ಗೋವಾದಲ್ಲಿ ‘ವಿವಿಧತೆ, ಸಮಾವೇಶಕತೆ ಮತ್ತು ಪರಸ್ಪರ ಗೌರವ’ ಈ ವಿಷಯದ ಬಗ್ಗೆ ‘ಸಿ ೨೦ ಪರಿಷತ್ !
ದಾಬೋಳಿ (ಗೋವಾ) – ‘ಜಿ 20’ ರಾಷ್ಟ್ರಗಳ ಅಧ್ಯಕ್ಷ ಸ್ಥಾನ ಭಾರತಕ್ಕೆ ಲಭಿಸಿರುವುದು ಐತಿಹಾಸಿಕ ವಿಷಯವಾಗಿದೆ. ಭಾರತವು ವಿಶ್ವಕ್ಕೆ ಯೋಗ, ಆಯುರ್ವೇದ ಮುಂತಾದ ಕೊಡುಗೆಗಳನ್ನು ನೀಡಿದೆ. ಭಾರತಕ್ಕೆ ಸಂಗೀತ, ನೃತ್ಯ, ಕಲೆ, ಸಾಹಿತ್ಯ, ಚಿತ್ರ, ಶಿಲ್ಪ ಮುಂತಾದ ಸಾಂಸ್ಕೃತಿಕ ಪರಂಪರೆ ಲಭಿಸಿದೆ. ಇದು ಎಲ್ಲರ ಜೊತೆಗೆ ಹಂಚಿಕೊಳ್ಳುವುದು ಆವಶ್ಯಕವಾಗಿದೆ. ಭಾರತವು ಕೇವಲ ಅಭಿವೃದ್ಧಿ ಹೊಂದುತ್ತಿರುವ ದೇಶವಷ್ಟೇ ಅಲ್ಲ, ಭಾರತವು ಅಭಿವೃದ್ಧಿಯ ಪಥದತ್ತ ಮತ್ತು ಸಾಮರ್ಥ್ಯಶಾಲಿಯಾಗಿ ವಿಶ್ವದಲ್ಲಿ ಉದಯಿಸುತ್ತಿದೆ. ಭಾರತದ ಈ ನವ ನಿರ್ಮಾಣದಲ್ಲಿ ಮತ್ತು ಭಾರತವನ್ನು ವಿಶ್ವಗುರು ಸ್ಥಾನಕ್ಕೆ ಕೊಂಡೊಯ್ಯಲು ಪ್ರತಿಯೊಬ್ಬ ಭಾರತೀಯರು ಸಹಭಾಗಿಯಾಗುವುದು ಆವಶ್ಯಕವಾಗಿದೆ ಎಂದು ಗೋವಾ ರಾಜ್ಯದ ಕಲೆ ಮತ್ತು ಸಾಂಸ್ಕೃತಿಕ ಸಚಿವರಾದ ಶ್ರೀ. ಗೋವಿಂದ ಗಾವಡೆ ಇವರು ಕರೆ ನೀಡಿದರು. ಅವರು ‘ಗೋವಾ ಆಡಳಿತ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಇಂಟರ್ನ್ಯಾಷನಲ್ ಸೆಂಟರ್ ಫಾರ್ ಕಲ್ಚರಲ್ ಸ್ಟಡೀಸ್ ಮತ್ತು ಭಾರತೀಯ ವಿದ್ಯಾ ಭವನ, ನವದೆಹಲಿ’ ಈ ಸಂಸ್ಥೆಗಳ ಸಂಯುಕ್ತ ಸಹಯೋಗದೊಂದಿಗೆ ಆಯೋಜಿಸಿದ್ದ ‘ಸಿ ೨೦’ ಪರಿಷತ್ತಿನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡುತ್ತಿದ್ದರು. ದಾಬೋಲಿ, ವಾಸ್ಕೊ, ಗೋವಾದ ‘ರಾಜಹಂಸ ನೌದಳ ಸಭಾಗೃಹದಲ್ಲಿ, ‘ವಿವಿಧತೆ, ಸಮಾವೇಶಕತೆ ಮತ್ತು