ಹಿಂದೂ ರಾಷ್ಟ್ರವಲ್ಲ ರಾಮರಾಜ್ಯ ಬೇಕು !- ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ

ಜ್ಯೋತಿಷ್ಯ ಪೀಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದರ ಹೇಳಿಕೆ

ಜ್ಯೋತಿಷ್ಯ ಪೀಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ

ಇಂದೂರ (ಮಧ್ಯಪ್ರದೇಶ) – ಹಿಂದೂ ರಾಷ್ಟ್ರದಿಂದ ನಮಗೆ ಒಳ್ಳೆಯದಾಗುವುದಿಲ್ಲ. ನಮಗೆ ರಾಮರಾಜ್ಯ ಬೇಕಾಗಿದೆಯೆಂದು ಜ್ಯೋತಿಷ್ಯಪೀಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿಯವರು ಛಿಂದವಾಡಾದಲ್ಲಿ ಪತ್ರಕರ್ತರೊಂದಿಗೆ ಮಾತನಾಡುವಾಗ ಹೇಳಿದರು.

ಜಾತ್ಯತೀತ ರಾಷ್ಟ್ರದ ವಿಷಯದ ಅಸಂತೋಷವೇ ಹಿಂದೂ ರಾಷ್ಟ್ರದ ಕೋರಿಕೆಯ ಕಾರಣ !

ಶಂಕರಾಚಾರ್ಯರು ತಮ್ಮ ಮಾತನ್ನು ಮುಂದುವರಿಸುತ್ತಾ, ಜಾತ್ಯತೀತ ರಾಷ್ಟ್ರದ ವಿಷಯದಲ್ಲಿ ಜನರಲ್ಲಿ ಇರುವ ಅಸಧಾನವೇ ಹಿಂದೂ ರಾಷ್ಟ್ರದ ಕೋರಿಕೆಯ ಮುಖ್ಯ ಕಾರಣವಾಗಿರಬಹುದು; ಆದರೆ ಹಿಂದೂ ರಾಷ್ಟ್ರ ಬಂದರೆ ಇತರೆ ಧರ್ಮದ ಜನರಲ್ಲಿ ಪರಕೀಯ ಭಾವನೆ ನಿರ್ಮಾಣವಾಗಬಹುದು. ಒಂದೇ ತೊಂದರೆಯೆಂದರೆ, ಸಧ್ಯಕ್ಕೆ ಧ್ರುವೀಕರಣದ ರಾಜಕಾರಣ ನಡೆದಿದೆ. ಜನರಲ್ಲಿ ಒಂದು ನಿಲುವನ್ನು ತಾಳಿದ್ದಾರೆ. ಆ ನಿಲುವಿನೊಳಗೆ ತಾವು ಇದ್ದೇವೆಯೋ ಎಂಬುದು ನೋಡುತ್ತಾರೆ. ಅದರಲ್ಲಿರುವವರು ಕೆಟ್ಟವರಾಗಿದ್ದರೂ, ಒಳ್ಳೆಯವರಾಗಿರುತ್ತಾರೆ ಮತ್ತು ಅದರಲ್ಲಿ ಇಲ್ಲದಿರುವವರು ಒಳ್ಳೆಯವರಾಗಿದ್ದರೂ, ಕೆಟ್ಟವರಾಗಿರುತ್ತಾರೆ. ನಾವೇ ಈ ನಡತೆಯ ಪದ್ಧತಿಯನ್ನು ನಿರ್ಮಿಸಿದ್ದೇವೆ. ನಿಜವಾಗಿ ಹೇಳಬೇಕೆಂದರೆ ರಾಜಕಾರಣ ಈ ಶಬ್ದ ಬಹಳ ಉನ್ನತವಾಗಿದೆ. ಅದು ಧರ್ಮದಷ್ಟು ದೊಡ್ಡದಾಗಿದೆ. `ರಾಜಕೀಯವೆಂದರೆ ರಾಜನು ಪಾಲಿಸಿದ ಧೋರಣೆ’ ಎಂದು ಅದರ ಅರ್ಥವಾಗುತ್ತದೆ. ರಾಮಾಯಣ ಮತ್ತು ಮಹಾಭಾರತದಲ್ಲಿ ರಾಜಕೀಯ ಶಬ್ದದ ಉಪಯೋಗವಾಗಿತ್ತು. ಇತ್ತೀಚೆಗೆ ಆ ರಾಜಕೀಯ ಉಳಿದಿಲ್ಲ ಎಂದು ಹೇಳಿದರು.

(ಸೌಜನ್ಯ : TV9 Madhya Pradesh Chhattisgarh)

ಸಂಪಾದಕರ ನಿಲುವು

* ಹಿಂದೂರಾಷ್ಟ್ರದ ಮೂಲಕ ರಾಮರಾಜ್ಯದ ನಿರ್ಮಾಣವಾಗಲಿರುವುದರಿಂದ ಮೊದಲು ಹಿಂದೂರಾಷ್ಟ್ರವನ್ನು ತರುವುದು ಆವಶ್ಯಕವಾಗಿದೆ !