ಕೊಡಂಕುರೂ – ಇಲ್ಲಿ ಕ್ರೈಸ್ತ ಪ್ರಾರ್ಥನಾಸ್ಥಳದ ಕಟ್ಟಡ ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಭಾಜಪ ಶಾಸಕರ ಆದೇಶ !

ಕೊಡಂಕುರೂ – ರಾಜ್ಯದ ಉಡುಪಿ ಜಿಲ್ಲೆಯ ಪುತ್ತೂರಿನ ಕೊಡಂಕುರೂ ಗ್ರಾಮದಲ್ಲಿ 1.73 ಎಕರೆ ಜಾಗದಲ್ಲಿ ಒಂದು ಕಟ್ಟಡದ ಕಾಮಗಾರಿ ಪ್ರಾರಂಭವಾಗಿತ್ತು. ಅಲ್ಲಿ ಕ್ರೈಸ್ತರ ಪ್ರಾರ್ಥನಾ ಸ್ಥಳವನ್ನು ನಿರ್ಮಾಣ ಮಾಡಲಾಗುತ್ತಿತ್ತೆಂದು ಆರೋಪಿಸಲಾಗುತ್ತಿದೆ. ಸ್ಥಳೀಯ ಹಿಂದೂ ಮತ್ತು ಹಿಂದುತ್ವನಿಷ್ಠ ಸಂಘಟನೆಗಳಲ್ಲಿ ಆಕ್ರೋಶದ ಅಲೆ ಎದ್ದಿದ್ದೂ, ಆ ಕ್ಷೇತ್ರದಲ್ಲಿ ಒಬ್ಬನೇ ಒಬ್ಬ ಕ್ರೈಸ್ತ ಇಲ್ಲದಿರುವಾಗ ಈ ಕಟ್ಟಡದ ಮಾಧ್ಯಮದಿಂದ ಹಿಂದೂಗಳ ಮತಾಂತರದ ಸಂಚು ರಚಿಸಲಾಗಿತ್ತು ಎಂದು ಅವರ ಭಾವನೆಯಿದೆ. ಇದರಿಂದ ಉಡುಪಿಯ ಭಾಜಪ ಶಾಸಕ ಯಶಪಾಲ ಸುವರ್ಣ ಇವರು ಈ ಕಾಮಗಾರಿಯನ್ನು ತಕ್ಷಣವೇ ನಿಲ್ಲಿಸುವಂತೆ ಸ್ಥಳೀಯ ಆಡಳಿತಾಧಿಕಾರಿಗಳಿಗೆ ಆದೇಶಿಸಿದ್ದಾರೆ. ಮತಾಂತರಕ್ಕಾಗಿಯೇ ಈ ಕಟ್ಟಡದ ನಿರ್ಮಾಣವಾಗುತ್ತಿರುವ ಬಗ್ಗೆ ದಾಖಲೆಗಳನ್ನು ಪರಿಶೀಲಿಸಿ ಮುಂದಿನ ಕ್ರಮವನ್ನು ಕೈಕೊಳ್ಳಲಾಗುವುದು ಎಂದು ಅವರು ಆಶ್ವಾಸನೆಯನ್ನು ನೀಡಿದ್ದಾರೆ. `ಈ ಕಟ್ಟಡ ಕಾಮಗಾರಿಗೆ ಅನಧಿಕೃತವಾಗಿ ಅನುಮತಿಯನ್ನು ನೀಡಲಾಗಿದ್ದು, ಅದನ್ನು ರದ್ದುಗೊಳಿಸಬೇಕು’ ಎಂದು ಸ್ಥಳೀಯ ಹಿಂದೂ ನಾಗರಿಕರು ಕೋರಿದ್ದಾರೆ.

ಸಂಪಾದಕರ ನಿಲುವು

  • ಪ್ರದೇಶದಲ್ಲಿ ಒಬ್ಬರೇ ಒಬ್ಬ ಕ್ರೈಸ್ತ ಇಲ್ಲದಿರುವಾಗ ಈ ಪ್ರಾರ್ಥನಾಸ್ಥಳದ ಮಾಧ್ಯಮದಿಂದ ಹಿಂದೂಗಳ ಮತಾಂತರದ ಸಂಚು ರಚಿಸಲಾಗಿದೆಯೆನ್ನುವುದು ಹಿಂದೂಗಳ ಭಾವನೆ !
  • ಹಿಂದೂಗಳ ಮತಾಂತರಕ್ಕಾಗಿ ಕ್ರೈಸ್ತರಿಂದ ಹೂಡಲಾದ ಷಡ್ಯಂತ್ರವನ್ನು ನಷ್ಟಗೊಳಿಸಲು ಹಿಂದೂ ಸಂಘಟನೆಗಳ ಆವಶ್ಯಕ !