ದೆಹಲಿಯಲ್ಲಿ ಮುಸಲ್ಮಾನ ಯುವಕನಿಂದ ಅಪ್ರಾಪ್ತ ಹಿಂದೂ ಹುಡುಗಿಯ ಅಮಾನುಷ ಹತ್ಯೆ  !

ಚಾಕುವಿನಿಂದ ೨೦ ಬಾರಿ ಇರಿದು ನಂತರ ಕಲ್ಲಿನಿಂದ ಜಜ್ಜಿ ಕೊಲೆ !

ಸ್ಥಳೀಯ ನಾಗರಿಕರಿಂದ ವೀಕ್ಷಕರ ಭೂಮಿಕೆ !

ನವದೆಹಲಿ – ಇಲ್ಲಿಯ ಶಹಾಬಾದ ಡೇರಿ ಪರಿಸರದಲ್ಲಿ ಸಾಹಿಲ್ ಎಂಬ ೨೦ ವರ್ಷದ ಮತಾಂಧ ಮುಸಲ್ಮಾನ ಯುವಕನು ೧೬ ವರ್ಷದ ಹಿಂದೂ ಹುಡುಗಿ ಸಾಕ್ಷಿ ಎಂಬಾಕೆಯನ್ನು ಮೊದಲು ಚಾಕುವಿನಿಂದ ೨೦ ಬಾರಿ ಇರಿದು ನಂತರ ಆಕೆಯನ್ನು ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಿದ್ದಾನೆ. ಈ ಘಟನೆಯ ಸಿಸಿಟಿವಿಯಲ್ಲಾದ ಚಿತ್ರೀಕರಣ ಎಲ್ಲೆಡೆ ಪ್ರಸಾರವಾಗಿದೆ. ಪೊಲೀಸರು ಸಾಹೀಲನನ್ನು  ಬೂಲಂದಶಹರನಲ್ಲಿ ಬಂಧಿಸಿದ್ದಾರೆ. ಘಟನೆಯ ಸಮಯದಲ್ಲಿ ಆ ದಾರಿಯಲ್ಲಿ ಹೋಗುತ್ತಿದ್ದ ಸಾಕಷ್ಟು ಜನರು ಈ ಘಟನೆ ಕೇವಲ ನೋಡುತ್ತಿದ್ದರು ; ಆದರೆ ಯಾರೂ ಕೂಡ ಮುಂದೆ ಬಂದು ಹುಡುಗಿಯನ್ನು ಕಾಪಾಡಲು ಪ್ರಯತ್ನಿಸದಿರುವುದು  ಈ ಚಿತ್ರಣದಿಂದ ಸ್ಪಷ್ಟವಾಗುತ್ತದೆ (ಸಮಾಜದಲ್ಲಿ ಪರಾಕಾಷ್ಠೆಯ ಸಂವೇದನಾಶೂನ್ಯತೆ! ಈ ರೀತಿ ತಮ್ಮ ಮಗಳ ಸಂದರ್ಭದಲ್ಲಿ ನಡೆದಿದ್ದರೆ, ಆಗ ಈ ಜನರು ವೀಕ್ಷಕರ ಭೂಮಿಕೆಯಲ್ಲಿ ಇರುತ್ತಿದ್ದರೇನು ? – ಸಂಪಾದಕರು) ಸಾಕ್ಷಿ ಮತ್ತು ಸಾಹಿಲ ಇವರ ನಡುವೆ ಪ್ರೇಮ ಪ್ರಕರಣ ಇತ್ತು. ಅವರಲ್ಲಿ ಮೇ ೨೮ ರಂದು ಜಗಳವಾಗಿತ್ತು ಎಂದು ಹೇಳಲಾಗುತ್ತಿದೆ. ಸಾಕ್ಷಿ ಆಕೆಯ ಸ್ನೇಹಿತೆಯ ಹುಟ್ಟು ಹಬ್ಬದ ಪ್ರಯುಕ್ತ ರಸ್ತೆಯಲ್ಲಿ ಹೋಗುವಾಗ ಅನಿರೀಕ್ಷಿತವಾಗಿ ಸಾಹಿಲ್ ಆಕೆಯನ್ನು ತಡೆದನು. ಅವರಿಬ್ಬರಲ್ಲಿ ಏನೋ ವಿವಾದ ನಡೆಯಿತು ಮತ್ತು ನಂತರ ಸಾಹಿಲ್ ಆಕೆಯ ಮೇಲೆ ಚಾಕುವಿನಿಂದ ದಾಳಿ ನಡೆಸಿದನು. ಅದರ ನಂತರ ಅವನು ಕಲ್ಲಿನಿಂದ ಸಾಕ್ಷಿಯನ್ನು ಜಜ್ಜಿದನು. ಅಲ್ಲಿಂದ ಅವನು ಓಡಿ ಹೋದನು. ಸಾಕ್ಷಿಯನ್ನು ಆಸ್ಪತ್ರೆಗೆ ಸೇರಿಸಲಾಯಿತು ; ಆದರೆ ಚಿಕಿತ್ಸೆಯ ಮೊದಲೇ ಆಕೆ ಸಾವನ್ನಪ್ಪಿದ್ದಳು.

