ಪಣಜಿ (ಗೋವಾ) – ಮೇ 27 ರಂದು ಗೋವಾದ ವಾಸ್ಕೊದಲ್ಲಿ ನಡೆಯಲಿರುವ ‘ಸಿ-20 ಪರಿಷದ್’ನ ಮಾಹಿತಿಯನ್ನು ನೀಡುವ ಪುಸ್ತಕವನ್ನು ಗೋವಾ ರಾಜ್ಯದ ಮುಖ್ಯಮಂತ್ರಿ ಶ್ರೀ. ಪ್ರಮೋದ ಸಾವಂತ ಇವರ ಹಸ್ತದಿಂದ ಪಣಜಿಯ ಸರಕಾರಿ ನಿವಾಸದಲ್ಲಿ ಪ್ರಕಾಶಿಸಲಾಯಿತು. ಈ ಸಮಯದಲ್ಲಿ ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಸಂಶೋಧನೆ ಸಮನ್ವಯಕ ಸೌ. ಶ್ವೇತಾ, ಡಾ. (ಸೌ.) ಅಮೃತಾ ದೇಶಮಾನೆ ಹಾಗೂ ಉದ್ಯಮಿ ಶ್ರೀ. ನಾರಾಯಣ ನಾಡಕರ್ಣಿ ಇವರು ಉಪಸ್ಥಿತರಿದ್ದರು.
ಪಣಜಿಯಲ್ಲಿರುವ ಮುಖ್ಯಮಂತ್ರಿಗಳ ಅಧಿಕೃತ ನಿವಾಸದಲ್ಲಿ ಅಂತರರಾಷ್ಟ್ರೀಯ ‘ಜಿ-20’ಗೆ ಪ್ರತ್ಯೇಕ ಕೊಠಡಿ ಸಿದ್ಧಪಡಿಸಲಾಗಿದೆ. ಈ ಕೊಠಡಿಯಲ್ಲಿ ‘ಸಿ-20 ಪರಿಷದ್’ನ ಮಾಹಿತಿ ಪುಸ್ತಕವನ್ನು ಪ್ರಕಟಿಸಲಾಯಿತು. ಈ ‘ಸಿ-20 ಪರಿಷತ್’ ಅನ್ನು ಗೋವಾ ಸರಕಾರ, ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’, ‘ಇಂಟರನ್ಯಾಶನಲ್ ಸೆಂಟರ್ ಫಾರ್ ಕಲ್ಚರಲ್ ಸ್ಟಡಿಸ್’ ಮತ್ತು ‘ಭಾರತೀಯ ವಿದ್ಯಾ ಭವನ, ನವದೆಹಲಿ’ಯ ಜಂಟಿ ಸಹಯೋಗದಲ್ಲಿ ಆಯೋಜಿಸಲಾಗುತ್ತಿದೆ.
ಮೇ 27 ರಂದು ವಾಸ್ಕೋದಲ್ಲಿ ‘ವೈವಿಧ್ಯತೆ, ಸರ್ವಸಮಾವೇಶಕ ಮತ್ತು ಪರಸ್ಪರ ಗೌರವ’ ಈ ಕುರಿತು ‘ಸಿ-20 ಪರಿಷತ್’ ವಾಸ್ಕೋದಲ್ಲಿ ನಡೆಯಲಿದೆ. ಇದರಲ್ಲಿ ಗೋವಾ ಸಹಿತ ದೇಶ-ವಿದೇಶದ ಗಣ್ಯರು ವಿವಿಧ ವಿಷಯಗಳ ಕುರಿತು ಮಾರ್ಗದರ್ಶನ ಮಾಡಲಿದ್ದಾರೆ. ಈ ಪ್ರಕಟಣೆಯ ನಂತರ ಮಾ. ಮುಖ್ಯಮಂತ್ರಿ ಪ್ರಮೋದ ಸಾವಂತ ಅವರು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾನಿಲಯ ನಡೆಸಿದ ವಿವಿಧ ಅಧ್ಯಾತ್ಮಿಕ ಸಂಶೋಧನೆಗಳನ್ನು ನೋಡಿ ಕಾರ್ಯಗಳ ಬಗ್ಗೆ ತಿಳಿದುಕೊಂಡರು ಮತ್ತು ಈ ಕಾರ್ಯವನ್ನು ಶ್ಲಾಘಿಸಿದರು.
Chief Minister,@DrPramodPSawant launched the event brochure of Civil 20 India,2023 working Group at Altinho.
C20 International Summit organised by Maharshi Adhyatma Vishwavidyalay (MAV),incollaboration with the International Center of Cultural Studies (ICCS) and…1/2 pic.twitter.com/699n2dxx3N— DIP Goa (@dip_goa) May 25, 2023