ಪರಸ್ಪರ ಗೌರವ ಈ ವಿಷಯದ ಬಗ್ಗೆ ‘ಸಿ ೨೦’ ಪರಿಷತ್ತಿಗೆ ದೇಶ ವಿದೇಶದಿಂದ ಬಂದಿರುವ ಗೌರವಾನ್ವಿತರು ಮತ್ತು ೩೫೦ ಕೂ ಹೆಚ್ಚಿನ ವಿಶೇಷಜ್ಞರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಗೋವಾದ ಸಾಂಸ್ಕೃತಿಕ ಸಚಿವರಾದ ಶ್ರೀ. ಗೋವಿಂದ ಗಾವಡೆ, ‘ಇಂಟರ್ನ್ಯಾಷನಲ್ ಸೆಂಟರ್ ಫಾರ್ ಕಲ್ಚರಲ್ ಸ್ಟಡೀಸ್ನ ಅಧ್ಯಕ್ಷೆ ಮತ್ತು ‘ಸಿ ೨೦’ ಪರಿಷತ್ತಿನ ಅಂತರಾಷ್ಟ್ರೀಯ ಸಮನ್ವಯಕರಾದ ಪ್ರಾ. ಡಾ. ಶಶೀಬಾಲಾ, ‘ಸಿಂಗಾಪುರ್ ಇಂಡಿಯನ್ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ಸಮೂಹದ ಸದಸ್ಯರಾದ ಶ್ರೀ. ಮನೀಷ ತ್ರಿಪಾಟಿ, ಹಿಂದಿ ಚಲನಚಿತ್ರ ನಟಿ ಹಾಗೂ ಲೇಖಕಿ ಪೂಜಾ ಬೇದಿ, ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಂಶೋಧನಾ ಸಮನ್ವಯಕರಾದ ಸೌ. ಶ್ವೇತಾ ಕ್ಲಾರ್ಕ್ ಮತ್ತು ‘ಸ್ಪಿರಿಚುವಲ್ ಸೈನ್ಸ್ ರಿಸರ್ಚ್ ಫೌಂಡೇಶನ್’ ಈ ಜಾಲತಾಣದ ಸಂಪಾದಕರಾದ ಶ್ರೀ. ಶಾನ್ ಕ್ಲಾರ್ಕ್ ಇವರು ದೀಪ ಪ್ರಜ್ವಲನೆ ಮಾಡಿದರು. ಈ ಸಮಯದಲ್ಲಿ ‘ಸಿ ೨೦ ಪರಿಷತ್ತಿನ ಪ್ರಾ. ಡಾ. ಶಶೀಬಾಲಾ ಇವರು ‘ಸಿ ೨೦ ಪರಿಷತ್ತಿನ ಚಿಹ್ನೆಯಿರುವ ಎರಡು ಧ್ವಜಗಳನ್ನು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸೌ. ಶ್ವೇತಾ ಕ್ಲಾರ್ಕ್ ಮತು ಶ್ರೀ. ಶಾನ್ ಕ್ಲಾರ್ಕ್ ಇವರಿಗೆ ಹಸ್ತಾಂತರಿಸಿದರು. ಇದೇ ವೇಳೆ ಸಾಂಸ್ಕೃತಿಕ ಸಚಿವರಾದ ಶ್ರೀ. ಗೋವಿಂದ ಗಾವಡೆ ಇವರು ‘ಸಿ ೨೦ ಪರಿಷತ್ತಿನ ‘ವಸುದೈವ ಕುಟುಂಬಕಮ್’ ಸಂದೇಶ ನೀಡುವ ಸಂಗೀತಮಯ ವಿಡಿಯೋ ಲೋಕಾರ್ಪಣೆ ಮಾಡಲಾಯಿತು.