(ಸೌಜನ್ಯ : WION)

ಮಣಿಕಟ್ಟಿಗೆ ಕೆಂಪು ದಾರ ಕಟ್ಟಿಕೊಂಡು ಗುರುತು ಮರೆಮಾಚಿದ್ದ ಸಾಹಿಲ್ !

ದೆಹಲಿ ಪೊಲೀಸರು ಉತ್ತರಪ್ರದೇಶದ ಬುಲಂದಶಹರನಿಂದ ಸಾಹಿಲನನ್ನು ಬಂಧಿಸಿದ್ದಾರೆ. ಆಗ ಅವನ ಮಣಿಕಟ್ಟಿಗೆ ಕೆಂಪು ದಾರ ಕಟ್ಟಿರುವುದು ಕಂಡು ಬಂದಿದೆ. ಮುಸಲ್ಮಾನನೆಂಬ ಗುರುತನ್ನು ಮರೆಮಾಚಿ ಹಿಂದೂ ಎಂದು ತೋರಿಸಲಿಕ್ಕಾಗಿ ಅವನು ಈ ಕೆಂಪು ದಾರ ಕಟ್ಟಿಕೊಂಡಿದ್ದನು. ಸಾಹಿಲ್ ಎಲೆಕ್ಟ್ರಿಕ್ ಯಂತ್ರಗಳ ದುರಸ್ತಿ ಕೆಲಸ ಮಾಡುತ್ತಿದ್ದನು, ಎಂದು ಮಾಹಿತಿ ಬೆಳಕಿಗೆ ಬಂದಿದೆ. ಅವನ ತಂದೆಯ ಹೆಸರು ಸರಫರಾಜ್ ಎಂದಾಗಿದೆ

ಸಾಹಿಲ್ ಗೆ  ಗಲ್ಲು ಶಿಕ್ಷೆ ವಿಧಿಸಿ ! ಮೃತ ಹುಡುಗಿಯ ತಾಯಿಯ ಒತ್ತಾಯ

ಮೃತ ಸಾಕ್ಷಿಯ ತಾಯಿ ಸಾಹಿಲನಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದ್ದಾರೆ. ಇತ್ತೀಚಿಗಷ್ಟೇ ಸಾಕ್ಷಿ ೧೦ ನೇ ತರಗತಿ ಪರೀಕ್ಷೆ ಉತ್ತೀರ್ಣಳಾಗಿದ್ದಳು. ಸಾಕ್ಷಿಯು ಯಾವತ್ತೂ ತನ್ನ ಮನೆಯಲ್ಲಿ ಸಾಹಿಲ ಬಗ್ಗೆ ಹೇಳಿರಲಿಲ್ಲ.

ದೆಹಲಿ ಮಹಿಳಾ ಆಯೋಗದಿಂದ ಪೊಲೀಸರಿಗೆ ನೋಟಿಸ್ !

ದೆಹಲಿ ಮಹಿಳಾ ಆಯೋಗದ ಅಧ್ಯಕ್ಷ ಸ್ವಾತಿ ಮಾಲಿವಾಲ ಇವರು ಈ ಘಟನೆಯ ಬಗ್ಗೆ, ಇಂತಹ ಕೊಲೆಗಾರರ ಮನೋಬಲ ಹೆಚ್ಚಾಗಿದೆ. ಎಲ್ಲಾ ಮಿತಿಗಳನ್ನು ಉಲ್ಲಂಘಿಸಲಾಗಿದೆ. ನನ್ನ ಜೀವನದಲ್ಲಿ ಇಂತಹ ಭಯಾನಕ ಪ್ರಕಾರ ಯಾವತ್ತೂ ನೋಡಿಲ್ಲ. ಈ ಘಟನೆಯಿಂದ ನಾವು ಪೋಲಿಸರಿಗೆ ನೋಟಿಸ್ ನೀಡುತ್ತಿದ್ದೇವೆ ಎಂದು ಹೇಳಿದ್ದಾರೆ

