ಉತ್ತರಪ್ರದೇಶದಲ್ಲಿ ಹಿಂದೂ ಯುವತಿಯನ್ನು ಮಾರಾಟ ಮಾಡಲು ಯತ್ನಿಸಿದ ನಾಲ್ವರು ಮತಾಂಧರ ಬಂಧನ !

ನಾಲ್ವರು ಮತಾಂಧರ ಬಂಧನ

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಹಿಂದೂ ಯುವತಿಯನ್ನು ಮಾರಾಟ ಮಾಡಲು ಯತ್ನಿಸಿದ ನಾಲ್ವರು ಮತಾಂಧರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳ ಹೆಸರು ಮೊಹಮ್ಮದ್ ಅಮೀರ್, ಮೊಹಮ್ಮದ್ ಜಬೀರ್, ಮೊಹಮ್ಮದ್ ನಾದಿರ್ ಮತ್ತು ಮೊಹಮ್ಮದ್ ವಹಾಬ್ ಎಂದಿದ್ದು ಮೊಹಮ್ಮದ್ ಜಬೀರ್ ಈತನು ಮುಖ್ಯ ಆರೋಪಿ ಮೊಹಮ್ಮದ್ ಅಮೀರ್‍‌ನ ತಂದೆಯಾಗಿದ್ದಾನೆ. ಜೀಶಾನ್ ಎಂಬ ಆರೋಪಿ ತಲೆಮರೆಸಿಕೊಂಡಿದ್ದಾನೆ.

ಮೊಹಮ್ಮದ್ ಅಮೀರ್ ಎಂಬ ಯುವಕನು ಹಿಂದೂ ಹೆಸರನ್ನು ಇಟ್ಟುಕೊಂಡು ಹಿಂದೂ ಹುಡುಗಿಯನ್ನು ಪ್ರೀತಿಯ ಬಲೆಯಲ್ಲಿ ಸೆಳೆದು ಅವಳೊಂದಿಗೆ ದೈಹಿಕ ಸಂಬಂಧವನ್ನು ಇಟ್ಟುಕೊಂಡನು. ಕೊನೆಗೆ ಹಿಂದೂ ಹುಡುಗಿಗೆ ಅಮೀರ್‌ನ ನಿಜವಾದ ಗುರುತು ತಿಳಿಯಿತು. ನಂತರ ಅಮೀರ್ ಆಕೆಯ ಮೇಲೆ ಮತಾಂತರಗೊಳ್ಳುವಂತೆ ಒತ್ತಡ ಹೇರಿದ್ದ. ಇದನ್ನು ಸಂತ್ರಸ್ತೆ ನಿರಾಕರಿಸಿದ್ದರಿಂದ ಅಮೀರನು ಆಕೆಯನ್ನು ಅಪಹರಿಸಿದ. ಮೇ 19 ರ ರಾತ್ರಿ, ಹುಡುಗಿಯು ತನ್ನ ಅಪಹರಣವಾಗಿದೆ ಎಂದು ಪೊಲೀಸರಿಗೆ ತಿಳಿಸಿದಳು ಮತ್ತು ತನ್ನ ಕೊಲೆಯಾಗಬಹುದು ಎಂದು ಹೇಳುತ್ತಾ ತನ್ನನ್ನು ಉಳಿಸುವಂತೆ ಕೇಳಿಕೊಂಡಳು. ಅದರ ನಂತರ, 125 ಪೊಲೀಸರ ಪಡೆಯು ಅವಳನ್ನು ಹುಡುಕಲು ಹೊರಟಿತು. ಅಪಹರಣಕಾರರು ಆಕೆಯನ್ನು ಐಶ್‌ಬಾಗ್ ರೈಲು ನಿಲ್ದಾಣಕ್ಕೆ ಕರೆದೊಯ್ದು ಅಲ್ಲಿ ಅವಧ್-ಅಸ್ಸಾಂ ಎಕ್ಸ್‌ಪ್ರೆಸ್ ಗೆ ಹತ್ತಿದ್ದಾರೆ. ಪೊಲೀಸರು ಬರುವಷ್ಟರಲ್ಲಿ ರೈಲು ಹೊರಟಿತ್ತು. ಪೊಲೀಸರು ಸಂಪರ್ಕಿಸಿ ಮುಂದಿನ ಹರೌನಿ ನಿಲ್ದಾಣದಲ್ಲಿ ರೈಲನ್ನು ನಿಲ್ಲಿಸಿದರು ಮತ್ತು ಹಿಂದೂ ಹುಡುಗಿಯನ್ನು ಹುಡುಕಿದರು ಮತ್ತು ಅಪಹರಣಕಾರರನ್ನು ಬೆಳಿಗ್ಗೆ 4 ಗಂಟೆಗೆ ಬಂಧಿಸಿದರು.

ಗ್ರಾಮೀಣ ಭಾಗದಲ್ಲಿ ಹೆಣ್ಣು ಮಕ್ಕಳನ್ನು ಮಾರಾಟ ಮಾಡುತ್ತಿದ್ದ ಆರೋಪಿ ತಂದೆ ಮತ್ತು ಮಗ !

ಪೊಲೀಸರ ತನಿಖೆಯ ನಂತರ, ಮೊಹಮ್ಮದ್ ಜಬೀರ್ ಮತ್ತು ಮೊಹಮ್ಮದ್ ಅಮೀರ್ ಈ ಇಬ್ಬರು ತಂದೆ ಮತ್ತು ಮಗ ಗ್ರಾಮೀಣ ಪ್ರದೇಶದ ಯುವತಿಯರನ್ನು ಪ್ರೀತಿಯ ಬಲೆಗೆ ಸಿಲುಕಿಸಿ ಅವರಿಗೆ ಮುಂಬಯಿಗೆ ಸುತ್ತಾಡಲು ಕರೆದೊಯ್ಯುತ್ತಾರೆ. ಅಲ್ಲಿ ಹುಡುಗಿಯನ್ನು ಮಾರುತ್ತಾರೆ. ನಂತರ ಅವಳನ್ನು ಖರೀದಿಸುವ ಸಂಬಂಧಿತ ವ್ಯಕ್ತಿಗೆ ಹಸ್ತಾಂತರಿಸುತ್ತಿದ್ದರು.

ಸಂಪಾದಕರ ನಿಲುವು

ಇದರಿಂದ ಮತಾಂಧರು ಲವ್‌ ಜಿಹಾದ್ ವಿರೋಧಿ ಕಾನೂನಿಗೂ ಬಗ್ಗುವುದಿಲ್ಲ ಎಂಬುದು ಸ್ಪಷ್ಟವಾಗುತ್ತದೆ! ಇಂತಹವರ ಮನೆಗಳ ಮೇಲೆ ಬುಲ್ಡೋಜರ್ ಹತ್ತಿಸಲು ಯಾರಾದರೂ ಒತ್ತಾಯಿಸಿದರೆ, ಅದರಲ್ಲಿ ತಪ್ಪೇನು ?