|
ಬಾಲಾಸೋರ (ಓಡಿಸ್ಸಾ) – ಇಲ್ಲಿಯ ನಡೆದ ರೇಲ್ವೆ ಅಪಘಾತದ ಬಳಿಕ ಸರಕಾರದಿಂದ ರಕ್ಷಣಾ ಕಾರ್ಯ ಪ್ರಾರಂಭಿಸುವುದರೊಂದಿಗೆ ಆಸ್ಪತ್ರೆಯಲ್ಲಿಯೂ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಇದೇ ಸಮಯದಲ್ಲಿ ಕೆಲವು ಸಾಮಾಜಿಕ ಸಂಸ್ಥೆಗಳಲ್ಲದೇ ಹಿಂದೂತ್ವನಿಷ್ಠ ಸಂಘಟನೆಗಳೂ ಸಹಾಯಕ್ಕಾಗಿ ತಲುಪಿವೆ. ಬಜರಂಗ ದಳ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘಗಳಿಂದಲೂ ಸಹಾಯ ಕಾರ್ಯವನ್ನು ಮಾಡುತ್ತಿದೆ.
1. ಸಂಘ ಮತ್ತು ಬಜರಂಗ ದಳದ ಕಾರ್ಯಕರ್ತರು ಆಸ್ಪತ್ರೆಗೆ ತೆರಳಿ ಗಾಯಾಳುಗಳಿಗೆ ಊಟ, ಹಣ್ಣಿನ ರಸ, ನೀರು ಮುಂತಾದ ಅಗತ್ಯ ಸಾಮಗ್ರಿಗಳನ್ನು ಕೊಡುತ್ತಿದ್ದಾರೆ. ಹಾಗೆಯೇ ಅನೇಕ ಕಾರ್ಯಕರ್ತರು ರಕ್ತದಾನ ಮಾಡುತ್ತಿದ್ದಾರೆ. ಈ ವಿಷಯದಲ್ಲಿ ಬಜರಂಗ ದಳದಿಂದ ತನ್ನ ಅಧಿಕೃತ ಟ್ವಿಟರ ಖಾತೆಯಿಂದ ಟ್ವೀಟ ಮಾಡಿ ಮಾಹಿತಿಯನ್ನು ನೀಡಿದೆ. ಎರಡೂ ಸಂಘಟನೆಗಳ 250 ಕ್ಕಿಂತಲೂ ಹೆಚ್ಚಿನ ಕಾರ್ಯಕರ್ತರು ಅಪಘಾತದ ಬಳಿಕ ಘಟನಾ ಸ್ಥಳವನ್ನು ತಲುಪಿದ್ದರು ಮತ್ತು ಅವರು ಗಾಯಾಳುಗಳನ್ನು ಬೋಗಿಯಿಂದ ಹೊರಗೆ ತೆಗೆಯಲು, ಆಸ್ಪತ್ರೆಗೆ ತಲುಪಿಸುವ ಕಾರ್ಯವನ್ನು ಮಾಡಿದರು.
2. ಓಡಿಸ್ಸಾ ಸಂಘದ ವಿಭಾಗೀಯ ಪ್ರಚಾರ ಪ್ರಮುಖ ರವಿನಾರಾಯಣ ಪಂಡಾ ಇವರು ಮಾತನಾಡುತ್ತಾ, `ಅಪಘಾತ ನಡೆದಿರುವ ಬಹಾನಗಾ ಗ್ರಾಮದಲ್ಲಿ ಸಂಘದ ಅನೇಕ ಕಾರ್ಯಕರ್ತರು ವಾಸಿಸುತ್ತಾರೆ. ಅಪಘಾತದ ಮಾಹಿತಿ ಸಿಗುತ್ತಲೇ ಅವರು ತಕ್ಷಣವೇ ಅಪಘಾತಸ್ಥಳಕ್ಕೆ ಧಾವಿಸಿದರು ಮತ್ತು ಅವರು ರಕ್ಷಣಾಕಾರ್ಯವನ್ನು ಪ್ರಾರಂಭಿಸಿದರು. ಕಾರು, ಬೈಕ್, ಟ್ರ್ಯಾಕ್ಟರ ಮುಂತಾದವುಗಳ ಸಹಾಯದಿಂದ ಅವರು ಗಾಯಾಳುಗಳನ್ನು ಆಸ್ಪತ್ರೆಗೆ ತಲುಪಿಸಿದರು.’ ಎಂದು ಹೇಳಿದರು.
Hundreds of Hindu activists helped in Balasore rescue ops, RSS, ABVP among first to reach spot, Bajrang Dal help survivors, donate blood too: Detailshttps://t.co/AHNC5hPCgJ
— OpIndia.com (@OpIndia_com) June 4, 2023
ಸಂಪಾದಕರ ನಿಲುವುಎಷ್ಟು ಮುಸ್ಲಿಂ ಮತ್ತು ಕ್ರೈಸ್ತ ಸಂಘಟನೆಗಳು ಇಂತಹ ಕಾರ್ಯವನ್ನು ಮಾಡುತ್ತವೆ ? ಹಿಂದೂಗಳ ಈ ಸಂಘಟನೆಯ ಮೇಲೆ ನಿಷೇಧ ಹೇರುವಂತೆ ಕೋರುವ ಎಷ್ಟು ರಾಜಕೀಯ ಪಕ್ಷಗಳ ಕಾರ್ಯಕರ್ತರು ಸಹಾಯಕ್ಕಾಗಿ ಧಾವಿಸಿದರು ಎಂದೂ ಅವರು ಹೇಳಬೇಕು ! |