ಇಂದಿನಿಂದ 2 ಸಾವಿರ ರೂಪಾಯಿ ನೋಟುಗಳ ಬದಲಾಯಿಸಿ ಕೊಡಲಾಗುವುದು !

ಬ್ಯಾಂಕ್‌ಗಳಲ್ಲಿ ಜನದಟ್ಟಣೆ ಮಾಡದಂತೆ ಆರ್‌ಬಿಐ ಮನವಿ

RBI ಗವರ್ನರ್ ಶಕ್ತಿಕಾಂತ

ನವದೆಹಲಿ – ಮೇ 23 ರಿಂದ ದೇಶಾದ್ಯಂತ ಬ್ಯಾಂಕ್‌ಗಳು 2,000 ರೂಪಾಯಿ ನೋಟುಗಳನ್ನು ಬದಲಾಯಿಸಲು ಪ್ರಾರಂಭಿಸಿದೆ. ಈ ನೋಟುಗಳನ್ನು ಸೆಪ್ಟೆಂಬರ್ 30ರೊಳಗೆ ಬದಲಾಯಿಸಿಕೊಳ್ಳುವಂತೆ ಆರ್‌ಬಿಐ ಈ ಹಿಂದೆ ಮನವಿ ಮಾಡಿತ್ತು. ಈ ಕುರಿತು ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ ಅವರು, ಸೆಪ್ಟೆಂಬರ್ 30ರೊಳಗೆ ನಾವು ಠೇವಣಿ ಇಡಲು ಸಾಧ್ಯವಾಗದ ನೋಟುಗಳ ಬಗ್ಗೆ ಪ್ರತ್ಯೇಕ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಹಾಗಾಗಿ ನೋಟುಗಳನ್ನು ಬದಲಾಯಿಸಿಕೊಳ್ಳಲು ಬ್ಯಾಂಕ್‌ ಗಳಲ್ಲಿ ಜನದಟ್ಟಣೆ ಮಾಡದಿರಿ. ಶಾಂತಿಯಿಂದ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಹೋಗಿ; ಆದರೆ ಸಮಯವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಮನವಿ ಮಾಡಿದ್ದಾರೆ.

ಈ ನಿಟ್ಟಿನಲ್ಲಿ ರಿಸರ್ವ್ ಬ್ಯಾಂಕ್ ಬ್ಯಾಂಕ್ ಗಳಿಗೆ ಕೆಲವು ಮಾರ್ಗಸೂಚಿಗಳನ್ನು ನೀಡಿದೆ. ಇದರಲ್ಲಿ ಬ್ಯಾಂಕುಗಳಿಗೆ ಬಿಸಿಲಿನ ಹಿನ್ನಲೆಯಲ್ಲಿ ಜನರಿಗೆ ನೆರಳಿನ ಪ್ರದೇಶಗಳು ಮತ್ತು ನೀರನ್ನು ಒದಗಿಸುವಂತೆ ಸಲಹೆಗಳನ್ನು ನೀಡಿದೆ, ಎಷ್ಟು ನೋಟುಗಳನ್ನು ಬದಲಾಯಿಸಲಾಗಿದೆ ಮತ್ತು ಎಷ್ಟು ಠೇವಣಿ ಮಾಡಲಾಗಿದೆ ಇದರ ಬಗ್ಗೆ ಲೆಕ್ಕಾಚಾರದ ವ್ಯವಸ್ಥಿತವಾಗಿ ಇಡಬೇಕು, ಇತ್ಯಾದಿ ಸೂಚನೆಗಳು ಒಳಗೊಂಡಿದೆ.

(ಸೌಜನ್ಯ : Republic World)