ಮಂಗಳೂರಿನಲ್ಲಿ ನಡೆಯಲಿರುವ ‘ಹಿಂದೂ ಏಕತಾ ಶೋಭಾಯಾತ್ರೆ’ಗೆ ಎಸ್.ಡಿ.ಪಿ.ಐ. ನಿಂದ ವಿರೋಧ !

ಶೋಭಾಯಾತ್ರೆಯ ಆಯೋಜಕರ ಮೇಲೆ ದೂರು ದಾಖಲಿಸಿ ಬಂಧಿಸುವಂತೆ ಆಗ್ರಹ !

ಮಂಗಳೂರು : ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ 81ನೇ ಜನ್ಮೋತ್ಸವದ ನಿಮಿತ್ತ ಆಯೋಜಿಸಲಾಗಿರುವ ಹಿಂದೂ ಏಕತಾ ಶೋಭಾಯಾತ್ರೆಗೆ ನಿಷೇಧಿತ ಜಿಹಾದಿ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜಕೀಯ ಪಕ್ಷವಾದ ಎಸ್.ಡಿ.ಪಿ.ಐ. ಸಂಘಟನೆಯು ವಿರೋಧ ವ್ಯಕ್ತಪಡಿಸಿದ್ದು, ಆಯೋಜಕರ ವಿರುದ್ಧ ದೇಶದ್ರೋಹದ ಅಡಿಯಲ್ಲಿ ದೂರು ದಾಖಲಿಸಿ ಬಂಧನ ಮಾಡಬೇಕು’ ಎಂದು ಒತ್ತಾಯಸುತ್ತಿದ್ದಾರೆ. (ಅಮಾಯಕ ಜನರ ವಿರುದ್ಧ ಅಪರಾಧ ದಾಖಲಿಸಿ ಅವರನ್ನು ಬಂಧಿಸುವಂತೆ ಒತ್ತಾಯಿಸುವುದು, ಅಪರಾಧವಲ್ಲವೇ ? ಇದಕ್ಕಾಗಿ ಇಂತಹವರಿಗೆ ಬಂಧಿಸಿ ಜೈಲಿಗಟ್ಟಬೇಕು ! – ಸಂಪಾದಕರು)

ಸನಾತನ ಸಂಸ್ಥೆಯ ವತಿಯಿಂದ ಹಿಂದೂ ರಾಷ್ಟ್ರ-ಜಾಗೃತಿ ಅಭಿಯಾನದ ಅಡಿಯಲ್ಲಿ ಶೋಭಾಯಾತ್ರೆಯನ್ನು ಆಯೋಜಿಸಲಾಗಿದ್ದು, ಇದೇ 27 ಮೇ ಶನಿವಾರ ಸಂಜೆ 4 ಗಂಟೆಗೆ ಬಲ್ಮಠ ಜ್ಯೂಸ್ ಜಂಕ್ಷನ್ ಮಾರ್ಗದಿಂದ ಪ್ರಾರಂಭಗೊಳ್ಳಲಿದೆ. ಈ ಶೋಭಾಯಾತ್ರೆ ವಿರುದ್ಧ ಟ್ವೀಟ್ ಮಾಡಿರುವ ಎಸ್.ಡಿ.ಪಿ.ಐ. ನ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಅನ್ವರ್ ಸದತ್ ಬಜತುರ್, ರಾಜ್ಯದ ಮುಖ್ಯಮಂತ್ರಿ ಹಾಗೂ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಟ್ಯಾಗ್ ಮಾಡಿ ‘ಜಾತ್ಯಾತೀತ ಭಾರತದಲ್ಲಿ ಒಂದು ಧರ್ಮಕ್ಕೆ ಸೀಮಿತವಾದ ರಾಷ್ಟ್ರದ ಪರಿಕಲ್ಪನೆಯ ಕಾರ್ಯಕ್ರಮ ಆಯೋಜಿಸುವುದು ರಾಷ್ಟ್ರದ್ರೋಹ ಕೃತ್ಯವಾಗಿದೆ. (ಹಿಂದೂ ರಾಷ್ಟ್ರದ ಅಂಶವನ್ನು ಭಾರತವಿರೋಧಿ ಎಂದು ನಿರ್ಧರಿಸುವವರು ಭಯೋತ್ಪಾದನೆಯ `ಗಜವಾ-ಎ-ಹಿಂದ’ನ (ಭಾರತವನ್ನು ಇಸ್ಲಾಮೀಕರಣ ಮಾಡುವ) ಬಗ್ಗೆ ಚಕಾರವೂ ಎತ್ತುವುದಿಲ್ಲ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ ! – ಸಂಪಾದಕರು) ಈ ಕಾರ್ಯಕ್ರಮಕ್ಕೆ ತಡೆ ನೀಡುವುದರ ಜೊತೆಗೆ ಆಯೋಜಕರ ವಿರುದ್ಧ ದೇಶದ್ರೋಹದ ಅಡಿಯಲ್ಲಿ ದೂರು ದಾಖಲಿಸಿ ಬಂಧನ ಮಾಡಬೇಕು` ಎಂದು ಆಗ್ರಹಿಸಲಾಗಿದೆ.

ಸಂಪಾದಕೀಯ ನಿಲುವು

ರಾಜ್ಯದಲ್ಲಿ ಈಗ ಕಾಂಗ್ರೆಸ್ ಸರಕಾರ ಬಂದಿದ್ದರಿಂದ ಮುಸಲ್ಮಾನ ಪಕ್ಷವಾಗಿರುವ ಎಸ್.ಡಿ.ಪಿ.ಐ. ನಿಂದ ವಿರೋಧವಾಗುವುದು ಆಶ್ಚರ್ಯವೇನಲ್ಲ !