`ಜಮೀಯತ್ ಉಲೇಮಾ-ಎ-ಹಿಂದ್’ನ ಅಧ್ಯಕ್ಷ ಸೈಯದ್ ಅರ್ಷದ್ ಮದನಿ ವಿಷಕಾರಿದ !
ಮುಂಬಯಿ : ಕಾಂಗ್ರೆಸ್ ಪಕ್ಷವು ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಡುಗಡೆ ಮಾಡಿರುವ ಘೋಷಣಾಪತ್ರದಲ್ಲಿ ಬಜರಂಗ ದಳವನ್ನು ನಿಷೇಧಿಸುವುದಾಗಿ ಭರವಸೆ ನೀಡಿದೆ. ಒಂದು ವೇಳೆ 70 ವರ್ಷಗಳ ಹಿಂದೆಯೇ ಈ ನಿರ್ಧಾರ ಕೈಗೊಂಡಿದ್ದರೆ ಇಂದು ದೇಶ ಅವನತಿಯತ್ತ ಸಾಗುತ್ತಿರಲಿಲ್ಲ, ಎಂದು ಜಮೀಯತ್ ಉಲೇಮಾ-ಎ-ಹಿಂದ್ ಅಧ್ಯಕ್ಷ ಸೈಯದ್ ಅರ್ಷದ್ ಮದನಿ ಹೇಳಿದ್ದಾರೆ.
ಮದನಿ ತಮ್ಮ ಮಾತನ್ನು ಮುಂದುವರೆಸುತ್ತಾ, ಕಾಂಗ್ರೆಸ್ ತನ್ನ ಘೋಷಣಾಪತ್ರದಲ್ಲಿ ನಿಷೇಧದ ಭರವಸೆ ನೀಡಿ ತಪ್ಪು ಮಾಡಿದೆ ಎಂದೂ ಹೇಳಲಾಗುತ್ತಿದೆ. ನನಗೆ ಇದು ತಪ್ಪೆಂದು ಅನಿಸುವುದಿಲ್ಲ, ಆದರೆ ತಪ್ಪನ್ನು ತಿದ್ದುವ ಪ್ರಯತ್ನ ಎಂದು ನಾನು ಭಾವಿಸುತ್ತೇನೆ’ ಎಂದಿದ್ದಾರೆ. (ಕಾಂಗ್ರೆಸ್ ಜಿಹಾದಿ ಸಂಘಟನೆಗಳನ್ನು ನಿಷೇಧಿಸಲಿಲ್ಲ, ಇದು ದೊಡ್ಡ ತಪ್ಪು! ಅಲ್ಲದೆ, ಮುಸ್ಲಿಂ ಸಂಘಟನೆಗಳು, ಅವರ ನಾಯಕರು, ಧರ್ಮಗುರುಗಳು ಎಂದಿಗೂ ಜಿಹಾದಿ ಭಯೋತ್ಪಾದಕರ ವಿರುದ್ಧ ಚಕಾರವೆತ್ತುವುದಿಲ್ಲ ಅಥವಾ ಅವರು ಸಂಘಟಿತವಾಗಿ ಅವರನ್ನು ವಿರೋಧಿಸುವುದಿಲ್ಲ. ಬದಲಾಗಿ ಅವರು ಜಿಹಾದಿ ಸಂಘಟನೆಗಳನ್ನು ನಿಷೇಧಿಸಿದರೆ ಅದನ್ನು ವಿರೋಧಿಸುತ್ತಾರೆ ಎಂಬುದನ್ನು ಗಮನಿಸಿ ! – ಸಂಪಾದಕರು)
(ಸೌಜನ್ಯ :TV9 Bharatvarsh)
ಸಂಪಾದಕರ ನಿಲುವು
|