‘ಭಯೋತ್ಪಾದಕರ ದಾಳಿಯಲ್ಲಿ ಭಾಜಪದ ಒಬ್ಬ ನಾಯಕನು ಇಲ್ಲಿಯವರೆಗೆ ಸತ್ತಿಲ್ಲಂತೆ !’ – ಮುಖ್ಯಮಂತ್ರಿ ಸಿದ್ದರಾಮಯ್ಯ

  • ರಾಜ್ಯದ ಕಾಂಗ್ರೆಸ್ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಖೇದಕರ ಹೇಳಿಕೆ !

  • ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಭಯೋತ್ಪಾದಕರ ದಾಳಿಗೆ ಬಲಿಯಾದ ಉದಾಹರಣೆ ಕೊಟ್ಟ ಸಿದ್ದರಾಮಯ್ಯ !

ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು – ಪ್ರಧಾನಿ ನರೇಂದ್ರ ಮೋದಿ ಕೇವಲ ಭಯೋತ್ಪಾದನೆಯ ಬಗ್ಗೆ ಮಾತನಾಡುತ್ತಾರೆ; ಆದರೆ ಇಲ್ಲಿಯವರೆಗೂ ಭಾಜಪದ ಒಬ್ಬನೇ ಒಬ್ಬ ನಾಯಕ ಉಗ್ರರ ದಾಳಿಗೆ ಬಲಿಯಾಗಲಿಲ್ಲ. ಕಾಂಗ್ರೆಸ್ ಭಯೋತ್ಪಾದನೆಯನ್ನು ಪ್ರೋತ್ಸಾಹಿಸುತ್ತಿದೆ ಎಂದು ಭಾಜಪ ನಿರಂತರವಾಗಿ ಹೇಳುತ್ತಿದೆ; ಆದರೆ ನಮ್ಮ ನಾಯಕರಾದ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಅವರು ಭಯೋತ್ಪಾದಕರ ದಾಳಿಗೆ ಬಲಿಯಾಗಿದ್ದಾರೆ ಎಂದು ರಾಜ್ಯದ ಕಾಂಗ್ರೆಸ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೇ ೨೧ ರಂದು ರಾಜೀವ್ ಗಾಂಧಿಯವರ ಪುಣ್ಯತಿಥಿಯಂದು ಹೇಳಿಕೆ ನೀಡಿದ್ದರು. (ದೆಹಲಿಯ ಬಾಟಲಾ ಹೌಸ್‌ನಲ್ಲಿ ಪೊಲೀಸರು ಜಿಹಾದಿ ಭಯೋತ್ಪಾದಕರನ್ನು ಕೊಂದಾಗ ಸೋನಿಯಾ ಗಾಂಧಿಯವರು ಕಣ್ಣಿರು ಹಾಕಿದ್ದರು, ಇದರಿಂದ ಭಯೋತ್ಪಾದಕರ ಬಗ್ಗೆ ಯಾರಿಗೆ ಕಾಳಜಿ ಇದೆ ? ಇದು ಸಾರ್ವಜನಿಕರಿಗೆ ತಿಳಿದಿದೆ ! – ಸಂಪಾದಕರು)

ಸಂಪಾದಕರ ನಿಲುವು

  • ಇಂದಿರಾ ಗಾಂಧಿಯವರು ತಮ್ಮ ಸ್ವಾರ್ಥಕ್ಕಾಗಿ ಖಲಿಸ್ತಾನಿಗಳನ್ನು ಸೊಪ್ಪುಹಾಕಿದ್ದರು ಮತ್ತು ನಂತರ ಅದು ತಲೆ ನೋವುವಾಗಿ ಪರಿಣಮಿಸಿದಾಗ ಖಲಿಸ್ತಾನಿಗಳನ್ನು ಮುಗಿಸಲು ಪ್ರಯತ್ನಿಸಿದರಿಂದ, ಇಂದಿರಾ ಗಾಂಧಿಯವರ ಹತ್ಯೆ ಮಾಡಲಾಯಿತು. ಹಾಗೆಯೇ ಇಂದಿರಾಗಾಂಧಿಯವರು ‘ಎಲ್‌ಟಿಟಿಇ’ ಸಂಘಟನೆಗೆ ಸಹಾಯ ಮಾಡಿದ್ದರೆ, ರಾಜೀವ್ ಗಾಂಧಿ ಅದನ್ನು ನಾಶಮಾಡಲು ಆರಂಭಿಸಿದ ಕಾರಣಕ್ಕೆ ‘ಎಲ್‌ಟಿಟಿಇ’ಯು ರಾಜೀವ್ ಗಾಂಧಿಯವರನ್ನು ಸಾಯಿಸಿದರು ಇದು ಕಾಂಗ್ರೆಸ್‌ನವರು ಏಕೆ ಹೇಳುವುದಿಲ್ಲ ?
  • ಭಯೋತ್ಪಾದಕರ ದಾಳಿಯಲ್ಲಿ ಯಾರ ಪ್ರಾಣ ಹೋಗಿದೆ ಅಥವಾ ಹೋಗಿಲ್ಲ ಎಂದು ಹೇಳುವ ಬದಲು ಕಾಂಗ್ರೇಸ್ ಇನ್ನುವರೆಗೆ ಭಯೋತ್ಪಾದಕರ ಪ್ರಾಣ ಎಕೆ ತೆಗೆಯಲಿಲ್ಲ ? ಎಂದು ಸಿದ್ದರಾಮಯ್ಯ ಅವರು ಸಾರ್ವಜನಿಕರಿಗೆ ಉತ್ತರಿಸಬೇಕು !