೨೦೦೦ ರೂಪಾಯಿಗಳ ನೋಟು ಬದಲಾವಣೆ ಮಾಡಲು ಗುರುತಿನ ಚೀಟಿಯನ್ನು ಅನಿವಾರ್ಯಗೊಳಿಸಲು ಒತ್ತಾಯಿಸಿರುವ ಮನವಿಯನ್ನು ನ್ಯಾಯಾಲಯವು ತಿರಸ್ಕರಿಸಿದೆ !

ನವದೆಹಲಿ – ಗುರುತಿನ ಚೀಟಿ ಇಲ್ಲದೆ ೨ ಸಾವಿರ ರೂಪಾಯಿಗಳ ನೋಟು ಬದಲಾವಣೆ ಮಾಡುವ ನೀಡುವ ನಿರ್ಣಯವನ್ನು ಪ್ರಶ್ನಿಸುವ ಮನವಿಯನ್ನು ದೆಹಲಿಯ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಸತೀಶ ಕುಮಾರ ಶರ್ಮ ಮತ್ತು ನ್ಯಾಯಮೂರ್ತಿ ಸುಬ್ರಹ್ಮಣ್ಯಂ ಪ್ರಸಾದರವರ ವಿಭಾಗೀಯ ಪೀಠವು ತಿರಸ್ಕರಿಸಿದೆ. ಇದರಿಂದಾಗಿ ಈಗ ಗುರುತಿನ ಚೀಟಿ ಇಲ್ಲದೆ ೨ ಸಾವಿರ ರೂಪಾಯಿಗಳ ನೋಟನ್ನು ಬದಲಾಯಿಸುವ ಮಾರ್ಗವು ಸುಲಭವಾಗಿದೆ. ಭಾರತೀಯ ರಿಝರ್ವ ಬ್ಯಾಂಕ್ ಮತ್ತು ಭಾರತೀಯ ಸ್ಟೇಟ್ ಬ್ಯಾಂಕಗಳು ಸ್ಲಿಪ್ ಅಥವಾ ಗುರುತಿನ ಚೀಟಿಯಿಲ್ಲದೇ ೨ ಸಾವಿರ ರೂಪಾಯಿಗಳ ನೋಟು ಬದಲಾವಣೆ ಮಾಡಿಕೊಡುವುದರ ಬಗ್ಗೆ ಸೂಚನೆಯನ್ನು ಹೊರಡಿಸಿದೆ . ಇದನ್ನು ನ್ಯಾಯವಾದಿ ಶ್ರೀ. ಅಶ್ವಿನಿಕುಮಾರ ಉಪಾಧ್ಯಾಯರವರು ದೆಹಲಿ ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು.

ನ್ಯಾಯವಾದಿ ಶ್ರೀ. ಅಶ್ವಿನಿ ಕುಮಾರ ಉಪಾಧ್ಯಾಯರವರು ಈ ಮನವಿಯಲ್ಲಿ ಹೇಳಿರುವ ಅಂಶಗಳು ಹೀಗಿವೆ. ೨ ಸಾವಿರ ರೂಪಾಯಿಯ ನೋಟು ಹೆಚ್ಚಿನ ಪ್ರಮಾಣದಲ್ಲಿ ಕೆಲವು ವ್ಯಕ್ತಿಗಳ ಬಳಿ ಇದೆ ಅಥವಾ ಪ್ರತ್ಯೇಕತಾವಾದಿಗಳು, ಭಯೋತ್ಪಾದಕರು ,ಕಮ್ಯುನಿಸ್ಟರು ಅಥವಾ ಮಾದಕ ವಸ್ತುಗಳ ಕಳ್ಳಸಾಗಾಣಿಕೆ ಮಾಡುವವರ ಬಳಿ ಇದೆ. ಹೀಗಿರುವಾಗ ಭಾರತೀಯ ರಿಝರ್ವ ಬ್ಯಾಂಕ್ ಮತ್ತು ಭಾರತೀಯ ಸ್ಟೇಟ್ ಬ್ಯಾಂಕ್ ಪ್ರಸಾರಗೊಳಿಸಿರುವ ಸೂಚನೆಯು ಸ್ವೇಚ್ಛೆ, ತರ್ಕಹೀನ ಮತ್ತು ಸಂವಿಧಾನದ ಕಲಂ ೧೪ರ ಉಲ್ಲಂಘನೆಯಾಗಿದೆ. ಆದುದರಿಂದ ನ್ಯಾಯಾಲಯವು ಭಾರತೀಯ ರಿಸರ್ವ ಬ್ಯಾಂಕ್ ಮತ್ತು ಭಾರತೀಯ ಸ್ಟೇಟ್ ಬ್ಯಾಂಕ್ ಗಳಿಗೆ ೨ ಸಾವಿರ ರೂಪಾಯಿಯ ನೋಟು ಬದಲಾಯಿಸಲು ಬರುವ ಗ್ರಾಹಕರ ಖಾತೆಯಲ್ಲಿಯೇ ಹಣ ಜಮಾ ಮಾಡಬೇಕು ಎಂಬ ಆದೇಶ ನೀಡಬೇಕು, ಇದರಿಂದ ಕಪ್ಪು ಹಣ ಮತ್ತು ಲೆಕ್ಕ ಇಲ್ಲದ ಹಣ ಇಟ್ಟುಕೊಳ್ಳುವವರನ್ನು ಪತ್ತೆ ಹಚ್ಚಲು ಸುಲಭವಾಗುತ್ತದೆ.

ಈ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ನಿರ್ಣಯವನ್ನು ಸಮರ್ಥಿಸುತ್ತ ೨ ಸಾವಿರ ರೂಪಾಯಿಯನ್ನು ಚಲಾವಣೆಯಿಂದ ತೆಗೆಯುವುದು ನೋಟು ಬಂದಿ ಆಗಿರದೇ ಕೇವಲ ಒಂದು ಕಾನೂನು ಪ್ರಕ್ರಿಯೆಯಾಗಿದೆ ಎಂದು ನ್ಯಾಯಾಲಯಕ್ಕೆ ಹೇಳಿದೆ.