ಹೊಸ ಸಂಸತ್ ಭವನದ ಉದ್ಘಾಟನೆಯ ಕುರಿತು ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ

ರಾಷ್ಟ್ರಪತಿಯವರನ್ನು ಆಹ್ವಾನಿಸದ ಕಾರಣದಿಂದ ವಿರೋಧಿ ಪಕ್ಷದವರಿಂದ ಆಕ್ರೋಶ !

ನವದೆಹಲಿ – ಸಂಸತ್ತಿನ ಹೊಸ ಕಟ್ಟಡ ಮೇ 28 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಹಸ್ತದಿಂದ ಉದ್ಘಾಟನೆಗೊಳ್ಳುತ್ತಿದ್ದರೂ, ಅದು ರಾಷ್ಟ್ರಪತಿಯವರ ಹಸ್ತದಿಂದ ಉದ್ಘಾಟನೆಗೊಳ್ಳುವುದು ಆವಶ್ಯಕವೆಂದು ಹೇಳುತ್ತಾ, ದೇಶಾದ್ಯಂತವಿರುವ 19 ವಿರೋಧಿ ಪಕ್ಷದವರು ಸಂಯುಕ್ತವಾಗಿ ಈ ಕಾರ್ಯಕ್ರಮವನ್ನು ಬಹಿಷ್ಕರಿಸಿದ್ದು, `ಈ ಉದ್ಘಾಟನೆ ರಾಷ್ಟ್ರಪತಿಯ ಹಸ್ತದಿಂದ ಆಗಬೇಕು’ ಎಂದು ಆಗ್ರಹಿಸುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾಯವಾದಿ ಸಿ.ಆರ್. ಜಯಾ ಸುಕೀನ ಇವರು ದಾಖಲಿಸಿದ್ದಾರೆ. ಉದ್ಘಾಟನೆಯು ರಾಷ್ಟ್ರಪತಿಗಳ ಹಸ್ತದಿಂದ ನಡೆಯಲು ಲೋಕಸಭೆಯ ಸಚಿವಾಲಯಕ್ಕೆ ಮಾರ್ಗದರ್ಶನ, ನಿರೀಕ್ಷಣೆ ಅಥವಾ ಸೂಚನೆಯನ್ನು ನೀಡುವಂತೆ ಈ ಅರ್ಜಿಯಲ್ಲಿ ಕೋರಲಾಗಿದೆ.