ನಾವು ಜಗತ್ತಿಗೆ ‘ವಸುದೈವ ಕುಟುಂಬಕಮ್ ಈ ಧ್ಯೇಯದವರೆಗೆ ಕರೆದುಕೊಂಡು ಹೋಗೋಣ ! – ಪ್ರಮೋದ ಸಾವಂತ್, ಮುಖ್ಯಮಂತ್ರಿಗಳು, ಗೋವಾ
ತದ ನಂತರ ಗೋವಾ ರಾಜ್ಯದ ಮುಖ್ಯಮಂತ್ರಿ ಡಾ. ಪ್ರಮೋದ ಸಾವಂತ ಇವರ ವಿಡಿಯೋ ಸಂದೇಶ ತೋರಿಸಲಾಯಿತು. ಇದರಲ್ಲಿ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್, ‘ವಿಶ್ವಶಾಂತಿ ಮತ್ತು ವೈಶ್ವಿಕ ವಿಕಾಸದ ದೃಷ್ಟಿಯಿಂದ ಗೋವಾದಲ್ಲಿ ನಡೆಯುವ ‘ಜಿ ೨೦ ಯ ಪರಿಷದ್ ಗೋಮಂತಕಿಯರಿಗಾಗಿ ಅಭಿಮಾನದ ವಿಷಯವಾಗಿದೆ. ಭಾರತವು ಜಗತ್ತಿನ ಆಧ್ಯಾತ್ಮಿಕ ರಾಜಧಾನಿಯಾಗಿದೆ. ಅದು ಜಿ ೨೦ ರಾಷ್ಟ್ರಗಳಿಗೆ ಐಕ್ಯತೆ, ಸಮೃದ್ಧಿ ಮತ್ತು ಸಮಾವೇಶಕತೆ ಈ ದಿಶೆಯಲ್ಲಿ ಕರೆದುಕೊಂಡು ಹೋಗಲಿದೆ. ಭಾರತಾದ್ಯಂತ ಈ ಪರಿಷತ್ತಿನ ಮೂಲಕ ಆರೋಗ್ಯ, ವಿಕಾಸ, ಪ್ರವಾಸಿತಾಣ, ಎನರ್ಜಿ, ಸ್ಟಾರ್ಟ್ ಅಪ್, ಮುಂತಾದ ವಿವಿಧ ವಿಷಯಗಳ ಬಗ್ಗೆ ಪರಿಷದ್‌ಗಳು ನಡೆಯುತ್ತಿವೆ. ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಇವರ ನೇತೃತ್ವದಲ್ಲಿ ಭಾರತ ಜಗತ್ತಿನ ನೇತೃತ್ವ ವಹಿಸಿಕೊಂಡಿದೆ. ‘ಸಿ ೨೦ ಪರಿಷತ್ತಿನ ಮಾಧ್ಯಮದಿಂದ ನಾವು ಜಗತ್ತಿಗೆ ವಸುದೈವ ಕುಟುಂಬಕಮ್, ಧ್ಯೇಯದವರೆಗೆ ಕರೆದುಕೊಂಡು ಹೋಗೋಣ ಎಂದರು.
