ಹೊಸ ಸಂಸತ್ ಭವನದಲ್ಲಿನ ಅಖಂಡ ಭಾರತದ ನಕ್ಷೆಯ ಬಗ್ಗೆ ನೇಪಾಳದ ಮಾಜಿ ಪ್ರಧಾನಮಂತ್ರಿಯ ಆಕ್ಷೇಪ

ಕಟ್ಮಾಂಡು (ನೇಪಾಳ) – ಭಾರತದ ಹೊಸ ಸಂಸತ್ ಭವನದಲ್ಲಿ ಹಾಕಲಾಗಿರುವ ಅಖಂಡ ಭಾರತದ ನಕ್ಷೆಯಿಂದ ನೇಪಾಳ ಸಹಿತ ಭಾರತದ ಎಲ್ಲಾ ನೆರೆಯ ದೇಶಗಳಲ್ಲಿ ಅನಾವಶ್ಯಕ ಮತ್ತು ಅಪಾಯಕಾರಿ ವಿವಾದ ನಿರ್ಮಾಣವಾಗಬಹುದು, ಎಂದು ನೇಪಾಳದ ಮಾಜಿ ಪ್ರಧಾನಮಂತ್ರಿ ಹಾಗೂ ನೇಪಾಳ ಸಮಾಜವಾದಿ ಪಕ್ಷದ ಅಧ್ಯಕ್ಷ ಬಾಬುರಾವ್ ಭಟ್ಟರಾಯ ಇವರು ಟ್ವೀಟ್ ಮೂಲಕ ಹೇಳಿದ್ದಾರೆ. ಈ ನಕ್ಷೆಯಲ್ಲಿ ನೇಪಾಳದ ಕಪಿಲವಸ್ತು ಮತ್ತು ಲುಂಬಿನಿ ಪ್ರದೇಶ ತೋರಿಸಲಾಗಿರುವುದರ ಬಗ್ಗೆ ಅವರು ನಕ್ಷೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.

ಭಟ್ಟರಾಯ ಮಾತು ಮುಂದುವರೆಸಿ, ಈ ನಕ್ಷೆಯಿಂದ ಭಾರತದ ನೆರೆಯ ಹೆಚ್ಚಿನ ದೇಶಗಳ ಜೊತೆ ಇರುವ ದ್ವಿಪಕ್ಷೀಯ ಸಂಬಂಧ ಹಾಳಾಗಬಹುದು ಹಾಗೂ ಅದರ ವಿಶ್ವಾಸಾರ್ಹತೆ ಕಡಿಮೆ ಆಗಬಹುದು. ಭಾರತೀಯ ನೇತೃತ್ವದಿಂದ ಈ ನಕ್ಷೆಯ ಬಗ್ಗೆ ವಾಸ್ತವಿಕ ಮಾಹಿತಿ ಮತ್ತು ಪರಿಣಾಮದ ಬಗ್ಗೆ ಹೇಳಬೇಕು ಎಂದು ಹೇಳಿದರು.

ಕೆ.ಪಿ. ಶರ್ಮ ಓಲಿ

ಮಾಜಿ ಪ್ರಧಾನ ಮಂತ್ರಿ ಕೆ.ಪಿ. ಶರ್ಮ ಓಲಿ ಇವರಿಂದಲೂ ವಿರೋಧ !

ಅಖಂಡ ಭಾರತದ ನಕ್ಷೆಗೆ ನೇಪಾಳದ ಭಾರತದ್ವೇಷಿ ಮತ್ತು ಚೀನಾ ಓಲೈಸುವ ಮಾಜಿ ಪ್ರಧಾನ ಮಂತ್ರಿ ಕೆ.ಪಿ. ಶರ್ಮ ಓಲಿ ಇವರು ಕೂಡ ಅಕ್ಷೇಪ ವ್ಯಕ್ತಪಡಿಸಿದ್ದಾರೆ. ಅವರು ಪ್ರಸ್ತುತ ಭಾರತದ ಪ್ರವಾಸದಲ್ಲಿರುವ ನೇಪಾಳದ ಪ್ರಧಾನ ಮಂತ್ರಿ ಪುಷ್ಪಕುಮಾರು ದಹಲ ಪ್ರಚಂಡ ಇವರು ಅಖಂಡ ಭಾರತದ ನಕ್ಷೆಯಲ್ಲಿ ನೇಪಾಳದ ೨ ಪ್ರಾಂತಗಳನ್ನು ಸೇರಿಸುರುವುದಕ್ಕಾಗಿ ವಿರೋಧ ವ್ಯಕ್ತಪಡಿಸಬೇಕು ಎಂದು ಹೇಳಿದರು.

ಸಂಪಾದಕೀಯ ನಿಲುವು

ಅಖಂಡ ಭಾರತದ ನಕ್ಷೆಯ ಮೂಲಕ ಭಾರತದ ಇತಿಹಾಸ ತೋರಿಸಲಾಗಿದೆ, ಅದು ಎಂದಿಗೂ ನಿರಾಕರಿಸಲಾಗದು. ಹಿಂದೆ ಭಾರತ ಅಖಂಡವಾಗಿತ್ತು ಮತ್ತು ಅದರಲ್ಲಿ ಯಾವ ಪ್ರದೇಶ ಇತ್ತು ಇದು ಅದರಲ್ಲಿ ತೋರಿಸಲಾಗಿದೆ. ಇದರಿಂದ ಯಾರಿಗೆ ಹೊಟ್ಟೆಯುರಿಯುತ್ತಿದ್ದರೆ ಅದಕ್ಕೆ ಹಾಸ್ಯಸ್ಪದ ಎಂದೇ ಹೇಳಬೇಕು !