ಮುಜಾಫ್ಫರ್‌ನಗರ (ಉತ್ತರ ಪ್ರದೇಶ) ದಲ್ಲಿನ ಪ್ರಕರಣ
(ಮಜರ್ ಎಂದರೆ ಮುಸ್ಲಿಮರ ಗೋರಿ)
ಮುಜಫ್ಫರ್ ನಗರ (ಉತ್ತರ ಪ್ರದೇಶ) – ಇಲ್ಲಿನ ಟೌನ ಹಾಲ್ ಬಳಿ ಇರುವ ಗೋರಿಯ ಮುಂಭಾಗದಲ್ಲಿ ರಾಜೇಶ್ ಗೋಯಲ್ ಎಂಬ ವ್ಯಕ್ತಿ ಫಲಕ ಹಾಕಿದ್ದರು. ಅದರ ಮೂಲಕ ‘ಹಿಂದೂಗಳು ಮಜಾರ್ ನ ಪೂಜೆ ಮಾಡಬಾರದು’ ಎಂದು ಮನವಿ ಮಾಡಲಾಗಿತ್ತು. ಈ ಮನವಿಯ ಫಲಕವನ್ನು ನಂತರ ಪೊಲೀಸರು ತೆಗೆದರು.
೧. ಈ ಫಲಕದಲ್ಲಿ, ‘ಹಿಂದೂ ಬಾಂಧವರು ದಯವಿಟ್ಟು ಮಜಾರ್ ನ ಪೂಜೆಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕು’ ಎಂದು ಬರೆಯಲಾಗಿತ್ತು. ನಮ್ಮ ಸನಾತನ ಧರ್ಮದಲ್ಲಿ ಎಲ್ಲಿಯೂ ಮಜಾರ್ ಅನ್ನು ಪೂಜಿಸಲು ಹೇಳಿಲ್ಲ. ಹಾಗಾಗಿ ಸನಾತನಿಯರನ್ನು ಮಜಾರ್ ನ ಪೂಜೆಯನ್ನು ನಿಲ್ಲಿಸುವಂತೆ ವಿನಂತಿಸುತ್ತೇನೆ’ ಎಂದು ಹೇಳಿದರು. ಈ ಫಲಕದ ಕೊನೆಯಲ್ಲಿ ‘ಜೈ ಹಿಂದು ರಾಷ್ಟ್ರ’ ಎಂದು ಬರೆಯಲಾಗಿತ್ತು.
೨. ರಾಜೇಶ್ ಗೊಯಲ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಉತ್ತರಾಖಂಡದ ಭಾಜಪ ಸರಕಾರ ಅಕ್ರಮ ಗೋರಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತಿದೆ. ಉತ್ತರ ಪ್ರದೇಶ ಸರಕಾರವು ರಾಜ್ಯದಲ್ಲಿರುವ ಎಲ್ಲಾ ಅಕ್ರಮ ಗೋರಿಗಳ ಮೇಲೆ ಬುಲ್ಡೋಜರ್ ಓಡಿಸಬೇಕೆಂಬುದು ನಮ್ಮ ಬೇಡಿಕೆ ಮಾಡಿದ್ದಾರೆ. (ಮೂಲತಃ ಇದನ್ನು ಸರಕಾರಕ್ಕೆ ಹೇಳ ಬೇಕಾಗಿಲ್ಲ. ಸರಕಾರವು ತಾವಾಗಿ ಕ್ರಮವನ್ನು ತೆಗೆದುಕೊಳ್ಳುಬೇಕೆಂದು ನಿರೀಕ್ಷಿಸಲಾಗಿದೆ ! – ಸಂಪಾದಕರು)