ಓಣಿ ಓಣಿ ಯಲ್ಲಿ ಇಂತಹ ಎಷ್ಟು ‘ ದ ಕೇರಳ ಸ್ಟೋರಿ ‘ ಘಟಿಸುತ್ತಿರುತ್ತವೆ ? – ಭಾಜಪ ಮುಖಂಡ ಕಪಿಲ್ ಮಿಶ್ರಾ

ಭಾಜಪದ ಮುಖಂಡ ಕಪಿಲ್ ಮಿಶ್ರಾ  ಇವರು ಟ್ವಿಟ್  ಮೂಲಕ ಈ ಘಟನೆಯನ್ನು ಟೀಕಿಸಿದ್ದಾರೆ. ಅವರು, ಓಣಿ ಓಣಿ ಯಲ್ಲಿ ಇಂತಹ ಎಷ್ಟು ‘ ದ ಕೇರಳ ಸ್ಟೋರಿ ಘಟಿಸಲಿವೆ ? ಹುಡುಗಿಯರನ್ನು ಎಲ್ಲಿಯವರೆಗೆ ಈ ರೀತಿ ನಿರ್ದಯದಿಂದ ಕೊಲ್ಲಲಾಗುವುದು. ಇದೇ ದೆಹಲಿಯಲ್ಲಿ ಶ್ರದ್ಧಾ ವಾಲಕರಳಿಗೂ ಇದೇ ರೀತಿಯಾಗಿದೆ. ಇಲ್ಲಿಯವರೆಗೆ ಅವನಿಗೆ ಗಲ್ಲು ಶಿಕ್ಷೆ ವಿಧಿಸಿಲ್ಲ. ಅವನು ಈಗಲೂ ಜೀವಂತವಾಗಿದ್ದಾನೆ. ಶ್ರದ್ಧಾಳ ಕೊಲೆಗಾರನಿಗೆ ಗಲ್ಲು ಶಿಕ್ಷೆ ವಿಧಿಸಿದರೆ, ಇಂದು ಸರಫರಾಜನ ಮಗ ಸಾಹಿಲ್ ಇಂದು ಈ ಕೃತ್ಯ ಮಾಡುವ ಧೈರ್ಯ ಮಾಡುತ್ತಿರಲಿಲ್ಲ’, ಎಂದು ಹೇಳಿದರು.

(ಸೌಜನ್ಯ: NYOOOZ TV)

ಸಂಪಾದಕರ ನಿಲುವು

* ರಾಜಧಾನಿ ದೆಹಲಿಯಲ್ಲಿನ ಈ ಘಟನೆ ದೆಹಲಿ ಪೊಲೀಸರಿಗೆ ಮತ್ತು ನಾಗರಿಕರಿಗೆ ಲಜ್ಜಾಸ್ಪದ ಪ್ರಸಂಗ !

* ಮತಾಂಧ ಮುಸಲ್ಮಾನ ಯುವಕರು ಹಿಂದೂ ಹುಡುಗಿಯರನ್ನು ಪ್ರೇಮದ ಜಾಲಕ್ಕೆ ಸಿಲುಕಿಸಿದ ನಂತರ ನಡೆಯುವ ಇಂತಹ ಘಟನೆಗಳನ್ನು ತಡೆಯಲು ಹಿಂದೂ ಹುಡುಗಿಯರಿಗೆ ಹಿಂದೂಗಳು ಧರ್ಮ ಶಿಕ್ಷಣ, ಹಾಗೂ ಸರಕಾರದಿಂದ ಸ್ವಸಂರಕ್ಷಣಾ ಪ್ರಶಿಕ್ಷಣ ನೀಡುವುದು ಅನಿವಾರ್ಯವಾಗಿದೆ .

* ದೇಶದಲ್ಲಿ ಎಲ್ಲಿಯೂ ಕೂಡ ಲವ್ ಜಿಹಾದಿಗಳಿಗೆ ಕಠಿಣ ಶಿಕ್ಷೆ ಆಗದೆ ಇರುವುದರಿಂದಲೇ ಅವರ ಮನೋಧೈರ್ಯ ಹೆಚ್ಚುತ್ತಿದೆ, ಇದು ಸರಕಾರಿ ವ್ಯವಸ್ಥೆಗೆ ಲಜ್ಜಾಸ್ಪದವಾಗಿದೆ. ಲವ್ ಜಿಹಾದಿಗಳಿಗೆ ಜನ್ಮದಲ್ಲಿ ಮರೆಯಲಾಗದಂತಹ ಪಾಠ ಕಲಿಸುವುದಕ್ಕಾಗಿ ಈಗ ಹಿಂದೂಗಳೆ ಸರಕಾರದ ಮೇಲೆ ಕಾನೂನು ರೀತ್ಯಾ  ಒತ್ತಡ ತರಬೇಕು.