ಜ್ಯಾರಿ !

ಮಹಾನಿರ್ವಾಣಿ ಆಖಾಡಾದಿಂದ ಘೋಷಣೆ !

(ವಸ್ತ್ರಸಂಹಿತೆ ಅಂದರೆ ದೇವಸ್ಥಾನವನ್ನು ಪ್ರವೇಶಿಸುವಾಗ ಧರಿಸುವ ವಸ್ತ್ರಗಳ ಸಂದರ್ಭದಲ್ಲಿನ ನಿಯಮಾವಳಿ)

ಮಹಾನಿರ್ವಾಣಿ ಅಖಾಡ, ಶ್ರೀಮಹಾಂತ್ ರವೀಂದ್ರ ಪುರಿ, ಕಾರ್ಯದರ್ಶಿ

ಋಷಿಕೇಶ (ಉತ್ತರಾಖಂಡ)- ಮಹಾರಾಷ್ಟ್ರದಲ್ಲಿನ ಅನೇಕ ದೇವಸ್ಥಾನಗಳಲ್ಲಿನ ಪ್ರವೇಶಕ್ಕೆ ಭಕ್ತರಿಗಾಗಿ ವಸ್ತ್ರಸಂಹಿತೆಯನ್ನು ಜ್ಯಾರಿಗೊಳಿಸುವ ಅಭಿನಂದನೀಯ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ. ಮಹಾರಾಷ್ಟ್ರದ ಬಳಿಕ ಈಗ ಉತ್ತರಾಖಂಡ ರಾಜ್ಯದ 3 ದೇವಸ್ಥಾನಗಳಲ್ಲಿಯೂ ಸ್ತ್ರೀಯರು ಹಾಗೂ ಯುವತಿಯರಿಗೆ ವಸ್ತ್ರಸಂಹಿತೆಯನ್ನು ಜ್ಯಾರಿಗೊಳಿಸಲಾಗಿದೆ. ಇದರಲ್ಲಿ ಹರಿದ್ವಾರದ ದಕ್ಷ ಪ್ರಜಾಪತಿ ದೇವಸ್ಥಾನ, ಪೌಡಿಯಲ್ಲಿರುವ ನೀಲಕಂಠ ಮಹಾದೇವ ದೇವಸ್ಥಾನ ಮತ್ತು ದೆಹರಾಡೂನನಲ್ಲಿರುವ ಟಪಕೇಶ್ವರ ಮಹಾದೇವ ದೇವಸ್ಥಾನಗಳು ಸೇರಿವೆ. ಈ ಮೂರು ದೇವಸ್ಥಾನಗಳ ಆಡಳಿತವನ್ನು ಮಹಾನಿರ್ವಾಣಿ ಆಖಾಡ ನಿರ್ವಹಿಸುತ್ತದೆ.

ಸ್ಥಳೀಯ ಮಾಧ್ಯಮಗಳು ನೀಡಿರುವ ಮಾಹಿತಿಯನುಸಾರ ಹುಡುಗಿಯರಿಗೆ `ಸ್ಕರ್ಟ ಅಥವಾ ಶಾರ್ಟ ಧರಿಸಿ ದೇವಸ್ಥಾನವನ್ನು ಪ್ರವೇಶಿಸಲು ಅನುಮತಿಯಿರುವುದಿಲ್ಲ. ಮಹಿಳೆಯರ ಶರೀರವು ಶೇ. 80 ಕ್ಕಿಂತಲೂ ಹೆಚ್ಚು ಮುಚ್ಚಿರಬೇಕು ಎಂದು ಮಹಾನಿರ್ವಾಣಿ ಆಖಾಡಾ ಜಾರಿಗೊಳಿಸಿರುವ ಆದೇಶದಲ್ಲಿ ಹೇಳಲಾಗಿದೆ. ಅಖಾಡಾದ ಸಚಿವ ಮಹಂತ ರವಿಂದರ ಪುರಿಯವರು ಮಾತನಾಡುತ್ತಾ, ಭಕ್ತರು ದೇವಸ್ಥಾನಗಳಿಗೆ ಸ್ವದೇಶಿ ಪಾರಂಪರಿಕ ವಸ್ತ್ರಗಳನ್ನು ಧರಿಸಿಯೇ ಹೋಗಬೇಕು. ದೇವಸ್ಥಾನದ ಪಾವಿತ್ರ್ಯವನ್ನು ರಕ್ಷಿಸುವಂತೆ ಈ ಮೊದಲು ಜನರಿಗೆ ಕರೆ ನೀಡಲಾಗಿತ್ತು. ಈಗ ಇದಕ್ಕಾಗಿ ಆದೇಶವನ್ನು ಜ್ಯಾರಿಗೊಳಿಸಬೇಕಾಗಿದೆ. ದೆಹರಾಡೂನನಲ್ಲಿರುವ ಟಪಕೇಶ್ವರ ಮಹಾದೇವ ದೇವಸ್ಥಾನದಲ್ಲಿ ಈ ಕುರಿತು ಒಂದು ಫಲಕವನ್ನೂ ಹಚ್ಚಲಾಗಿದೆ ಎಂದು ಹೇಳಿದ್ದಾರೆ.