ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ನಾಗರಿಕರು ವಿದ್ಯುತ್ ಬಿಲ್ ಕಟ್ಟುವುದನ್ನು ನಿಲ್ಲಿಸಿದ್ದಾರೆ !

ರಾಜ್ಯದಲ್ಲಿ ಕಾಂಗ್ರೆಸ್ ಉಚಿತ ವಿದ್ಯುತ್ ನೀಡುವ ಭರವಸೆಯ ಪರಿಣಾಮ !

ಬೆಂಗಳೂರು – ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್ ಉಚಿತ ವಿದ್ಯುತ್ ಘೋಷಣೆ ಮಾಡಿತ್ತು. ಈಗ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಕೆಲವೆಡೆ ವಿದ್ಯುತ್ ಬಿಲ್ ಪಾವತಿಸಲು ನಾಗರಿಕರು ನಿರಾಕರಿಸುತ್ತಿರುವುದು ಬೆಳಕಿಗೆ ಬಂದಿದೆ. ರಾಜ್ಯದ ಚಾಮರಾಜನಗರ, ಉಡುಪಿ, ರಾಯಚೂರು, ಕಲಬುರ್ಗಿ ಮುಂತಾದ ಕಡೆ ‘ವಿದ್ಯುತ್ ಬಿಲ್ ಕಟ್ಟಬೇಡಿ’ ಎಂದು ಒಬ್ಬರಿಗೊಬ್ಬರು ಹೇಳುತ್ತಿದ್ದಾರೆ. ಕೆಲವೆಡೆ ವಿದ್ಯುತ್ ಬಿಲ್ ಕಾರ್ಮಿಕರಿಗೆ ‘ನಾವು ಪಾವತಿಸುವುದಿಲ್ಲ’ ಎಂದು ನಾಗರಿಕರು ಹೇಳುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

(ಸೌಜನ್ಯ – News18 Kannada)

1. ಚಾಮರಾಜನಗರ ಜಿಲ್ಲೆ ಯಳಂದೂರು ತಾಲೂಕಿನ ಹೊನ್ನೂರು ಗ್ರಾಮಕ್ಕೆ ವಿದ್ಯುತ್ ಬಿಲ್ ವಿತರಿಸಲು ಬಂದಿದ್ದ ನೌಕರರನ್ನು ವಾಪಸ್ ಕಳುಹಿಸಲಾಗಿದೆ. ‘ಕಾಂಗ್ರೆಸ್ ಸರಕಾರ ಉಚಿತ ವಿದ್ಯುತ್ ನೀಡುವ ಭರವಸೆಯನ್ನು ಕೂಡಲೇ ಈಡೇರಿಸಬೇಕು’ ಎಂದು ನಾಗರಿಕರು ಆಗ್ರಹಿಸಿದ್ದಾರೆ.

2. ಕಲಬುರಗಿ ಪಟ್ಟಣದ ತಾರಫೌಲ್ ಬಡಾವಣೆಯ ನಾಗರಿಕರು ಪಾವತಿ ನೀಡುವ ಸಿಬ್ಬಂದಿಯನ್ನು ‘ನೀವು ನಮ್ಮಲ್ಲಿಗೆ ಯಾಕೆ ಬಂದಿದ್ದೀರಿ? ನಾವು ವಿದ್ಯುತ್ ಬಿಲ್ ಕಟ್ಟುವುದಿಲ್ಲ’, ಎಂದು ಹೇಳುತ್ತಿರುವುದು ಕಂಡು ಬರುತ್ತಿದೆ. ಇದರಿಂದ ಕೆಲವೆಡೆ ವಿವಾದಕ್ಕೂ ಕಾರಣವಾಗಿದೆ.

3. ಉಡುಪಿಯ ಸಾಮಾಜಿಕ ಕಾರ್ಯಕರ್ತ ವಾಸುದೇವ ಭಟ್ ತಮ್ಮ ವಿದ್ಯುತ್ ಮೀಟರ್ ಬೋರ್ಡ್ ಮೇಲೆ ‘ಜೂನ್ ನಿಂದ ವಿದ್ಯುತ್ ಬಿಲ್ ಕಟ್ಟಬೇಡಿ’ ಎಂಬ ಪೋಸ್ಟರ್ ಅಂಟಿಸಿದ್ದಾರೆ. ”ಕಾಂಗ್ರೆಸ್ ಘೋಷಿಸಿರುವ 200 ಯೂನಿಟ್ ಉಚಿತ ವಿದ್ಯುತ್ ಯೋಜನೆಗೆ ನಾನು ಅರ್ಹನಾಗಿದ್ದೇನೆ. ಹೀಗಾಗಿ ಜೂನ್‌ನಿಂದ ವಿದ್ಯುತ್‌ ಬಿಲ್‌ ಪಾವತಿಸುವುದಿಲ್ಲ’ ಎಂದು ಹೇಳಿಕೊಂಡಿದ್ದಾರೆ.

ಸಂಪಾದಕೀಯ ನಿಲುವು

ಸಾರ್ವಜನಿಕರಿಗೆ ಎಲ್ಲವನ್ನೂ ಉಚಿತವಾಗಿ ನೀಡುವ ಅಭ್ಯಾಸವನ್ನು ಮೈಗೂಡಿಸಿಕೊಂಡ ಪರಿಣಾಮ ಇದಾಗಿದೆ. ಇಂತಹ ಆಶ್ವಾಸನೆಗಳನ್ನು ನೀಡಿ ಅಧಿಕಾರ ಪಡೆಯುವ ರಾಜಕೀಯ ಪಕ್ಷಗಳಿಂದಲೇ ಉಚಿತ ವಿದ್ಯುತ್ ನೀಡಲು ತಗಲುವ ವೆಚ್ಚವನ್ನು ವಸೂಲಿ ಮಾಡುವ ಕಾನೂನನ್ನು ಜಾರಿಗೊಳಿಸುವ ಅಗತ್ಯವಿದೆ !