ಹಳೆಯ ಕಟ್ಟಡಕ್ಕಿಂತ 17 ಸಾವಿರ ಚೌರಸ ಮೀಟರ ದೊಡ್ಡದು
ನವ ದೆಹಲಿ – ಪ್ರಧಾನಮಂತ್ರಿ ನರೇಂದ್ರಮೋದಿಯವರ ಶುಭಹಸ್ತದಿಂದ ಮೇ 28 ರಂದು ಹೊಸ ಸಂಸತ್ತು ಭವನದ ಉದ್ಘಾಟನೆ ಮಾಡಲಾಗುವುದು. `ಸೆಂಟ್ರಲ್ ವ್ಹಿಸ್ಟಾ ಯೋಜನೆ’ ಅಡಿಯಲ್ಲಿ ಈ ಕಟ್ಟಡ ಕಟ್ಟಲಾಗಿದೆ. ಡಿಸೆಂಬರ 10, 2020 ರಂದು ಹೊಸ ತ್ರಿಕೋನ ಆಕಾರದ ಸಂಸತ್ತು ಭವನದ ಅಡಿಪಾಯವನ್ನು ಮಾಡಲಾಗಿದ್ದು, ಜನೇವರಿ 12, 2021 ರಂದು ಭವನದ ಕಟ್ಟಡ ಕಾಮಗಾರಿಯನ್ನು ಪ್ರಾರಂಭಿಸಲಾಗಿತ್ತು.
ಸಧ್ಯದ ಸಂಸತ್ತು ಭವನ 95 ವರ್ಷಗಳಷ್ಟು ಹಿಂದೆ 1927 ರಂದು ಕಟ್ಟಲಾಗಿದೆ. ಕೇಂದ್ರಸರಕಾರವು ಸಂಸತ್ತಿನಲ್ಲಿ, ಈ ಕಟ್ಟಡ ಅಧಿಕ ಪ್ರಮಾಣದಲ್ಲಿ ಉಪಯೋಗಿಸಲಾಗಿತ್ತು ಮತ್ತು ಅದು ಹಾಳಾಗುತ್ತಿದೆ. ಇದರೊಂದಿಗೆ ಲೋಕಸಭೆಯಲ್ಲಿ ಹೊಸ ಧೋರಣೆಯ ಬಳಿಕ ಹೆಚ್ಚುತ್ತಿರುವ ಸಂಸದರಿಗೆ ಕುಳಿತುಕೊಳ್ಳಲು ಹಳೆಯ ಕಟ್ಟಡದಲ್ಲಿ ಸಾಕಾಗುವಷ್ಟು ಸ್ಥಳಾವಕಾಶವಿಲ್ಲ ಎಂದು ಹೇಳಿದರು.
On May 28, PM Narendra Modi is set to inaugurate the new Parliament building. The new parliament has the capacity to accommodate more than 1,200 members of parliament. The govt stated that the new building embodies the essence of a self-reliant India.@niyamikas with more inputs pic.twitter.com/4FEGHZoUKm
— TIMES NOW (@TimesNow) May 19, 2023
ನೂತನ ಸಂಸತ್ತು ಕಟ್ಟಡದ ವೈಶಿಷ್ಟ್ಯಗಳು * 4 ಅಂತಸ್ಥಿನ ಕಟ್ಟಡವಾಗಿದ್ದು, ಭೂಕಂಪದ ಪರಿಣಾಮ ಬೀರುವುದಿಲ್ಲ ! * 64 ಸಾವಿರ 500 ಚೌರಸ ಮೀಟರ ಕ್ಷೇತ್ರಫಲದಲ್ಲಿ ಈ ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ. * 3 ಬಾಗಿಲುಗಳಿದ್ದು, `ಜ್ಞಾನ ದ್ವಾರ’, `ಶಕ್ತಿ ದ್ವಾರ’ ಮತ್ತು `ಕರ್ಮ ದ್ವಾರ’ ಎಂದು ಹೆಸರಿಡಲಾಗಿದೆ ! * ಸಂಸದರು ಮತ್ತು ಅತ್ಯುನ್ನತ ವ್ಯಕ್ತಿಗಳಿಗಾಗಿ ಪ್ರತ್ಯೇಕ ಪ್ರವೇಶದ ವ್ಯವಸ್ಥೆ ! |
ಸಧ್ಯದ ಮತ್ತು ಹೊಸ ಸಂಸತ್ತು ಭವನದ ಮಹತ್ವಪೂರ್ಣ ವ್ಯತ್ಯಾಸ !
ಆಸನಗಳ ಕ್ಷಮತೆ ಸಂಸತ್ತು ಸಧ್ಯದ ಕಟ್ಟಡ ನೂತನ ಕಟ್ಟಡ
ಲೋಕಸಭೆ 590 888
ರಾಜ್ಯಸಭೆ 280 384
ಸಂಯುಕ್ತ ಅಧಿವೇಶನ 436 ಕ್ಕೂ ಹೆಚ್ಚು ಹೆಚ್ಚುವರಿ ಸ್ಥಳ 1272