ನಾನು ಸೇವಾನಿವೃತ್ತ ಆಗುವವರೆಗೆ ರಾಮ ಜನ್ಮ ಭೂಮಿ ವಿಷಯದ ವಿಚಾರಣೆ ತಪ್ಪಿಸಲು ನನ್ನ ಮೇಲೆ ಬಹಳ ಒತ್ತಡ ಇರುತ್ತಿತ್ತು ! – ನ್ಯಾಯಮೂರ್ತಿ ಸುಧೀರ ಅಗ್ರವಾಲ

ಅಲಹಾಬಾದ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಸುಧೀರ ಅಗ್ರವಾಲ ಇವರ ಆಘಾತಕಾರಿ ಮಾಹಿತಿ !

ಮೆರಠ (ಉತ್ತರ ಪ್ರದೇಶ) – ಅಯೋಧ್ಯೆಯಲ್ಲಿನ ರಾಮಜನ್ಮ ಭೂಮಿಯ ಪ್ರಕರಣದ ವಿಚಾರಣೆ ತಪ್ಪಿಸುವುದಕ್ಕಾಗಿ ನನ್ನ ಮೇಲೆ ಬಹಳ ಒತ್ತಡ ಇತ್ತು. ಕೇವಲ ಪರಿವಾರ ಮತ್ತು ಸಂಬಂಧಿಕರು ಅಷ್ಟೇ ಅಲ್ಲದೆ, ಹೊರಗಿನವರಿಂದ ಕೂಡ ನನ್ನ ಮೇಲೆ ಒತ್ತಡ ಇತ್ತು. ನಾನು ಸೇವಾನಿವೃತ ಆಗೋವವರೆಗೂ ಈ ವಿಷಯದ ವಿಚಾರಣೆ ತಪ್ಪಿಸಲು ನನಗೆ ಹೇಳಲಾಗಿತ್ತು. ನಾನು ಸಪ್ಟೆಂಬರ್ ೩೦, ೨೦೧೦ ರಂದು ತೀರ್ಪು ನೀಡದಿದ್ದರೆ ಆಗ ಮುಂದಿನ ೨೦೦ ವರ್ಷ ಈ ಪ್ರಕರಣದ ವಿಚಾರಣೆ ನಡೆಯುತ್ತಿರಲಿಲ್ಲ, ಎಂದು ಅಲಹಾಬಾದ್ ಉಚ್ಚ ನ್ಯಾಯಾಲಯದ ತತ್ಕಾಲಿನ ನ್ಯಾಯಮೂರ್ತಿ ಸುಧೀರ ಅಗ್ರವಾಲ ಇವರು ಆಘಾತಕಾರಿ ಮಾಹಿತಿ ನೀಡಿದರು. ಅವರು ಇಲ್ಲಿ ಒಂದು ಕಾರ್ಯಕ್ರಮಕ್ಕೆ ಉದ್ದೇಶಿಸಿ ಮಾತನಾಡುತ್ತಿದ್ದರು.

೧. ಅಯೋಧ್ಯೇಯ ಶ್ರೀರಾಮಜನ್ಮಭೂಮಿ ಪ್ರಕರಣದಲ್ಲಿ ನ್ಯಾಯಮೂರ್ತಿ ಅಗ್ರವಾಲ್ ಇವರು ಮೂರು ಸದಸ್ಯರ ಖಂಡ ಪೀಠದಲ್ಲಿ ಭಾಗಿಯಾಗಿದ್ದರು. ಅವರಲ್ಲದೆ ನ್ಯಾಯಮೂರ್ತಿ ಎಸ್.ಯು. ಖಾನ್ ಮತ್ತು ಡಿ.ವಿ .ಶರ್ಮ ಇವರು ಖಂಡಪೀಠದಲ್ಲಿದ್ದರು. ಸುಧೀರ ಅಗ್ರವಾಲ ಏಪ್ರಿಲ್ ೨೩, ೨೦೨೦ ರಂದು ಸೇವಾ ನಿವೃತ್ತರಾದರು.

೨. ೨೦೧೦ ರಲ್ಲಿ ಅಲಹಾಬಾದ ಉಚ್ಚ ನ್ಯಾಯಾಲಯವು ಶ್ರೀರಾಮಜನ್ಮ ಭೂಮಿ ಪ್ರಕರಣದ ತೀರ್ಪು ನೀಡುವಾಗ, ಅಯೋಧ್ಯೆಯಲ್ಲಿನ ೨.೭೭ ಎಕರೆ ಭೂಮಿಯನ್ನು ಸುನ್ನಿ ವಕ್ಫ್ ಬೋರ್ಡ್, ನಿರ್ಮೋಹಿ ಅಖಾಡ ಮತ್ತು ರಾಮಲಲ್ಲಾ ನ ಪ್ರತಿನಿಧಿ ಹಿಂದೂ ಮಹಾಸಭಾ ಇವರಲ್ಲಿ ಸಮಾನ ರೀತಿಯಲ್ಲಿ ವಿಭಜನೆ ಮಾಡಬೇಕು. ಸಂಕ್ಷಿಪ್ತವಾಗಿ ಮೂರನೇ ಎರಡು ಭಾಗದಲ್ಲಿ ಹಿಂದುಗಳ ಪ್ರಭಾವ ಇರುವಂತೆ ಈ ನಿರ್ಣಯದಲ್ಲಿ ಹೇಳಲಾಗಿತ್ತು.

೩. ಇದರ ಬಗ್ಗೆ ಮೂರು ಪಕ್ಷಗಳು ಕೂಡ ಸ್ವೀಕೃತಿ ನೀಡಿರಲಿಲ್ಲ. ಮುಂದೆ ಎಂದರೆ ನವಂಬರ್ ೨೦೧೯ ರಂದು ಸರ್ವೋಚ್ಚ ನ್ಯಾಯಾಲಯವು ‘ಸಂಪೂರ್ಣ ಕ್ಷೇತ್ರದಲ್ಲಿ ಶ್ರೀರಾಮಮಂದಿರವೇ ಕಟ್ಟಲಾಗುವುದು’, ಎಂದು ಆದೇಶ ನೀಡಿತು ಹಾಗೂ ‘ಇತರ ಸ್ಥಳಗಳಲ್ಲಿ ೫ ಎಕರೆ ಭೂಮಿಯನ್ನು ಮುಸಲ್ಮಾನರಿಗೆ ಮಸೀದಿ ಕಟ್ಟುವುದಕ್ಕಾಗಿ ನೀಡಬೇಕೆಂದು’ ನ್ಯಾಯಾಲಯವು ಹೇಳಿತ್ತು ಎಂದು ಹೇಳಿದರು.