ನವ ದೆಹಲಿ – ನಾನು ಶೇಕಡಾ ನೂರರಷ್ಟು ಸಲಿಂಗಕಾಮ ವಿವಾಹ ವಿರೋಧಿಸುತ್ತೇನೆ ಎಂದು ಸರ್ವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶ ಕುರಿಯನ್ ಜೋಸೆಫ್ ಇವರು ಹೇಳಿಕೆ ನೀಡಿದರು. ‘ಲೈವ್ ಲಾ’ ಈ ವಾರ್ತಾ ಜಾಲತಾಣವು ಈ ವಾರ್ತೆಯನ್ನು ಪ್ರಸಾರ ಮಾಡಿದೆ.
ಮಾಜಿ ನ್ಯಾಯಾಧೀಶ ಕುರಿಯನ್ ಜೋಸೆಫ್ ಇವರು,
೧. ವಿವಾಹದ ಉದ್ದೇಶ ಬೇರೆ ಆಗಿರುತ್ತೆ. ವಿವಾಹದ ಮೂಲವು ಪುರುಷ ಮತ್ತು ಸ್ತ್ರೀಯರ ಮಿಲನವಾಗಿರುತ್ತದೆ. ಸಲಿಂಗ ಕಾಮ ಸಂಬಂಧ ಇದು ‘ಯೂನಿಯನ್’ ಅಥವಾ ‘ಅಸೋಸಿಯೇಷನ್’ ಈ ರೀತಿ ಇರುತ್ತದೆ . ವಿವಾಹದ ನಂತರ ಸ್ತ್ರೀ ಮತ್ತು ಪುರುಷ ಒಟ್ಟಾಗಿ ಮಗುವಿಗೆ ಜನ್ಮ ನೀಡುತ್ತಾರೆ.
೨. ಸಲಿಂಗ ಕಾಮದಲ್ಲಿ ವಿವಾಹ ನೈತಿಕತೆಯ ವಿರುದ್ಧವಾಗಿದೆ. ಸಲಿಂಗ ಸಂಬಂಧ ಹೊಂದುವುದು, ಒಟ್ಟಾಗಿ ಇರುವುದು, ಸ್ನೇಹ ಇರುವುದು, ಗಾಢವಾದ ಸ್ನೇಹ ಇರುವುದು, ವಿಶೇಷವಾದ ಸ್ನೇಹಿತ ಇರುವುದು ಇದೆಲ್ಲವೂ ಇರಬಹುದು; ವಿವಾಹ ಇದು ಬೇರೆ ಸಂಕಲ್ಪನೆ ಆಗಿದೆ. ವಿವಾಹಕ್ಕೆ ಸಮಾಜದಲ್ಲಿ ಒಂದು ವಿಶೇಷ ಸ್ಥಾನವಿದೆ. ಸಲಿಂಗ ಕಾಮದ ಸಂಬಂಧ ಇದು ವಿವಾಹದ ಮೂಲ ಉದ್ದೇಶದ ಮೇಲೆ ಪ್ರಭಾವ ಬೀರಬಹುದಾಗಿದೆ.
೩. ಸಲಿಂಗ ಕಾಮ ವಿವಾಹದಲ್ಲಿ ಇರುವಂತಹ ಅಂಶಗಳು ಧರ್ಮ ಮತ್ತು ಸಂಸ್ಕೃತಿ ಇವುಗಳ ಜೊತೆಗೆ ಘನಿಷ್ಟವಾಗಿ ಜೋಡಿಸಲ್ಪಟ್ಟಿದೆ. ಈ ಅಂಶಗಳ ಮೇಲೆ ನೈತಿಕ ಮಟ್ಟದಲ್ಲಿ ಚರ್ಚೆ ನಡೆಯಬೇಕು. ಇದನ್ನು ನೋಡಿದರೆ ಒಂದು ಬೇರೆ ದೃಷ್ಟಿಕೋನ ಇರಬೇಕು; ಆದರೆ ಈಗ ಈ ಪ್ರಕರಣ ಸರ್ವೋಚ್ಚ ನ್ಯಾಯಾಲಯದಲ್ಲಿದೆ. ಆದ್ದರಿಂದ ನಾನು ಇದರ ಬಗ್ಗೆ ಹೆಚ್ಚೇನೂ ಮಾತನಾಡಲು ಇಚ್ಚಿಸುವುದಿಲ್ಲ ಎಂದು ಹೇಳಿದರು.