ಮಣಿಪುರದಲ್ಲಿ ಹಿಂಸಾಚಾರ ಮುಂದುವರಿಕೆ !

7 ಜನರ ಶವ ಪತ್ತೆ

ಇಂಫಾಲ (ಮಣಿಪುರ) – ಮಣಿಪುರದಲ್ಲಿ ಕಳೆದ ತಿಂಗಳಿನಿಂದ ಪ್ರಾರಂಭವಾಗಿರುವ ಹಿಂಸಾಚಾರ ನಿಂತಿಲ್ಲ. ಕೇಂದ್ರ ಗೃಹಸಚಿವ ಅಮಿತ ಶಹಾ ಇವರ ಪ್ರವಾಸದ ಬಳಿಕವೂ ಇಲ್ಲಿ ಹಿಂಸಾಚಾರ ಮುಂದುವರಿದಿದೆ. ಕಳೆದ 24 ಗಂಟೆಗಳಲ್ಲಿ ಮೈತೇಯಿ ಮತ್ತು ಕುಕಿ ಪಂಗಡದವರ ಗ್ರಾಮಗಳಲ್ಲಿ ನಡೆದ ಆಕ್ರಮಣದಲ್ಲಿ ಅನೇಕ ಜನರು ಗಾಯಗೊಂಡಿದ್ದಾರೆ. ಭದ್ರತಾಪಡೆಗಳು ಕಕಚಿಂಗ ಪ್ರದೇಶದ ಸುಗನೂ ಅರಣ್ಯದಿಂದ 7 ಶವಗಳನ್ನು ಹೊರಗೆ ತೆಗೆದಿದ್ದಾರೆ ಈ ಶವಗಳು ಮೇ 28 ರಂದು ಕ್ರೈಸ್ತ ಕುಕಿ ಬಂಡುಕೋರರು ನಡೆಸಿದ ಆಕ್ರಮಣದಲ್ಲಿ ಹತ್ಯೆಗೀಡಾಗಿರುವ ಹಿಂದೂ ಮೈತೇಯಿ ಜನರಾಗಿದ್ದಾರೆಂದು ಹೇಳಲಾಗುತ್ತಿದೆ. ಘಟನೆಯ ಬಳಿಕ ಈ ಪರಿಸರದ 10 ಗ್ರಾಮಸ್ಥರು ನಾಪತ್ತೆಯಾಗಿದ್ದಾರೆಂದು ಮಾಹಿತಿಯಿದೆ. ರಾಜ್ಯದಲ್ಲಿ ಹಿಂದೂ ಮೈತೇಯಿ ಪಂಗಡದವರನ್ನು ಪರಿಶಿಷ್ಟ ಜಾತಿಪಂಗಡದ ಸ್ಥಾನಮಾನ ನೀಡುವ ಕೋರಿಕೆಯ ವಿರುದ್ಧ ಕ್ರೈಸ್ತ ಕುಕಿ ಸಮಾಜ ಹಿಂಸಾಚಾರ ನಡೆಸುತ್ತಿದೆ. ಭಾರತೀಯ ಸೈನ್ಯದ ವಕ್ತಾರ, ಜೂನ 3 ರಂದು ರಾಜ್ಯದ 40 ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ ಹೆಚ್ಚಿನ ಶಸ್ತ್ರಾಸ್ತ್ರಗಳು ಆಟೊಮೆಟಿಕ್ ಆಗಿದೆ ಎಂದು ಹೇಳಿದ್ದಾರೆ.