ಮೈಸೂರು ಮುಕ್ತ ವಿಶ್ವವಿದ್ಯಾಲಯದ ಸ್ವಾತಂತ್ರ್ಯವೀರ ಸಾವರಕರರ ಹೆಸರಿನಲ್ಲಿ ನಡೆಯಲಿದ್ದ ಕಾರ್ಯಕ್ರಮವನ್ನು ತಡೆಯಲು ವಿಶ್ವವಿದ್ಯಾಲಯ ಮಾಡಿದ ಪ್ರಯತ್ನ ವಿಫಲ !

ಮೈಸೂರು – ಇಲ್ಲಿಯ ಮೈಸೂರು ಮುಕ್ತ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ `ಸಾವರಕರ ಪ್ರತಿಷ್ಠಾನ’ ವತಿಯಿಂದ `ವೀರ ಸಾವರಕರ ಪುರಸ್ಕಾರ’ ಸಮಾರಂಭದ ನಿಮಿತ್ತ ಮಕ್ಕಳಿಗೆ ಚಿತ್ರಕಲೆ, ರಕ್ತದಾನ ಶಿಬಿರ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು; ಆದರೆ ಮುಕ್ತ ವಿಶ್ವವಿದ್ಯಾಲಯದ ಕುಲಪತಿಗಳು ಯಾವುದೇ ಕಾರಣವನ್ನು ನೀಡದೇ ಕಾರ್ಯಕ್ರಮದ ಅನುಮತಿಯನ್ನು ರದ್ದುಗೊಳಿಸಿದರು ಮತ್ತು ಸಭಾಂಗಣದ ಪ್ರವೇಶದ್ವಾರಕ್ಕೆ ಬೀಗ ಹಾಕಿದರು. ಇದರಿಂದ ಮಕ್ಕಳು ಪ್ರವೇಶದ್ವಾರದ ಎದುರು ಚಿತ್ರಗಳನ್ನು ಬಿಡಿಸಲು ಪ್ರಾರಂಭಿಸಿದರು. ತದನಂತರ ಭದ್ರತಾದೃಷ್ಟಿಯಿಂದ ಹೆಚ್ಚುವರಿ ಪೊಲೀಸ ಬಂದೋಬಸ್ತ ನಿಯೋಜಿಸಲಾಯಿತು. ಪರಿಸ್ಥಿತಿ ಕೈಮೀರುವ ಸಂಶಯದಿಂದ ವಿಶ್ವವಿದ್ಯಾಲಯದ ಅಧಿಕಾರಿಗಳು ಪ್ರವೇಶದ್ವಾರವನ್ನು ತೆರೆದು ಸಭಾಂಗಣದಲ್ಲಿ ಕಾರ್ಯಕ್ರಮವನ್ನು ನಡೆಸಲು ಅನುಮತಿ ನೀಡಿದರು.

(ಸೌಜನ್ಯ : Tv9 Kannada)

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಭಾಜಪ ಶಾಸಕ ಪ್ರತಾಪ ಸಿಂಹ ಇವರು ಮಾತನಾಡುತ್ತಾ, ಕಾಂಗ್ರೆಸ್ ಸರಕಾರ ಸಾವರಕರರ ಕಾರ್ಯಕ್ರಮವನ್ನು ತಡೆಯಲು ಪ್ರಯತ್ನಿಸಿತು. ಕಾಂಗ್ರೆಸ್ಸಿಗರು ಯಾವಾಗಲೂ ಸಾವರಕರರನ್ನು ವಿರೋಧಿಸುತ್ತಾರೆ. ಕಾಂಗ್ರೆಸ್ ಸರಕಾರ ಪೊಲೀಸ ಬಲದಿಂದ ನಮ್ಮನ್ನು ತುಳಿಯುವ ಕೆಲಸವನ್ನು ಮಾಡುತ್ತಿದೆ; ಆದರೆ ನಾವು ಕಾಂಗ್ರೆಸ್ಸಿನ ಬೆದರಿಕೆಗಳಿಗೆ ಬಗ್ಗುವುದಿಲ್ಲ ಎಂದು ಹೇಳಿದರು.