ಕಾಶ್ಮೀರದ ಪೂಂಛದಿಂದ 35 ಕಿ.ಮೀ ದೂರದಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಭಯೋತ್ಪಾದಕರ ಶಿಬಿರ ಇರುವುದು ಬಯಲು !

ಪಾಕಿಸ್ತಾನ ಸೈನ್ಯಾಧಿಕಾರಿ ಗಾಝಿ ಶಹಜಾದಈ ನೆಲೆಯ ಮುಖಂಡ

ಪೂಂಛ (ಜಮ್ಮೂ-ಕಾಶ್ಮೀರ) – ಇಲ್ಲಿಂದ 35 ಕಿಲೋಮೀಟರ ದೂರದಲ್ಲಿ ಗಡಿರೇಖೆಯಾಚೆಗೆ ಅಂದರೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಸುದನೋತಿಯಲ್ಲಿ ಒಂದು ಹೊಸ ಭಯೋತ್ಪಾದಕ ನೆಲೆ ಕಾರ್ಯನಿರತವಾಗಿರುವ ಬಗ್ಗೆ ಗುಪ್ತಚರ ಇಲಾಖೆಗೆ ಮಾಹಿತಿ ದೊರಕಿದೆ. ಈ ನೆಲೆ ಹಿಜಬುಲ್ ಮುಜಾಹಿದೀನ ಭಯೋತ್ಪಾದಕ ಸಂಘಟನೆಯದಾಗಿದ್ದು, ಪಾಕಿಸ್ತಾನಿ ಸೈನ್ಯಾಧಿಕಾರಿ ಗಾಝಿ ಶಹಜಾದ ಇದನ್ನು ನಡೆಸುತ್ತಿದ್ದಾನೆ.

1. ಪಾಕಿಸ್ತಾನ ಸರಕಾರದ ಎಲ್ಲ ಹೇಳಿಕೆಗಳ ಬಳಿಕವೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಪ್ರದೇಶ ಮತ್ತು ಮುಝಫ್ಫರಾಬಾದನಲ್ಲಿರುವ ಭಯೋತ್ಪಾದಕ ನೆಲೆಗಳು ಮುಚ್ಚಲ್ಪಟ್ಟಿಲ್ಲ.

2. ಮುಝಫ್ಫರಾಬಾದ ನಗರದಿಂದ 10 ಕಿ.ಮೀ ಅಂತರದಲ್ಲಿ ನೀಲಂ ರಸ್ತೆಯ ಹತ್ತಿರ ಕಳೆದ ಅನೇಕ ವರ್ಷಗಳಿಂದ ಭಯೋತ್ಪಾದಕ ನೆಲೆಗಳು ಕಾರ್ಯನಿರತವಾಗಿದೆ.

3. ಪಾಕಿಸ್ತಾನಿ ಸೈನ್ಯ ಮತ್ತು ಸರಕಾರಗಳ ಸಾರ್ವಜನಿಕ ಸಂಕೇತದ ಮೇರೆಗೆ ಕಾರ್ಯನಿರ್ವಹಿಸುತ್ತಿರುವ ಈ ಭಯೋತ್ಪಾದಕರ ತಾಣಗಳು ಜಮ್ಮೂ-ಕಾಶ್ಮೀರದಲ್ಲಿ ಭಯೋತ್ಪಾದಕ ಘಟನೆಗಳನ್ನು ಕೈಗೊಳ್ಳುತ್ತಿದೆ.

4. `ದಕ್ಷಿಣ ಏಷ್ಯಾ ಭಯೋತ್ಪಾದಕ ಪೋರ್ಟಲ್’ ಅನುಸಾರ ಪಾಕಿಸ್ತಾನದಲ್ಲಿ 72 ಭಯೋತ್ಪಾದಕ ಪ್ರಶಿಕ್ಷಣ ಶಿಬಿರಗಳಿವೆ. ಅದರಲ್ಲಿ ಅಲ್- ಕಾಯ್ದಾ 55 ಶಿಬಿರಗಳನ್ನು ನಡೆಸುತ್ತಿದೆ.

ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಹಿಜಬುಲ್ ಮುಜಾಹಿದೀನ, ಲಷ್ಕರ-ಎ-ತೋಯಬಾ ಮತ್ತು ಜೈಶ-ಎ- ಮಹಮ್ಮದ ಈ ಭಯೋತ್ಪಾದಕ ಸಂಘಟನೆಗಳ ಶಿಬಿರಗಳಿವೆ. ಈ ಶಿಬಿರಗಳಿಂದ ಪ್ರಶಿಕ್ಷಣ ಪಡೆದುಕೊಳ್ಳುವ ಭಯೋತ್ಪಾದಕರಿಗಾಗಿ `ಐ.ಎಸ್.ಐ’ ಈ ಪಾಕಿಸ್ತಾನ ಗುಪ್ತಚರ ಇಲಾಖೆ `ಲಾಂಚಿಂಗ್ ಪ್ಯಾಡ್’ ನಂತೆ ಪಾಕಿಸ್ತಾನಿ ಸೈನ್ಯದ ಸಹಾಯದಿಂದ ಅವರಿಗೆ ಭಾರತ-ಪಾಕಿಸ್ತಾನ ಗಡಿರೇಖೆಯನ್ನು ದಾಟಲು ಸಹಾಯ ಮಾಡುತ್ತದೆ.

ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಶೇ. 95 ರಷ್ಟು ಜನತೆ ಭಯೋತ್ಪಾದಕರ ವಿರುದ್ಧ

ಪಾಕಿಸ್ತಾನ ಆಕ್ರಮಿತ ಸುಮಾರು 40 ಲಕ್ಷ ಜನಸಂಖ್ಯೆಯಲ್ಲಿ ಶೇ 95 ರಷ್ಟು ಜನತೆ ಭಾರತದಲ್ಲಿ ಭಯೋತ್ಪಾದಕತೆಯನ್ನು ಹರಡುವ ಪಾಕಿಸ್ತಾನದ ಸಂಚನ್ನು ವಿರೋಧಿಸುತ್ತಾರೆ. `ಭಾರತದೊಂದಿಗೆ ಯುದ್ಧವನ್ನು ಮಾಡಿ ನಮಗೆ ಏನೂ ಲಾಭವಿಲ್ಲ’ ಎಂದು ಅಲ್ಲಿನ ಜನರ ಅಭಿಪ್ರಾಯವಾಗಿದೆ; ಆದರೆ ಪಾಕಿಸ್ತಾನ ಸರಕಾರ ಮತ್ತು ಸೈನ್ಯ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಜನತೆಯ ಧ್ವನಿಯನ್ನು ಜಗತ್ತಿನ ಎದುರಿಗೆ ಬರಲು ಬಿಡುತ್ತಿಲ್ಲ. `ಗ್ಲೋಬಲ ವಾಚ್’ ಈ ಸಂಘಟನೆಯ ಅಭಿಪ್ರಾಯದಂತೆ ಕಳೆದ ವರ್ಷ ಇಲ್ಲಿ 1 ಸಾವಿರದ 200 ಜನರಿಗೆ ಅಕ್ರಮವಾಗಿ ಬಂಧಿಸಲಾಗಿತ್ತು.

ಸಂಪಾದಕರ ನಿಲುವು

ಇದರಿಂದ ಪಾಕಿಸ್ತಾನಿ ಸೈನ್ಯದ ಉಸ್ತುವಾರಿಯಡಿಯಲ್ಲಿಯೇ ಜಿಹಾದಿ ಭಯೋತ್ಪಾದಕತೆ ಬೆಳೆಯುತ್ತಿದೆಯೆಂದು ಮತ್ತೊಮ್ಮೆ ಬಯಲಾಗಿದೆ ! ಇನ್ನೆಷ್ಟು ಸಾಕ್ಷಿಗಳು ಬೆಳಕಿಗೆ ಬಂದನಂತರ ಭಾರತ ಸರಕಾರ ಪಾಕಿಸ್ತಾನದ ಮೇಲೆ ಕ್ರಮ ಕೈಕೊಳ್ಳುವುದು ?