ಕೇಂದ್ರ ಅಮಿತ್ ಶಾ ಅವರೊಂದಿಗೆ ಪ್ರತಿಭಟನಾ ನಿರತ ಕುಸ್ತಿಪಟುಗಳ ಚರ್ಚೆ

ನವ ದೆಹಲಿ – ಮಹಿಳಾ ಕುಸ್ತಿಪಟುಗಳ ಲೈಂಗಿಕ ಶೋಷಣೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಒಂದು ತಿಂಗಳಿನಿಂದ ಜಂತರಮಂತರನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಭಾರತೀಯ ಕುಸ್ತಿಪಟುಗಳೊಂದಿಗೆ ಕೇಂದ್ರ ಗೃಹಸಚಿವ ಅಮಿತಶಹಾ ಇವರು ಜೂನ 4 ರಂದು ರಾತ್ರಿ ಸುಮಾರು ಒಂದೂವರೆ ಗಂಟೆಯವರೆಗೆ ಚರ್ಚಿಸಿದರು. ಸಾಕ್ಷಿ ಮಲಿಕ, ವಿನೇಶ ಫೋಗಾಟ, ಮತ್ತು ಬಜರಂಗ ಪುನಿಯಾ ಇವರು ಗೃಹಸಚಿವ ಅಮಿತ ಶಹಾ ಇವರನ್ನು ಭೇಟಿಯಾಗಿ ಚರ್ಚಿಸಿದರು. ‘ಯಾವುದೇ ರೀತಿಯ ಭೇದಭಾವವನ್ನು ಎಣಿಸದೇ ತನಿಖೆಯನ್ನು ಕೈಕೊಳ್ಳಲಾಗುವುದು’ ಎಂದು ಅಮಿತ್ ಶಹಾ ಇವರು ಕುಸ್ತಿಪಟುಗಳಿಗೆ ಆಶ್ವಾಸನೆಯನ್ನು ನೀಡಿದರು. ಭಾರತೀಯ ಕುಸ್ತಿ ಮಹಾಸಂಘದ ಅಧ್ಯಕ್ಷ ಮತ್ತು ಭಾಜಪ ಸಂಸದ ಭ್ರಿಜಭೂಷಣ ಸಿಂಹ ಇವರ ಬಂಧನದ ವಿಷಯದಲ್ಲಿ ಮಾತನಾಡುತ್ತಾ, ‘ಕಾನೂನಿನ್ವಯ ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಾಗುವುದು’ ಎಂದೂ ಶಹಾ ಇವರು ಸ್ಪಷ್ಟಪಡಿಸಿದರು.

ಅಪ್ರಾಪ್ತ ವಯಸ್ಸಿನ ಮಹಿಳಾ ಕುಸ್ತಿಪಟುವಿನಿಂದ ಬ್ರಿಜಭೂಷಣ ಸಿಂಹ ಇವರ ಮೇಲಿನ ಆರೋಪ ಹಿಂದಕ್ಕೆ !

ಬ್ರಿಜಭೂಷಣ ಸಿಂಹರ ವಿರುದ್ಧ ಮಹಿಳಾ ಕುಸ್ತಿಪಟುಗಳು ಲೈಂಗಿಕ ಶೋಷಣೆಯ ಆರೋಪವನ್ನು ಹೊರಿಸಿ ಪ್ರತಿಭಟನೆಯನ್ನು ನಡೆಸಿರುವ ಸಂದರ್ಭದಲ್ಲಿ ಅಪ್ರಾಪ್ತ ವಯಸ್ಸಿನ ಓರ್ವ ಮಹಿಳಾ ಕುಸ್ತಿಪಟು ತನ್ನ ಆರೋಪವನ್ನು ಹಿಂಪಡೆದಿದ್ದಾಳೆ. ದೆಹಲಿ ಪೊಲೀಸರು ಈ ಅಪ್ರಾಪ್ತ ವಯಸ್ಸಿನ ಕುಸ್ತಿಪಟುವಿನ ವಿವರಣೆಯನ್ನು (ಉತ್ತರವನ್ನು) ಪಟಿಯಾಲಾ ಹೌಸ ನ್ಯಾಯಾಲಯದಲ್ಲಿ ದಾಖಲಿಸಿದ್ದಾರೆ.