ಶ್ರದ್ಧೆ ಮತ್ತು ಅಶ್ರದ್ದೆ ಇದರಲ್ಲಿ ಜಗತ್ತಿನ ವಿಭಜನೆ ಮಾಡಬಾರದು ! – ಪ್ರಾ. ಡಾ. ಶಶೀಬಾಲಾ
ಇಂದು ಜಗತ್ತಿನಲ್ಲಿ ಸಂಘರ್ಷ, ಭಯೋತ್ಪಾದನೆ ಮತ್ತು ಅರಾಜಕತೆಯ ವಾತಾವರಣವಿದೆ. ಮನುಷ್ಯ ನಿಸರ್ಗದ ಮಾಲಿಕನಾಗಿದ್ದಾನೆ. ಕಮ್ಯುನಿಸ್ಟ್, ಬಂಡವಾಳಶಾಹಿ ಮತ್ತು ವ್ಯಾಪಾರಿಕರಣದಿಂದ ಜಗತ್ತಿನಾದ್ಯಂತ ಅಗೌರವ, ಹಾಗೂ ವಿಶಿಷ್ಟ ವರ್ಗವನ್ನು ಬಹಿಷ್ಕರಿಸುವ ಪ್ರವೃತ್ತಿ ಹೆಚ್ಚಿದೆ. ಜಗತ್ತಿನಲ್ಲಿ ಹೆಚ್ಚಿರುವ ಈ ಸಂಘರ್ಷ ತ್ಯಾಗ, ತಪ, ಕರುಣೆ ಮತ್ತು ಪ್ರೇಮ ಇವುಗಳಿಂದ ನಷ್ಟವಾಗಬಹುದು. ಭಾರತೀಯ ಋಷಿಮುನಿಗಳು ಪ್ರತಿಪಾದಿಸಿರುವ ಕಲಿಕೆಯಿಂದ ಭಾರತ ಜಗತ್ತಿಗೆ ಮಾರ್ಗದರ್ಶನ ಮಾಡಬಹುದು. ಆಧ್ಯಾತ್ಮಿಕ ಮಾರ್ಗದಲ್ಲಿ ಜಗತ್ತಿನಲ್ಲಿ ಎಲ್ಲಾ ಸಮಸ್ಯೆಗಳಿಗೆ ಉಪಾಯ ಹುಡುಕುವ ಕ್ಷಮತೆ ಇದೆ. ನಾವು ಶ್ರದ್ಧೆಯುಳ್ಳವರು (ಬಿಲಿವರ್ಸ್) ಮತ್ತು ಅಶ್ರದ್ದೆ (ನಾನ್ ಬಿಲಿವರ್ಸ್) ಇವರಲ್ಲಿ ಜಗತ್ತನ್ನು ವಿಭಜಿಸಬಾರದು, ಎಂದು ‘ಸಿ ೨೦ ಪರಿಷತ್ತಿನ ಅಂತರಾಷ್ಟ್ರೀಯ ಸಮನ್ವಯಕರಾದ ಪ್ರಾ. ಡಾ. ಶಶೀಬಾಲಾ ಇವರು ಪ್ರತಿಪಾದಿಸಿದರು.
ದೇವಸ್ಥಾನದಲ್ಲಿನ ಸಕಾರಾತ್ಮಕ ಊರ್ಜೆಯು ಎಲ್ಲರ ಮೇಲೆ ಒಳ್ಳೆಯ ಪರಿಣಾಮ ಬೀರುತ್ತದೆ ! – ಶ್ರೀಮತಿ ಶ್ವೇತಾ ಕ್ಲಾರ್ಕ್
ಭಾರತದಲ್ಲಿನ ದೇವಸ್ಥಾನಗಳು ಭಾರತದ ಗೌರವಶಾಲಿ ಪರಂಪರೆಗೆ ಮೂರ್ತಿರೂಪ ನೀಡಿದೆ, ಜೊತೆಗೆ ಭಾರತದ ಸಮೃದ್ಧ ಸಂಸ್ಕೃತಿಯ ಸಾಕ್ಷಿ ನೀಡುತ್ತದೆ. ದೇವಸ್ಥಾನದ ಅದ್ವಿತೀಯತೆಯ ಬಗ್ಗೆ ಮಾಹಿತಿ ನೀಡುವಾಗ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಂಶೋಧನಾ ಸಮನ್ವಯಕರಾದ ಶ್ರೀಮತಿ ಶ್ವೇತಾ ಕ್ಲಾರ್ಕ್ ಇವರು ಧನಬಾದ್(ಜಾರ್ಖಂಡ್) ಇಲ್ಲಿಯ ಸ್ವಯಂಭೂ ಮಹಾದೇವ ದೇವಸ್ಥಾನದಲ್ಲಿನ ತಮ್ಮ ಸ್ವಂತದ ಅನುಭವ ಹಂಚಿಕೊಂಡರು. ಶ್ವೇತಾ ಇವರು, ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರ ಮೇಲೆ ಅವರು ಯಾವುದೇ ಧರ್ಮದವರಾಗಿರಲಿ ಅಲ್ಲಿಯ ಸಕಾರಾತ್ಮಕ ಊರ್ಜೆಯು ಅವರ ಮೇಲೆ ಒಳ್ಳೆಯ ಪರಿಣಾಮ ಬೀರುತ್ತದೆ, ಇದು ‘ಯೂನಿವರ್ಸಲ್ ಔರಾ ಸ್ಕ್ಯಾನರ್ ಈ ವೈಜ್ಞಾನಿಕ ಉಪಕರಣದ ಮೂಲಕ ನಡೆಸಿರುವ ಪ್ರಯೋಗದಲ್ಲಿ ಸಿದ್ದವಾಗಿದೆ ಎಂದರು.
