ಭಾರತೀಯ ಸೇನೆಯ ಮೂರೂ ಪಡೆಗಳಲ್ಲಿ ಸೈನಿಕರ ಅದಲುಬದಲು ಮಾಡಲಾಗುವುದು !

ನವದೆಹಲಿ – ಭಾರತದ ಮೂರೂ ಸೈನ್ಯದಳಗಳಲ್ಲಿ ಮಾನವಶಕ್ತಿಯ ಅದಲುಬದಲು ನಡೆಯಲಿದೆ. ೪೦ ಸೈನ್ಯಾಧಿಕಾರಿಗಳ ಒಂದು ಗುಂಪು ಶೀಘ್ರದಲ್ಲಿಯೇ ಭಾರತೀಯ ವಾಯುಪಡೆ ಮತ್ತು ನೌಕಾಪಡೆಗೆ ಸೇರ್ಪಡೆಗೊಳ್ಳಲಿದೆ. ಇದರಲ್ಲಿಯೂ ಅವರು ಭೂಸೇನೆಯ ಹಾಗೆ ಕೆಲಸ ಮಾಡಲಿದ್ದಾರೆ. ವಾಯುಪಡೆ ಮತ್ತು ನೌಕಾಪಡೆಯ ಅಧಿಕಾರಿಗಳನ್ನೂ ಭೂಸೇನೆಗೆ ಸೇರಿಸಿಕೊಳ್ಳುವ ಸಾಧ್ಯತೆಯಿದೆ. ಮೇಜರ್ ಮತ್ತು ಲೆಫ್ಟಿನೆಂಟ್ ಕರ್ನಲ್ ಶ್ರೇಣಿಯಲ್ಲಿ ಕಾರ್ಯನಿರತರಾಗಿರುವ ಅಧಿಕಾರಿಗಳನ್ನೂ ಅದಲುಬದಲು ಮಾಡಲಾಗುವುದು. ಅಧಿಕಾರಿಯೊಬ್ಬರು, ಇಂತಹ ನೇಮಕಾತಿಯಿಂದ ಮೂರು ಪಡೆಗಳ ನಡುವಿನ ಸಮನ್ವಯವನ್ನು ಕಾಯ್ದಿರಿಸಬಹುದು, ಎಂದು ಹೇಳಿದರು.