ಹಂತಕ ಸಾಹಿಲ್ ಖಾನ್ ಇವನಿಗೆ ಹತ್ಯೆಯ ಬಗ್ಗೆ ಸ್ವಲ್ಪವೂ ಕೂಡ ಪಶ್ಚಾತಾಪವಿಲ್ಲ !

ದೆಹಲಿಯ ಹಿಂದೂ ಹುಡುಗಿಯ ಹತ್ಯೆಯ ಪ್ರಕರಣ

ಮಹಮ್ಮದ್ ಸಾಹಿಲ್ ಖಾನ್

ನವದೆಹಲಿ – ಇಲ್ಲಿಯ ೧೬ ವರ್ಷದ ಸಾಕ್ಷಿಯ ಹತ್ಯೆ ಮಾಡಿರುವ ಮಹಮ್ಮದ್ ಸಾಹಿಲ್ ಖಾನ್ ಇವನಿಗೆ ನ್ಯಾಯಾಲಯವು ೨ ದಿನದ ಪೊಲೀಸ ಕಸ್ಟಡಿ ವಿಧಿಸಿದೆ. ಪೊಲೀಸರ ವಿಚಾರಣೆಯಲ್ಲಿ ಸಾಹಿಲ್ ‘ನಾನು ಈ ಹತ್ಯೆ ಮಾಡಿರುವುದರ ಬಗ್ಗೆ ನನಗೆ ಸ್ವಲ್ಪ ಕೂಡ ಪಶ್ಚಾತಾಪವಿಲ್ಲ’, ಎಂದು ಹೇಳಿರುವುದು ಸೂತ್ರಗಳಿಂದ ತಿಳಿದು ಬಂದಿದೆ. ಸಾಹಿಲ್ ಇವನು ಹತ್ಯೆಯ ೧೫ ದಿನ ಮೊದಲು ಚಾಕು ಕೊಂಡುಕೊಂಡಿದ್ದನು ಎಂದು ಪೊಲೀಸರು ಹೇಳಿದರು. ಅನಿರೀಕ್ಷಿತವಾಗಿ ನಡೆದಿರುವ ಪ್ರೇಮಭಂಗದಿಂದ ಅವನಿಗೆ ಸಿಟ್ಟು ಬಂದು ಅವನು ಸಾಕ್ಷಿಯ ಹತ್ಯೆ ಮಾಡಿರುವುದಾಗಿ ಕೂಡ ಹೇಳಿದ್ದಾನೆ.

೧. ಸಾಕ್ಷಿ ಅವಳ ಕೈ ಮೇಲೆ ಇನ್ನೊಬ್ಬ ಹುಡುಗನ ಹೆಸರಿನ ಟ್ಯಾಟೂ (ಹಚ್ಚೆ ಹಾಕಿಸಿಕೊಳ್ಳುವ ಒಂದು ಪ್ರಕಾರ) ಹಾಕಿಸಿಕೊಂಡಿದ್ದಳು. ಆಕೆ ಮೊದಲು ಪ್ರವೀಣ ಎಂಬ ಹುಡುಗನನ್ನು ಪ್ರೀತಿಸುತ್ತಿದ್ದಳು. ವರ್ಷದ ಹಿಂದೆ ಅವರಿಬ್ಬರಲ್ಲಿ ಮನಸ್ತಾಪವಾಗಿತ್ತು. ಅದರ ನಂತರ ಆಕೆ ಸಾಹಿಲನನ್ನು ಪ್ರೀತಿಸಿದಳು. ಕೆಲವು ದಿನಗಳಿಂದ ಸಾಕ್ಷಿಯು ಪ್ರವೀಣನ ಜೊತೆ ಮತ್ತೆ ಮಾತುಕತೆ ಆರಂಭಿಸಿದಳು. ಸಾಹಿಲಗೆ ಇದು ಸಿಟ್ಟು ಬರಿಸಿತು. ಅದರ ನಂತರ ಸಾಕ್ಷಿ ಸಾಹಿಲಗೆ ಪ್ರತಿಸಾದ ನೀಡುತ್ತಿರಲಿಲ್ಲ. ಸಾಹಿಲ್ ೪ ದಿನಗಳ ಹಿಂದೆ ಸಾಕ್ಷಿಗೆ ಯಾವುದೇ ಹುಡುಗನ ಜೊತೆ ಮಾತನಾಡಬಾರದು ಎಂದು ಬೆದರಿಕೆ ನೀಡಿದ್ದನು; ಆದರೆ ಸಾಕ್ಷಿ ಅದನ್ನು ತಿರಸ್ಕರಿಸಿದ್ದಳು.

೨. ಸಾಹಿಲ್ ತನ್ನ ‘ಇನ್ಸ್ಟಾಗ್ರಾಮ್ ಅಕೌಂಟ್ ನ ‘ಒಂದು ಪೋಸ್ಟ್ ನಲ್ಲಿ ‘ಪ್ರಪಂಚ ನನಗೆ ಶಾಂತವಾಗಿ ಬದುಕಲು ಬಿಡುವುದಿಲ್ಲ. ಭಯ ಹುಟ್ಟಿಸುವುದು ಅವಶ್ಯಕವಾಗಿದೆ, ಎಂದು ಪ್ರಚೋದನೆಕಾರಿ ವಿಷಯ ಪ್ರಸಾರ ಮಾಡಿದ್ದನು.

ಸಂಪಾದಕೀಯ ನಿಲುವು

ಇಂತಹ ಕೊಲೆಗಾರನ ವಿರುದ್ಧ ಆದಷ್ಟು ಬೇಗನೆ ಮೊಕದ್ದಮೆ ನಡೆಸಿ ಅವನಿಗೆ ಗಲ್ಲು ಶಿಕ್ಷೆ ವಿಧಿಸುವುದುಕ್ಕಾಗಿ ದೆಹಲಿ ಪೊಲೀಸರು ಪ್ರಯತ್ನ ಮಾಡುವುದು ಅವಶ್ಯಕ !