ಈ ವೇಳೆ ಪ್ರತಿಷ್ಠಿತ ಗೌರವಾನ್ವಿತರಲ್ಲಿ ‘ಸಿಂಗಾಪೂರ್ ಇಂಡಿಯನ್ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ, ಸಮೂಹದ ಸದಸ್ಯರಾದ ಶ್ರೀ. ಮನೀಶ ತ್ರಿಪಾಠೀ, ‘ಪ್ರಾಚೀನ ಪರಂಪರೆ ಮತ್ತು ತಂತ್ರಜ್ಞಾನದ ಮೂಲಕ ಮಾನವೀಯತೆಯ ಸಾಮೂಹಿಕ ಚೇತನ ಹೆಚ್ಚಿಸುವ ಶ್ರೀ. ಅಜಿತ ಪದ್ಮನಾಭ, ಗೋವಾದ ಶ್ರೀನಿವಾಸ್ ಸಿನಾಯಿ ಟೆಂಪೋ ಕಾಲೇಜ್ ಆಫ್ ಕಾಮರ್ಸ್ ಅಂಡ್ ಎಕನಾಮಿಕ್ಸ್‌ನ ಪ್ರಾಚಾರ್ಯ ಹಾಗೂ ಸಾಹಿತಿ, ಲೇಖಕ ಪ್ರಾ.(ಡಾ.) ಮನೋಜ ಕಾಮತ್, ಗೋವಾ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಶ್ರೀ. ಮಹೇಶ ಪಾಟೀಲ, ಸಂತ ಈಶ್ವರ್ ಫೌಂಡೇಶನ್‌ನ ರಾಷ್ಟ್ರೀಯ ಸಚಿವ ವೃಂದಾ ಖನ್ನಾ, ‘ಆಯುರ್ವೇದ ಮತ್ತು ನಿಸರ್ಗೋಪಚಾರ ತಜ್ಞ ಡಾ. ನಿಶಿ ಭಟ್ಟ, ಪಾರ್ಕ್ ಹಾಸ್ಟೆಲ್‌ನ ಮಹಾವ್ಯವಸ್ಥಾಪಕರಾದ ಶ್ರೀ. ಸೌರಭ ಖನ್ನಾ, ಸೆಲಬೋಟ್ ನಿಂದ ಒಬ್ಬರೇ ಪೃಥ್ವಿ ಪ್ರದಕ್ಷ್ಷಿಣೆ ಹಾಕಿದ ಮೊಟ್ಟಮೊದಲ ಭಾರತೀಯ ಕ್ಯಾಪ್ಟನ್ ದಿಲೀಪ್ ಡೊಂಡೇ ಇವರ ಅಧ್ಯಯನಪೂರ್ಣ ಮಾರ್ಗದರ್ಶನ ಮತ್ತು ಪ್ರಸ್ತುತೀಕರಣ ನಡೆಯಿತು.